ಬುಧವಾರ, ಡಿಸೆಂಬರ್ 14, 2011

ಕೆನ್‍ಬೆರ್ರಾದಲ್ಲಿ ರಾಹುಲ್ ದ್ರಾವಿಡ್

ಆಸ್ಟ್ರೇಲಿಯಾದ ರಾಜಧಾನಿ ಕೆನ್‍ಬೆರ್ರಾದಲ್ಲಿ ಇಂದು ನಡೆದ ವಾರ್ಷಿಕ ’ಡೊನಾಲ್ಡ್ ಬ್ರಾಡ್‍ಮನ್ ಒರೇಷನ್’ನಲ್ಲಿ ಈ ಬಾರಿ ಪ್ರಮುಖ ಭಾಷಣದ ಗೌರವ ರಾಹುಲ್ ದ್ರಾವಿಡ್‍ಗೆ. ಇಸವಿ ೨೦೦೦ದಿಂದ ಪ್ರತಿ ವರ್ಷ ನಡೆಯುವ ಈ ಸಮಾರಂಭದಲ್ಲಿ ಒಬ್ಬ ಗಣ್ಯ ಕ್ರಿಕೆಟಿಗನನ್ನು ಪ್ರಮುಖ ಭಾಷಣ ನೀಡಲು ಆಹ್ವಾನಿಸಲಾಗುತ್ತದೆ. ಆ ಗೌರವಕ್ಕೆ ಪಾತ್ರನಾದ ಮೊದಲ ವಿದೇಶಿ ಕ್ರಿಕೆಟಿಗ ಎಂಬ ಗೌರವ ಕೂಡಾ ದ್ರಾವಿಡ್ ಪಾಲಿಗೆ.

ರಾಹುಲ್ ದ್ರಾವಿಡ್‍ರನ್ನು ಮುಖ್ಯ ಭಾಷಣಕಾರನಾಗಿ ಮಾತನಾಡಲು ಆಹ್ವಾನಿಸಲಾಗಿದೆ ಎಂದು ಸುಮಾರು ಒಂದು ತಿಂಗಳ ಹಿಂದೆ ತಿಳಿದುಬಂದಾಗ, ಇದೊಂದು ಅತ್ಯುತ್ತಮ ಭಾಷಣವಾಗಲಿದೆ ಎಂದು ಅಂದೇ ಗ್ರಹಿಸಿದ್ದೆ. ಏನೇ ಮಾಡಿದರೂ ಅಲ್ಲಿ ಉತ್ಕೃಷ್ಟ ನಿರ್ವಹಣೆ ತೋರುವುದು ದ್ರಾವಿಡ್ ಹಳೇ ಚಾಳಿ. ದ್ರಾವಿಡ್ ಭಾಷಣವನ್ನು ಇಲ್ಲಿ ಓದಬಹುದು. ವಿಡಿಯೋ ಇಲ್ಲಿ ನೋಡಬಹುದು.

2 ಕಾಮೆಂಟ್‌ಗಳು:

sunaath ಹೇಳಿದರು...

It is a great speech by Rahul. Thank you for the link.

ರಾಜೇಶ್ ನಾಯ್ಕ ಹೇಳಿದರು...

ಧನ್ಯವಾದ ಸುನಾಥರೆ