
ಈ ಊರಿನ ಹೊರವಲಯದಲ್ಲಿರುವ ಬೆಟ್ಟಗಳ ನಡುವಿನಿಂದ ಹರಿದುಬರುವ ಈ ತೊರೆ ೨ ಹಂತದಲ್ಲಿ ಸುಮಾರು ೬೦ ಅಡಿ ಎತ್ತರದ ಜಲಧಾರೆಯನ್ನು ನಿರ್ಮಿಸಿದೆ. ಈ ಕೊಳ್ಳಕ್ಕೆ ಸಿದ್ಧನಕೊಳ್ಳ ಎಂದು ಹೆಸರು.


ಮಳೆಗಾಲ ಮತ್ತು ಅಕಾಲಿಕ ಮಳೆಯಾದ ಸಮಯದಲ್ಲಿ ಸಿದ್ಧನಕೊಳ್ಳದಲ್ಲಿ ನೀರು ಹರಿಯುತ್ತಿರುತ್ತದೆ. ನವೆಂಬರ್ ತಿಂಗಳಲ್ಲಿ ತೆರಳಿದರೂ ಅಲ್ಪ ಸ್ವಲ್ಪ ನೀರಿನ ದರ್ಶನವಾಯಿತು.

ಬೆಟ್ಟವನ್ನು ಒಂದೈದು ನಿಮಿಷ ಏರಿದರೆ ಜಲಧಾರೆಯ ಮೇಲ್ಭಾಗದ ಹಂತವನ್ನು ವೀಕ್ಷಿಸಬಹುದು. ನೀರಿನ ಹರಿವು ಚೆನ್ನಾಗಿದ್ದಾಗ ನೋಡಲು ಸಿದ್ಧನಕೊಳ್ಳ ಜಲಧಾರೆ ಬಹಳ ಆಕರ್ಷಕವಾಗಿರುತ್ತದೆ.


ಚಾರಣವಿಲ್ಲ, ಕಷ್ಟವಿಲ್ಲ, ಬಹಳ ಆರಾಮವಾಗಿ ರಸ್ತೆ ಬದಿಯಲ್ಲೇ ವಾಹನ ನಿಲ್ಲಿಸಿ ಸಿದ್ಧನಕೊಳ್ಳ ಜಲಧಾರೆಯನ್ನು ವೀಕ್ಷಿಸಬಹುದು. ನೀರು ಮಾತ್ರ ಕೊಳಕು. ’ಇಲ್ಲಿ ಮಂದಿ ಸಿದ್ಧನಕೊಳ್ಳದ ನೀರು ಯೂಸ್ ಮಾಡೋದ ಗಾಡಿ ತೊಳಿಯಾಕ ಮತ್ತು ಕುಂಡಿ ತೊಳಿಯಾಕ’ ಎಂದು ಮೊದಲೇ ಭೇಟಿ ನೀಡಿದ್ದ ಗೆಳೆಯರು ಎಚ್ಚರಿಸಿದ್ದರು!
2 ಕಾಮೆಂಟ್ಗಳು:
ರಾಜೇಶ್,
ಜಲಧಾರೆ ತುಂಬಾ ಚನ್ನಾಗಿ ಇದೆ.
ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಈ ಜಲಧಾರೆಯನ್ನು ನೋಡಲು ಹೋಗಿದ್ದೆ. ಆದರೆ ಸಮೀಪದ ಗ್ರಾಮದ ಜನ ಅಲ್ಲಿ ನೀರು ಇಲ್ಲ ಎಂದು ತಿಳಿಸಿದರು. ಹಾಗಾಗಿ ಜಲಧಾರೆಯನ್ನು ನೋಡಲು ಅಗಿರಲಿಲ್ಲ. ನಿಮ್ಮಿಂದ ಈಗ ಅದು ಸಾದ್ಯವಾಗಿದೆ.
ಧನ್ಯವಾದಗಳು
Lakshmipati
:)-
ಕಾಮೆಂಟ್ ಪೋಸ್ಟ್ ಮಾಡಿ