ಭಾನುವಾರ, ಜೂನ್ 24, 2007

ಅವಳಿ ಜಲಧಾರೆಗಳು


ರಸ್ತೆ ಬದಿಯಲ್ಲೇ ೨ ಜಲಧಾರೆಗಳು 'ಮಳೆಗಾಲದಲ್ಲಿ ಮಾತ್ರ' ಧುಮುಕುತ್ತಾ ಪ್ರಯಾಣಿಗರ ಗಮನ ಸೆಳೆಯುತ್ತಿರುತ್ತವೆ. ಜುಲಾಯಿ ೨೦೦೫ ಮತ್ತು ಆಗೋಸ್ಟ್ ೨೦೦೬, ಹೀಗೆ ೨ ಬಾರಿ ಮಳೆಗಾಲದಲ್ಲಿ ಈ ದಾರಿಯಾಗಿ ತೆರಳಿ ಈ ೨ ಜಲಧಾರೆಗಳ ಅಂದವನ್ನು ಮನಸಾರೆ ಆನಂದಿಸಿದ್ದೇನೆ.'ಯು' ತಿರುವೊಂದರಲ್ಲಿ ಸೇತುವೆಯೊಂದರ ಬದಿಯಲ್ಲೇ ಇರುವ ಮೊದಲ ಜಲಧಾರೆಯ ನೋಟ ರಮ್ಯ. ರಸ್ತೆ ಬದಿಯಲ್ಲೇ ಕಾಣುವ ಸುಮಾರು ೪೦ಅಡಿಯಷ್ಟೆತ್ತರದಿಂದ ಎರಡು ಕವಲುಗಳಲ್ಲಿ ಧುಮುಕುವುದು ಈ ಜಲಧಾರೆಯ ಎರಡನೇ ಹಂತ.


ಸುಮಾರು ೭೦ ಅಡಿಯಷ್ಟೆತ್ತರವಿರುವ ಮೊದಲನೇ ಹಂತ ಮೇಲ್ಗಡೆ ಕಾಡಿನ ಮರೆಯಲ್ಲಿ ಅಡಗಿದೆ. ಮೊದಲನೇ ಬಾರಿ ತೆರಳಿದಾಗ ನಾನು ಮೊದಲನೇ ಹಂತವನ್ನು ಗಮನಿಸಿರಲಿಲ್ಲ. ಎರಡನೇ ಬಾರಿ ತೆರಳಿದಾಗ ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದಾಗ ಮೇಲ್ಗಡೆ ಕಾಡಿನ ಮರೆಯಲ್ಲಿ ಬಿಳಿಯಾಗಿ ಅದೇನೋ ಕಾಣುತ್ತಿತ್ತು. 'ಆಗಸ'ವಿರಬಹುದೇನೋ, ಎಂದು ಮತ್ತೆ ಮತ್ತೆ ನೋಡಿದೆ. ರಸ್ತೆಯಲ್ಲಿ ಸ್ವಲ್ಪ ಹಿಂದಕ್ಕೆ ನಡೆದು ಗಮನಿಸಿದರೆ ಸಂಶಯವೇ ಇಲ್ಲ. ರಭಸದಿಂದ ಭೋರ್ಗರೆಯುತ್ತಿದ್ದ ಮೊದಲನೇ ಹಂತ! ಫೋಟೋ ತೆಗೆದೆ. ಚಿತ್ರ 'ಶೇಕ್' ಆಗಿ ಕೆಟ್ಟದಾಗಿ ಬಂತಲ್ಲದೇ, ಕಾಡಿನ ಮರೆಯಲ್ಲಿ ಕಣ್ಣಿಗೇ ಸರಿಯಾಗಿ ಕಾಣದ ಆ ಮೊದಲನೇ ಹಂತವನ್ನು ಚಿತ್ರದಲ್ಲಿ ಗುರುತಿಸಿವುದು ಕಷ್ಟಸಾಧ್ಯ. ಮೊದಲನೇ ಹಂತವನ್ನು ಸಮೀಪದಿಂದ ವೀಕ್ಷಿಸಲು ಮೇಲೆ ತೆರಳಲು ದಾರಿಯಿರಲಿಲ್ಲ. ನನ್ನೊಂದಿಗೆ ಯಾರಾದರು ಇದ್ದಿದ್ದರೆ ದಾರಿ ಮಾಡಿ ಹೋಗುವ ಪ್ರಯತ್ನ ಮಾಡುತ್ತಿದ್ದೆ.


೩ಕಿಮಿ ಮತ್ತೆ ಕ್ರಮಿಸಿದರೆ ಸುಮಾರು ೮೦ಅಡಿ ಎತ್ತರದ ಮತ್ತೊಂದು ಜಲಧಾರೆ. ಚೆನ್ನಾಗಿ ಮಳೆಯಾದರೆ ಮಾತ್ರ ಈ ಜಲಧಾರೆಯ ಸುಂದರ ನೋಟ ಲಭ್ಯ. ಈ ಜಲಧಾರೆ ಎರಡು ಹಂತಗಳಲ್ಲಿ ಧುಮುಕುತ್ತದೆ.

10 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ರಾಜೇಶ್,

ನನ್ನನ್ನು ಯಾವಾಗ ಕರೆದುಕೊಂಡು ಹೋಗುತ್ತೀರಾ?
ಲೀನಾ

Aravind GJ ಹೇಳಿದರು...

ಜಲಪಾತಗಳು ತುಂಬ ಚೆನ್ನಾಗಿದೆ. ನಮ್ಮ ಊರಿನ ಹತ್ತಿರವೇ ಇದ್ದರೂ ಇದರ ವಿಷಯ ಗೊತ್ತಿರಲಿಲ್ಲ!!

Sushrutha Dodderi ಹೇಳಿದರು...

ನಾಗವಳ್ಳಿಯಲ್ಲಿ ನನ್ನ ಪ್ರೀತಿಯ ಮೇಷ್ಟ್ರೊಬ್ಬರು ಇದ್ದರು. ಪ್ರತಿ ಹದಿನೈದು ದಿನಗಳಿಗೊಂದು ಪತ್ರ ಬರೆಯುತ್ತಿದ್ದರು. ಈಗ ಅವರಿಗೆ ವರ್ಗವಾಗಿ ಬೇರೆಲ್ಲೋ ಇದ್ದಾರೆ. ಆದರೆ ಅವರು ಒಮ್ಮೆಯೂ ಈ ಜಲಪಾತದ ಬಗ್ಗೆ ಹೇಳ್ಲಿಲ್ಲ ನೋಡಿ ನಂಗೆ..! ಅದಿಲ್ಲಾಂದ್ರೆ ನಾನು ಒಂದು ರೌಂಡ್ ಹೋಗಿ ಬರ್ತಿದ್ದೆ..

ಮತ್ತೊಂದು ವಿಷ್ಯ: 'ನಾಗವಳ್ಳಿ' ಹೆಸರು ವೀಳ್ಯದೆಲೆಗೆ ಫೇಮಸ್ಸು. :)

VENU VINOD ಹೇಳಿದರು...

ಸಿಂಪ್ಲಿ ಸುಪರ್ಬ್.
ನಿಮ್ಮ ಮೊದಲ ಫೋಟೋ ಎಲ್ಲಕ್ಕಿಂತ ಆಕರ್ಷಣೀಯ ರಾಜೇಶ್

ರಾಜೇಶ್ ನಾಯ್ಕ ಹೇಳಿದರು...

ಅರವಿಂದ್,
ಹೋಗಿ ಬನ್ನಿ...ಈ ಮಳೆಗಾಲದಲ್ಲಿ..

ಸುಶ್ರುತ,
ನಿಮ್ಮ ಮೇಷ್ಟ್ರು ತಿಳಿಸದಿದ್ದರೆ ಏನಂತೆ? ನಾನು ತಿಳಿಸಿದ್ದೀನಲ್ಲ...ಒಂದು ಸುತ್ತು ಹೋಗಿ ಬನ್ನಿ...ಹಾಗೆ ಸ್ವಲ್ಪ ಮುಂದೆ ಹೋಗಿ ಹಾಡವಳ್ಳಿಯಲ್ಲಿರುವ ಬಸದಿಗಳನ್ನೂ ನೋಡಿಬರುವಿರಂತೆ..

ವೇಣು,
ಥ್ಯಾಂಕ್ಸ್, ಫೋಟೊ ಮೆಚ್ಚಿದ್ದಕ್ಕೆ...ನಿಮ್ಗೂ ಬೈಕಿಂಗ್ ಅಂದ್ರೆ ಇಷ್ಟ ಅಲ್ವಾ? ಈಗ ಮಳೆಗಾಲದಲ್ಲಿ ಹೋಗಿ ಬನ್ನಿ.

ಸಿಂಧು sindhu ಹೇಳಿದರು...

ರಾಜೇಶ್,

ತುಂಬ ಖುಷಿಯಾಯಿತು ಚಿತ್ರಗಳನ್ನು ನೋಡಿ. ಮಳೆಗಾಲ ಪೂರ್ತಿ ಹಿಡಿಯುವುದಕ್ಕೆ ಮುಂಚೆಯೇ ಸುದ್ದಿ ತಿಳಿಸಿ, ನಮಗೆ ಹೋಗಲು ಪ್ಲಾನ್ ಮಾಡಕ್ಕೆ ಅವಕಾಶಾ ನೀಡಿದ್ದೀರ. ಹೋಗಲೇಬೇಕು.

ಸುತ್ತ ಚಂದದ ಅಂಗಡಿ/ವೀಕ್ಷಣಾ ನೆಲೆಗಳಿಲ್ಲದ ಈ ಪುಟ್ಟ ಅಪ್ರಸಿಧ್ಧ ಜಲಪಾತಗಳು, ನಾವು ಸಾಮಾನ್ಯರ ಮನದಲ್ಲಿ ಅಸಾಮಾನ್ಯವಾದ ಧಾರೆಯಾಗಿ ಹರಿಯಲು ಬಿಡುವ ನಿಮಗೆ ಶರಣು.

ಪ್ರೀತಿಯೊಂದಿಗೆ,
ಸಿಂಧು

Srik ಹೇಳಿದರು...

I have been there to Chinnekallu twice, Once in December 2006 and once more in May 2006. On both the occasions, I didnt get to see this splendour. Unlucky me :-(

Prashanth M ಹೇಳಿದರು...

Super photos Rajesh. As Srik mentioned above, we were there in May'07 at Channekallu cross.

innu mele naanu weekends nalli shujravaara horatu nimoorige barteeni, shanivaara bhaanuvaara ee reetiya jaagagalige kaaredukondu hogi.. bhaanuvaara vapas b'lore barteeni :P

Srik ಹೇಳಿದರು...

prashanth, add me to these trips yar.

ರಾಜೇಶ್ ನಾಯ್ಕ ಹೇಳಿದರು...

ಸಿಂಧು,
ನೀವು ಗ್ರಹಿಸಿದಂತೆ, ಸಾಧ್ಯವಾದವರಿಗೆ ಹೋಗಲು ಅನುಕೂಲವಾಗಲಿ ಎಂದೇ ಮಳೆಗಾಲದ ಆರಂಭದಲ್ಲೇ ಬ್ಲಾಗ್ ನಲ್ಲಿ ಬರೆದಿರುವುದು.

ಪ್ರಶಾಂತ್,
ಅವಶ್ಯವಾಗಿ ಬನ್ನಿ. ಹಾಗೇನೆ ನಿಮ್ಮ ಗೆಳೆಯನನ್ನೂ ಕರೆತನ್ನಿ.