ರಸ್ತೆಯ ಬದಿಯಲ್ಲೇ ಸಣ್ಣ ಕಮರಿಗೆ ಧುಮುಕುವ ಜಲಧಾರೆಯಿದು. ’ಜಗ್’ನಿಂದ ಬೀಳುವ ನೀರನ್ನು ಹೋಲುವ ಕಾರಣ ಇದಕ್ಕೆ ಜಗ್ ಜಲಧಾರೆ ಎಂದು ಹೆಸರು! ಅವಕ್ಕಾಗಬೇಡಿ. ನಿಜವಾಗಿ ಹೇಳಬೇಕಾದರೆ ಇದೊಂದು ಅನಾಮಧೇಯ ಜಲಧಾರೆ. ಇದಕ್ಕೂ ಒಂದು ಹೆಸರು ಇರಲಿ ಎಂದು, ಗೆಳೆಯ ದಿನೇಶ್ ಹೊಳ್ಳ ಜಗ್‍ನಿಂದ ಬೀಳುವ ನೀರಿನ ನೆನಪಾಗಿ ಇಟ್ಟ ಹೆಸರು ’ಜಗ್ ಜಲಪಾತ’.
ರಸ್ತೆಯ ಪಾರ್ಶ್ವದಲ್ಲಿರುವ ಸಣ್ಣ ತೆರೆದ ಜಾಗದ ಅಂಚಿಗೆ ಹೋಗಿ ಕಮರಿಯೊಳಗೆ ಇಣುಕಿದರೆ ಮಾತ್ರ ಈ ಜಲಧಾರೆ ದರ್ಶನ ನೀಡುತ್ತದೆ. ಸಣ್ಣ ವಾಹನಗಳಲ್ಲಿ ತೆರಳಿದರೆ ರಸ್ತೆಯಿಂದ ಜಲಧಾರೆ ಕಾಣುವುದಿಲ್ಲ.
ಇದೊಂದು ಅದ್ಭುತ ಜಲಧಾರೆಯೇನಲ್ಲ. ಆದರೆ ಚಂದಕ್ಕೇನೂ ಕೊರತೆಯಿಲ್ಲ. ಇದರ ಜಗ್ ಆಕಾರವೇ ಇದರ ಹೆಗ್ಗಳಿಕೆ.
4 ಕಾಮೆಂಟ್‌ಗಳು:
ಇಂಥ ಸೊಗಸಾದ ಜಲಪಾತಗಳನ್ನು ತೋರಿಸಿ ನನ್ನ ಹೊಟ್ಟೆ ಉರಿಸುತ್ತಿದ್ದೀರ!!!!
Chennagide sir
ಮಾನ್ಯರೇ, ಚಿತ್ರ ಸಮೇತ ಸವಿವರ ನೀಡಿರುವುದರಿಂದ ನಿಮ್ಮೊಂದಿಗೆ ನಾವೂ ಚಾರಣ ಹೋಗಿ ಬಂದಂತಾಯಿತು. ಒಳ್ಳೆಯ ನಿರೂಪಣೆ. ವಂದನೆಗಳು.
ಅರವಿಂದ್,
ಯುರೋಪ್, ನೇಪಾಲ್, ಮಾನಸರೋವರ, ಭೂತಾನ್, ಗುಜರಾತ್, ಛತ್ತೀಸ್‍ಗಡ್, ಲಡಾಖ್ ಎಂದು ಸುತ್ತಾಡುತ್ತಾ ಹೊಟ್ಟೆ ಉರಿಸುವವರು ಯಾರೋ ಏನೋ!!!!!!
ಶೃತಿಕುಮಾರ್, ನಂಜುಂಡರಾಜು
ಧನ್ಯವಾದ.
ಕಾಮೆಂಟ್ ಪೋಸ್ಟ್ ಮಾಡಿ