ಬುಧವಾರ, ಫೆಬ್ರವರಿ 27, 2013

ನಾಟ್ಯ ಗಣೇಶ


ಗಣೇಶನ ನಾಟ್ಯರೂಪದ ಈ ಸುಂದರ ಕೆತ್ತನೆ ಮನಸೂರೆಗೊಂಡಿತು. ಗಣೇಶನನ್ನು ಎಂಟು ಕೈಗಳೊಂದಿಗೆ ತೋರಿಸಿರುವ ಅಪರೂಪದ ನಿದರ್ಶನವಿದು. ಅದ್ಭುತ ಕೆತ್ತನೆ ಎಂದೆನಿಸಿತು. ಉಡುಪಿಯಿಂದ ಬಹಳ ದೂರವಿರುವ ಈ ಹಳ್ಳಿಗೆ ತೆರಳಿದ್ದು ಹಲವಾರು ವರ್ಷಗಳಿಂದ ಕಾಡುತ್ತಿದ್ದ ಸುಂದರಿಯೊಬ್ಬಳನ್ನು ನೋಡಲೋಸುಗ. ಆದರೆ ಮನಸೂರೆಗೊಂಡಿದ್ದು ಗಣೇಶನ ಈ ಅಪ್ರತಿಮ ರೂಪ.


ಎರಡು ಕೈಗಳು ಹಾವನ್ನು ಹಿಡಿದುಕೊಂಡಿದ್ದರೆ, ಉಳಿದ ಐದರಲ್ಲಿ ಕೊಡಲಿ, ಶಂಖ, ಪದ್ಮ, ಮೋದಕ ಹಾಗೂ ಅಂಕುಶಗಳನ್ನು (ನನ್ನ ಊಹೆ ತಪ್ಪೂ ಇರಬಹುದು) ಕಾಣಬಹುದು. ಇನ್ನೊಂದು ಕೈಯಲ್ಲಿ ಏನಿದೆ ಎಂದು ನನಗೆ ತಿಳಿಯಲಿಲ್ಲ. ತನ್ನ ದೊರೆ ಅದ್ಬುತವಾಗಿ ನೃತ್ಯ ಮಾಡುತ್ತಿದ್ದರೆ, ಅದನ್ನು ನೋಡುವುದನ್ನು ಬಿಟ್ಟು,  ಮೂಷಿಕ ಏನನ್ನೋ ಕಬಳಿಸುವುದರಲ್ಲಿ ಮಗ್ನನಾಗಿದೆ!

4 ಕಾಮೆಂಟ್‌ಗಳು:

Rakesh Holla ಹೇಳಿದರು...

Beautiful..!!

ಅನಾಮಧೇಯ ಹೇಳಿದರು...

at last,
did u saw beautiful lady or not?

Srik ಹೇಳಿದರು...

ಆ ಕಾಡುವ ಸುಂದರಿ ಯಾರೆಂದು ತಿಳಿದುಕೊಳ್ಳಬಹುದೇ?

ಗಣೇಶ super!

ಶ್ರಿಕ್

ರಾಜೇಶ್ ನಾಯ್ಕ ಹೇಳಿದರು...

ರಾಕೇಶ್,
ಧನ್ಯವಾದ.

ಅನಾಮಧೇಯ,
ಆ ಸುಂದರಿಯ ದರ್ಶನವಾಯಿತು!

ಶ್ರೀಕಾಂತ್,
ಆಕೆ ಅನಾಮಿಕೆ. ಹೆಸರಿಲ್ಲದವಳು. ಆದರೆ ರೂಪವತಿ. ಆಕೆಯ ಚಿತ್ರಗಳನ್ನು ಸದ್ಯದಲ್ಲೇ ಪ್ರಕಟಿಸುವೆ. ಧನ್ಯವಾದ.