ಶನಿವಾರ, ಜನವರಿ 31, 2015

ಜಲಸಂಗಿಯ ಮದನಿಕೆಯರು - ೪


ದರ್ಪಣ ಸುಂದರಿ. ದರ್ಪಣ ನುಚ್ಚುನೂರಾದರೂ ಆಕೆ ಅದರೆಡೆ ದಿಟ್ಟಿಸುವುದನ್ನು ಬಿಡಳು. ಆಕೆಯ ನೆಕ್ಲೇಸ್‍ನ ಅಂದದ ವಿನ್ಯಾಸವನ್ನು ನೋಡಿ.


ಬಲಗಾಲು ವಿರೂಪಗೊಂಡರೂ ಈ ದರ್ಪಣ ಸುಂದರಿ ಅಂದಗಾತಿಯಾಗಿಯೇ ಉಳಿದುಕೊಂಡಿದ್ದಾಳೆ. ಆಕೆಯನ್ನು ವಿರೂಪಗೊಳಿಸಿದ ದುರುಳರು ಮಣ್ಣಾಗಿ ಹುಡಿಯಾಗಿ ಹೋಗಿದ್ದಾರೆ, ಆದರೆ ಈಕೆ ಇನ್ನಷ್ಟು ಸೌಂದರ್ಯವತಿಯಾಗಿ ಕಂಗೊಳಿಸುತ್ತಿದ್ದಾಳೆ.


ಮೈಮೇಲೆ ಅದೇನೋ ಹಾವಿನಂತೆ ಸುತ್ತಿಕೊಂಡಿರುವ ಈಕೆಯ ಪಾದರಕ್ಷೆಯ ವಿನ್ಯಾಸ ನೋಡಿ! ಈಕೆಯ ಅಂದವಾಗಿದ್ದ ಮೂಗನ್ನು ಜಜ್ಜಿ ಹಾನಿಗೊಳಿಸಲಾಗಿದೆ. ಎಡಗೈ ತುಂಬಾ ಬಳೆಗಳನ್ನು ಧರಿಸಿ, ಬಂದವರಿಗೆ ತಿಲಕ ಹಾಕುವ ಕೆಲಸದಲ್ಲಿ ಮಗ್ನಳಾಗಿದ್ದಾಳೆ!


ಸರಳ ಆಕರ್ಷಕ ಭಂಗಿಯಲ್ಲಿ ನಿಂತಿರುವ ಸುಂದರ ಕನ್ಯೆ.


ಕೈಯಲ್ಲಿ ಡಮರುಗ ಮತ್ತು ತಾಳಗಳನ್ನು ಹಿಡಿದು ಭಜನೆ ಹಾಡುತ್ತಿರುವ ಮದನಿಕೆ.