ಕಳಚೆ! ಈ ಹಳ್ಳಿಯಲ್ಲಿ ಸುಮಾರು ೮೦ ಅಡಿ ಎತ್ತರವಿರುವ ಕಲ್ಲೊಂದಿದೆ ಎಂದು ನೋಡೋಣವೆಂದು ತೆರಳಿದರೆ, ಇಳಿಜಾರಿನ ರಸ್ತೆಯಲ್ಲಿ ಎಷ್ಟು ಚಲಿಸಿದರೂ ಇಳಿಜಾರು ಮುಗಿಯುತ್ತಿರಲಿಲ್ಲ, ಕಳಚೆಯೂ ಬರುತ್ತಿರಲಿಲ್ಲ, ಕಲ್ಲೂ ಸಿಗುತ್ತಿರಲಿಲ್ಲ.


ಸುಮಾರು ೫ ಕಿ.ಮಿ.ನಷ್ಟು ಕ್ರಮಿಸಿದ ಬಳಿಕ ತಿರುವೊಂದರ ಬಳಿ ಗಗನದೆತ್ತರಕ್ಕೆ ಏರಿದಂತೆ ಪ್ರತ್ಯಕ್ಷವಾಯಿತು ಕಳಚೆ ಕಲ್ಲು.

ಈ ಸಣ್ಣ ಸ್ಥಳದಲ್ಲಿ ಅಚೀಚೆ ಬಂಡೆಗಳ ಸಮೂಹ. ರಸ್ತೆಯ ಒಂದು ಬದಿಯಲ್ಲಿ ಈ ಉದ್ದದ ಕಲ್ಲಿದ್ದರೆ ಇನ್ನೊಂದು ಬದಿಯಲ್ಲಿ ಅದಕ್ಕೆ ಸಡ್ಡು ಹೊಡೆದಂತೆ ಸುಮಾರು ೪೦ ಅಡಿ ಎತ್ತರದ ಇನ್ನೊಂದು ಕಲ್ಲು ಅಥವಾ ಬಂಡೆ. ಕಳಚೆ ಕಲ್ಲಿನ ಸುತ್ತ ಮಾನವ ಸರಪಳಿ ಮಾಡುವುದಾದರೆ ೧೭-೨೦ ಜನರು ಬೇಕಾಗಬಹುದೇನೋ.


ಕಳಚೆ ಕಲ್ಲನ್ನು ನೋಡಲು ಕಳಚೆಗೆ ತೆರಳುವುದೇ ಒಂದು ಅನುಭವ!
ಮಾಹಿತಿ: ಕೇಶವ ಹೆಗಡೆ ಕೊರ್ಸೆ













