
ದಿನಪತ್ರಿಕೆಯೊಂದರಲ್ಲಿ ಸಂತೋಷ್ ಮೆಹೆಂದಳೆಯವರು ಹೊನ್ನೆಕುಡಿ ಬಗ್ಗೆ ಲೇಖನ ಬರೆದಿದ್ದರು. ಹೊನ್ನಿನಂತಹ ಮರಳಿರುವುದರಿಂದ ಹೊನ್ನೆಕುಡಿ ಎಂಬ ಹೆಸರು. ಈ ಸಮುದ್ರ ತೀರದಲ್ಲಿ ಈಜಾಡುವುದು ಬಹಳ ಅಪಾಯಕಾರಿ.



ದೂರದಲ್ಲಿ ಸಮುದ್ರದೊಳಗೆ ಬಹುದೂರಕ್ಕೆ ಚಾಚಿರುವಂತೆ ಕಾಣುತ್ತಿದ್ದ ಬೆಟ್ಟಗಳು. ತೀರದಲ್ಲೇ ಸಣ್ಣ ಬೆಟ್ಟಗಳೆರಡು ಕಡಲಿನೊಳಗೆ ಸ್ವಲ್ಪ ದೂರ ನುಸುಳಿರುವುದರಿಂದ, ಈ ಬೆಟ್ಟಗಳೆರಡರ ನಡುವಿನ ಅಂತರದಲ್ಲಿ ಸುಮಾರು ೫೦-೮೦ ಮೀಟರ್ ಉದ್ದದ ಪುಟ್ಟ ಬೀಚ್.



ಒಂದು ಬೆಟ್ಟದ ಮಗದೊಂದು ಕಡೆ ನದಿಯೊಂದು ಸಮುದ್ರ ಸೇರುವ ಸುಂದರ ದೃಶ್ಯವಿದ್ದರೆ, ಇನ್ನೊಂದು ಬೆಟ್ಟದ ಮಗ್ಗುಲಿನಿಂದ ದೂರದಲ್ಲಿ ೨ ದ್ವೀಪಗಳ ದರ್ಶನ.




ನದಿ ಸಮುದ್ರ ಸೇರುವಲ್ಲಿ ಬೀಚ್ ಕ್ರಿಕೆಟ್ ನಡೆಯುತ್ತಿತ್ತು. ಇಲ್ಲಿ ಹಲವಾರು ಸುಂದರ ಕಡಲ ತೀರಗಳಿವೆ. ಇವುಗಳಲ್ಲಿ ಕೆಲವೊಂದಕ್ಕೆ ’ಸೀಬರ್ಡ್’ ಯೋಜನೆಯಿಂದ ಈಗ ಭೇಟಿ ನೀಡಲು ಸಾಧ್ಯವಿಲ್ಲ. ಆದರೂ ಉಳಿದ ಕೆಲವೊಂದು ಸುಂದರ ಕಡಲ ತೀರಗಳಲ್ಲಿ ಹೊನ್ನೆಕುಡಿಯೂ ಒಂದು.
4 ಕಾಮೆಂಟ್ಗಳು:
ಬೀಚ್ ತುಂಬ ಚೆನ್ನಾಗಿದೆ.
ಅರವಿಂದ್,
ಧನ್ಯವಾದ.
wow! The first picture is tooo good, and quiet inviting! Must visit next time I am in Udupi.
ಶ್ರೀಕಾಂತ್,
ಚೆನ್ನಾದ ಸ್ಥಳ. ನೀವು ತುಂಬಾ ಇಷ್ಟಪಡುವಿರಿ.
ಕಾಮೆಂಟ್ ಪೋಸ್ಟ್ ಮಾಡಿ