ಅವಾಂತರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಅವಾಂತರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಏಪ್ರಿಲ್ 27, 2016

ಅಕ್ಷರ ಅವಾಂತರ ೧೩



ಶಿರಸಿಯಲ್ಲಿ ಸ್ಟುಡಿ’ಓ’ !!

ಮಂಗಳವಾರ, ನವೆಂಬರ್ 27, 2012

ಅಕ್ಷರ ಅವಾಂತರ ೧೨ - ’ಟ’ ಬರೆಯುವ ನೂತನ ವಿಧಾನ!


’ಇನ್ಸ್ಟಿಟ್ಯೂಟ್’ ಎಂದು ಬರೆದದ್ದು ಮೊದಲೇ ತಪ್ಪು. ’ಟ’ ಬರೆಯುವ ಹೊಸ ವಿಧಾನ ಬೇರೆ ಕಂಡುಹುಡುಕಿದ್ದಾರೆ! ಸೋಜಿಗದ ವಿಷಯವೆಂದರೆ ಇದು ’ಫ್ಲೆಕ್ಸ್ ಪ್ರಿಂಟ್’ ಆಗಿರುವುದರಿಂದ ಗಣಕಯಂತ್ರದಲ್ಲಿ ವಿನ್ಯಾಸ ಮಾಡಿದ ಬಳಿಕವೇ ಪ್ರಿಂಟ್ ತೆಗೆಯಲಾಗಿರುವುದು. ಅದ್ಯಾವ ಕನ್ನಡ ತಂತ್ರಾಂಶದಲ್ಲಿ ’ಟ’ ಹೀಗೆ ಬರೆಯಲಾಗುತ್ತದೆ?

ಗುರುವಾರ, ಆಗಸ್ಟ್ 23, 2012

ಭಾನುವಾರ, ಮಾರ್ಚ್ 11, 2012

ಅಕ್ಷರ ಅವಾಂತರ ೧೦ - ಗುಡಾವುನ್ನ...!


’ಗುಡಾವುನ್ನ’!... ಇಲ್ಲಿ ಏನು ಬರೆಯಲು ಹೊರಟಿದ್ದಾರೆ ಎಂದು ಹೇಳಬಲ್ಲಿರಾ?

ಬುಧವಾರ, ಜನವರಿ 18, 2012

ಅಕ್ಷರ ಅವಾಂತರ ೯ - ತೆಂಗು ಹಾಗೂ ಶುಲ್ಕ


ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿಯ ಸಮಾಧಿ ಮಂದಿರದ ಬಳಿಯಲ್ಲಿ...
’ಟೆಂಗಿನಕಾಯಿ’ ಒಡೆಯಲು ’ಶುಲ್ಕ್’!

ಭಾನುವಾರ, ಮಾರ್ಚ್ 13, 2011

ಅಕ್ಷರ ಅವಾಂತರ ೮ - ತಲೆಗೊಂದು... ಮನೆಗೊಂದು...


ಈ ಊರಿನ ತುಂಬ ಶುದ್ಧ ಶೌಚದ ಬಗ್ಗೆ ತರಹೇವಾರಿ ಗೋಡೆಬರಹಗಳು. ಎಲ್ಲವೂ ಪ್ರಾಸಬದ್ಧವಾಗಿ ಚೆನ್ನಾಗಿದ್ದವು. ಆದರೆ ’ಮುಂಡಾಸು-ಸಂಡಾಸು’ ಪ್ರಾಸ ನಗುಬರಿಸಿತು. ಒಂದೆಡೆ ಎಡವಟ್ಟಾಗಿ ಅದನ್ನು ಹೀಗೆ ಬರೆಯಲಾಗಿತ್ತು!

ಮಂಗಳವಾರ, ಫೆಬ್ರವರಿ 23, 2010

ಅಕ್ಷರ ಅವಾಂತರ ೭ - ’ಅರಣ್ಯ’ದ ಕೊಲೆ


ಅರಣ್ಯ ಇಲಾಖೆಯೇ ’ಅರಣ್ಯ’ವನ್ನು ತಪ್ಪಾಗಿ ಬರೆದರೆ....? ಮೊದಲ ಬಾರಿ ಸರಿಯಾಗಿ ಬರೆಯಲಾಗಿದ್ದರೂ ಎರಡನೇ ಬಾರಿ ತಪ್ಪು!

ಬುಧವಾರ, ಸೆಪ್ಟೆಂಬರ್ 09, 2009

ಅಕ್ಷರ ಅವಾಂತರ ೬ - ಶಿರಸಿ ಹಳೆ ಬಸ್ಸು ನಿಲ್ದಾಣದಲ್ಲಿ


ಜಿಲ್ಲಾಧಿಕಾರಿಗಳು ಇಂತಹ ಆದೇಶವನ್ನೂ ಹೊರಡಿಸುತ್ತಾರೋ!

ಸೋಮವಾರ, ಮಾರ್ಚ್ 10, 2008

ಅಕ್ಷರ ಅವಾಂತರ ೫ - ಓಂಕಿರಾಣಿ!!!


ಲಕ್ಷ್ಮೇಶ್ವರದಲ್ಲಿ ಓಂಕಿರಾಣಿ! ಹಾಗೇನೇ ಓದಿಬಿಟ್ಟೀರಾ? ನಾನು ಹಾಗೆ ಓದಿದ್ದೆ. ಸ್ವಲ್ಪ ತಲೆ ಕೆರೆದುಕೊಂಡ ಬಳಿಕ ತಿಳಿಯಿತು. ಇದು 'ಓಂ ಕಿರಾಣಿ ಸ್ಟೋರ್ಸ್' ಎಂದು.

ಬುಧವಾರ, ಜುಲೈ 11, 2007

ಅಕ್ಷರ ಅವಾಂತರ ೪ - ಗುಳೇದಗುಡ್ಡ ಆಗಬೇಕಿತ್ತು.....


ಉಡುಪಿ ಬಸ್ಸು ನಿಲ್ದಾಣದಲ್ಲಿ. ಗುಳೇದಗುಡ್ಡ ಎಂದು ಬರೆಯುವ ಬದಲು......ತಮ್ಮದೇ ಆದ ಹೆಸರು ಕೊಟ್ಟಿದ್ದಾರೆ ಆ ಊರಿಗೆ...

ಗುರುವಾರ, ಜೂನ್ 21, 2007

ಅಕ್ಷರ ಅವಾಂತರ ೩ - ಎಲ್ಲವೂ 'ಬಾಲ'ಮಯ!


ಧರ್ಮಸ್ಥಳ ಮಂಜುನಾಥೇಶ್ವರನ ಮಹಿಮೆಯಿರಬೇಕು....ಉಳಿದ ಊರುಗಳ ಹೆಸರಿನಲ್ಲಿ 'ದ' ಇರಬೇಕಾದ್ದಲ್ಲಿ 'ಬಾಲ'ವೊಂದು ವಕ್ಕರಿಸಿಬಿಟ್ಟಿದೆ.

ಬುಧವಾರ, ಮೇ 02, 2007

ಅಕ್ಷರ ಅವಾಂತರ ೨ - ಅವಸರದಲ್ಲಿ ಆದ ಅವಾಂತರ


ಜೋಗ - ಭಟ್ಕಳ ದಾರಿಯಲ್ಲಿ ಕೋಗಾರು ನಂತರ ಬರುವ ಚೆನ್ನೆಕಲ್ ದಾಟಿ ಒಂದೆರಡು ಕಿಮಿ ಬಳಿಕ ಈ ಸುರಕ್ಷಾ ಸೂಚಿ ಇದೆ. 'ಅವಸರವೇ ಅಪಘಾತಕ್ಕೆ ಕಾರಣ' ಎಂಬುದಕ್ಕೆ ಇದಕ್ಕಿಂತ ಒಳ್ಳೆಯ ನಿದರ್ಶನ ಬೇಕೆ?

ಗುರುವಾರ, ಏಪ್ರಿಲ್ 12, 2007

ಅಕ್ಷರ ಅವಾಂತರ ೧ - ದೀರ್ಘವಿಲ್ಲದ ' ಬೀಚ್ ' !!


ಹೊನ್ನಾವರದಿಂದ ಕುಮಟಾಕ್ಕೆ ತೆರಳುವಾಗ ೧೩ಕಿಮಿ ಬಳಿಕ ಸಿಗುವುದು ಧಾರೇಶ್ವರ. ಇಲ್ಲಿರುವ ರಮಣೀಯ ಸಮುದ್ರ ತೀರಕ್ಕೆ ತೆರಳಲು ಹಾಕಿರುವ ಮಾರ್ಗಸೂಚಿಯನ್ನು ಗಮನಿಸಿದರೆ....ಎಡವಟ್ಟು. ರಸ್ತೆಯ ಇನ್ನೊಂದು ಬದಿಯಲ್ಲಿ, ಕುಮಟಾದಿಂದ ಬರುವವರಿಗೆ ಕಾಣಲೆಂದು ಇನ್ನೊಂದು ಮಾರ್ಗಸೂಚಿ. ಅದರಲ್ಲಾದರೂ ಸರಿಯಾಗಿ ಬರೆದಿರಬಹುದು ಎಂದು ನೋಡಹೊರಟರೆ....ಅಲ್ಲೂ ಎಡವಟ್ಟು.