ಭಾನುವಾರ, ಅಕ್ಟೋಬರ್ 02, 2011

ಸವೆದ ಹಾದಿ...


ಇಂದಿಗೆ ಸರಿಯಾಗಿ ಏಳು ವರ್ಷಗಳ (ಅಕ್ಟೋಬರ್ ೩, ೨೦೦೪) ಹಿಂದೆ ತೆಗೆದ ಚಿತ್ರವಿದು. ಗೆಳೆಯ ಲಕ್ಷ್ಮೀನಾರಾಯಣ(ಪುತ್ತು), ಮಧುಕರ್ ಕಳಸ್ ಮತ್ತು ನಾನು ದೇವಕಾರ್ ಜಲಧಾರೆಯ ಸಮೀಪ ತೆಗೆಸಿಕೊಂಡ ಚಿತ್ರ. ಲುಂಗಿಯಲ್ಲಿ ನಾನು ಕೈಗೊಂಡ ಮೊದಲ ಮತ್ತು ಕೊನೆಯ ಚಾರಣ! ಅಂಗಿ ಕೂಡಾ ಧರಿಸದೇ ಕೈಗೊಂಡ ಮೊದಲ ಮತ್ತು ಕೊನೆಯ ಚಾರಣವೂ ಹೌದು. ಅವರಿಬ್ಬರು ಸ್ವಲ್ಪವೂ ಬೆವರಿಲ್ಲ. ಆದರೆ ನಾನು ಬೆವರಿನಲ್ಲಿ ತೊಯ್ದುಹೋಗಿದ್ದೆ. ತುಂಬಾ ತುಂಬಾ ನೆನಪು ಬರುವ ಪ್ರಯಾಣ ಮತ್ತು ಚಾರಣವಿದು. ಮಧುಕರ್ ಈಗ ದೇವಕಾರ್ ಬಿಟ್ಟು ಸಮೀಪದ ಕಳಚೆಗೆ ಸ್ಥಳಾಂತರಗೊಂಡಿದ್ದಾರೆ. ಪುತ್ತು, ಶಾಶ್ವತವಾಗಿ ಹಳದೀಪುರ ಬಿಟ್ಟು ಗೋವಾಗೆ ತೆರಳಿ ಎರಡು ವರ್ಷಗಳೇ ಕಳೆದವು. ನಾನು ಉಡುಪಿಯಲ್ಲೇ ಇದ್ದರೂ ದೇವಕಾರಿಗೆ ಕೊನೆಯ ಭೇಟಿ ನೀಡಿ ನಾಲ್ಕು ವರ್ಷಗಳಾದವು. ಆದರೂ ಈ ಸ್ಥಳದ ಗುಂಗು ನನ್ನನ್ನು ಬಿಟ್ಟು ತೆರಳಿಲ್ಲ. ಇಂದು (ಅಕ್ಟೋಬರ್ ೨) ದೇವಕಾರಿಗೆ ಮೊದಲ ಭೇಟಿ ನೀಡಿ ಸರಿಯಾಗಿ ಏಳು ವರ್ಷಗಳಾದವು. ಹಾಗೇನೇ ನಿನ್ನೆ (ಅಕ್ಟೋಬರ್ ೧) ’ಅಲೆಮಾರಿಯ ಅನುಭವಗಳು’ ಐದು ವರ್ಷಗಳನ್ನು ಪೂರ್ಣಗೊಳಿಸಿತು. ಈ ಪರಿ ಬರೆದು ರಾಶಿ ಹಾಕಲಿರುವೆನೆಂದು ಕಲ್ಪಿಸಿರಲಿಲ್ಲ. ಎಷ್ಟೇ ಕೆಟ್ಟದಾಗಿ ಬರೆದರೂ ಓದಿ ಪ್ರೋತ್ಸಾಹಿಸಿದ ತಮಗೆಲ್ಲರಿಗೂ ಧನ್ಯವಾದಗಳು.

20 ಕಾಮೆಂಟ್‌ಗಳು:

Teamgsquare ಹೇಳಿದರು...

Congrats . Your blog is great source of information for people like us to explore unheard places of Karnataka. Keep great work going .

ಮಿಥುನ ಕೊಡೆತ್ತೂರು ಹೇಳಿದರು...

bahu dodda sadane nimmadu nijakku

sunaath ಹೇಳಿದರು...

ಓದುಗರಿಗೆ ಅಪೂರ್ವ ಮಾಹಿತಿ ನೀಡುತ್ತ ಬಂದಿದ್ದೀರಿ.
ಶುಭಾಶಯಗಳು.

ಕನಸು ಕಂಗಳ ಹುಡುಗ ಹೇಳಿದರು...

ರಾಜೇಶ್ ಅವರೆ ನಿಮ್ಮ ಬ್ಲಾಗ್ ಚನ್ನಾಗಿದೆ.

ಕೆಟ್ಟದಾಗಿ ಬರೆದರೂ ಅಂದಿರಲ್ಲಾ.....

ಅದೊಂದ್ ಪದ ಬ್ಲಾಗಲ್ಲಿ waste ಆಗಿದ್ದು ಬಿಟ್ರೆ ಎಲ್ಲಾ ಸೂಪರ್.

ಇದೇ ದೇವಕಾರ ಫಾಲ್ಸ್ ಗೆ ನಾನು ಮೊನ್ನೆ ಆದಿತ್ಯವಾರ ಹೋಗಿ ಬಂದೆ.

ಆದರೆ ನಿವೂ ನೋಡಿದ್ದು ಕೆಳಗಡೆಯಿಂದ. ನಾವು ನೋಡಿದ್ದು ಮೇಲ್ಗಡೆಯಿಂದ.

ಮೇಲ್ಗಡೆಯಿಂದ ಅದನ್ನು ಕಾನೂರು ವಜ್ರ ಅಂತಾರೆ.

ಫೋಟೋಗಳನ್ನು ಮುಂದಿನ ಬರವಣಿಗೆಗಳಲ್ಲಿ ಹಾಕ್ತೇನೆ.

congrats man.....

Aravind GJ ಹೇಳಿದರು...

ಐದು ವರ್ಷ ಪೂರ್ಣಗೊಳಿಸಿದಕ್ಕೆ ಶುಭಾಶಯಗಳು. ಕರ್ನಾಟಕದ ಬಹುತೇಕ ಜಾಗಗಳನ್ನು ನೋಡುವುದಕ್ಕೆ ನಿಮ್ಮ ಬ್ಲಾಗೇ ಪ್ರೇರಣೆಯಾಗಿದೆ.

ಪ್ರಶಾಂತ್ ಎಂ. ಹೇಳಿದರು...

ಅಭಿನಂದನೆಗಳು ರಾಜೇಶ್... ನಿಮ್ಮ ಚಾರಣ ಹೀಗೆ ಮುಮ್ದುವರೀತಿರಲಿ, ಹಾಗೇ ನಮಗೂ ಪ್ರೇರಣೆ ನೀಡ್ತಾ ಇರಿ... :)

PS: ಆ ಕೊನೇ ಸಾಲು ಮಾತ್ರ ಅಪ್ಪಟ ಸುಳ್ಳು... :D

ಸಿಂಧು sindhu ಹೇಳಿದರು...

ಪ್ರೀತಿಯ ರಾಜೇಶ್,

ಅಭಿನಂದನೆಗಳು. ಎಷ್ಟೊಂದ್ ಕಡೆ ಹೋಗಿದೀರಲ್ಲ ಅನ್ನೋ ಒಂದು ಹುಸಿ ಹೊಟ್ಟೆ ಉರಿ ಇದ್ರೂ, ನಿಜ್ವಾಗ್ಲೂ ನೀವಂದ್ರೆ ನಂಗಿಷ್ಟ. ಎಲ್ಲೆಲ್ಲೋ ಏನೇನೋ ಜಾಗಗಳು. ಹುಟ್ಟಾ ಅನ್ವೇಷಕ!
ಆ ಕೊನೇ ಸಾಲಿನ ಮೊದಲ ಭಾಗ ಅಪ್ಪಟ ಸುಳ್ಳು ಅಂತ ಕೂಗಿ ಹೇಳ್ತಾ ಇದೀನಿ.
ಹೀಗೇ ಹೋಗ್ತಿರಿ, ಬರೀತಿರಿ.

ಪ್ರೀತಿಯಿಂದ,
ಸಿಂಧು

Srik ಹೇಳಿದರು...

ಪ್ರೀತಿಯ ರಾಜೇಶ್,

ನಿಮ್ಮ ಈ ಬ್ಲಾಗ್ ಗೆ ಸುಮ್ಮನೆ ಬಂದು ಯಾವುದಾದರೂ ಹಳೆಯ ಲೇಖನ ತೆರೆದು ಓದುವುದು ನನ್ನ favourite pastime. ಅದು ಎಷ್ಟೋ ವಿಷಯಗಳು, ಅದೆಂಥಾ ಎಂಥಾದ್ದೋ ಊರುಗಳು, ಅರಿಯದ ಕಥೆಗಳು, ಮನಕಲುಕುವ ಮಾತುಗಳು - ಒಂದೇ ಎರಡೇ!

ಇಷ್ಟೆಲ್ಲಾ ಬರೆದು ಕೆಟ್ಟದಾಗಿ ಬರೆದರೂ.... ಎಂದು ಕೊನೆಯಲ್ಲಿ ಸೇರಿಸಿದ್ದು ಸರಿಇಲ್ಲ ನೋಡಿ.

ನಿಮ್ಮ blog ನ ನನ್ನ favourite ಲೇಖನ - "ಹುಲಿ ನೋಡುವ ಹುಚ್ಚು"!

ನಿಮ್ಮ blog ಇನ್ನೂ ಹೆಚ್ಚಿನ ಲೇಖನಗಳಿಂದ ನಮ್ಮಂತವರಿಗೆ ದಾರಿದೀಪವಾಗಲಿ ಎಂದು ಹಾರೈಸುತ್ತಾ, ಹುಟ್ಟು ಹಬ್ಬದ ಶುಭಾಶಯಗಳು -

ಶ್ರಿಕ್!

ರಾಧಿಕಾ ವಿಟ್ಲ ಹೇಳಿದರು...

ಐದು ವರ್ಷ ಪೂರೈಸಿದ್ದಕ್ಕೆ ಶುಭಾಶಯಗಳು :) ನಿಮ್ಮ ಬ್ಲಾಗ್ ನಮ್ಮಂಥ ಅದೆಷ್ಟೋ ಜನರಿಗೆ ಆಗಾಗ ತಂಪೆರೆಯುವ ಜೀವಜಲವಿದ್ದಂತೆ. ಹೀಗೆ ಬರೆಯುತ್ತಿರಿ...

Rakesh Holla ಹೇಳಿದರು...

Congrats...Nice pose:-)

Lakshmipati ಹೇಳಿದರು...

ರಾಜೇಶ್ ಅವರೆ,

ಶುಭಾಶಯಗಳು.
ನಿಮ್ಮ ಕೆಟ್ಟ ಲೇಖನಗಳನ್ನು ಓದಿದ ಮೇಲೆ ನಮಗೆ ಕರ್ನಾಟಕದಲ್ಲಿರುವ ಹಲವಾರು ಜಲಪಾತಗಳ ಪರಿಚಯವಾಗಿದ್ದು.

ಇನ್ನು ಹೆಚ್ಛು ಕೆಟ್ಟ ಲೇಖನಗಳನ್ನು ನಿಮ್ಮಿಂದ ನಿರೀಕ್ಷಿಸುತ್ತಿದ್ದೇವೆ.

ಲಕ್ಷ್ಮೀಪತಿ

prasca ಹೇಳಿದರು...

ನೀವು ಬರೆದು ರಾಶಿ ಹಾಕಿದ ಮಾಹಿತಿಗಳೇ ನಮಗೆ ದಾರಿದೀಪಗಳು. ನೀವು ಮೂಡಿಸಿದ ಹೆಜ್ಜೆಗಳ ಪಕ್ಕದಲ್ಲಿ ಹೆಜ್ಜೆಯಿಡಲು ಪ್ರಯತ್ನಿಸುವವರಿಗೆ ನಿಮ್ಮ ಹೆಜ್ಜೆಗಳ ಮೌಲ್ಯ ತಿಳಿದಿದೆ. ನಿಮ್ಮ ಪ್ರಕೃತಿ ಪ್ರೀತಿಗೆ ಶರಣು.
ಶುಭಾಷಯಗಳೊಂದಿಗೆ
ಪ್ರಸನ್ನ

VENU VINOD ಹೇಳಿದರು...

ಪ್ರಕೃತಿ ಮೇಲೆ ನಿಜವಾದ ಕಾಳಜಿ ಇರುವ ಹಾಗೂ ನಿರಂತರ ನಿಸರ್ಗಶೋಧ ಕೈಗೊಳ್ಳುವ ನಿಮ್ಮ ಬಗ್ಗೆ ಅನೇಕ ಬಾರಿ ಅಸೂಯೆಯಾದದ್ದಿದೆ ರಾಜೇಶ್..ನಿಮ್ಮ ಕಾಳಜಿಪೂರ್ಣ ಬರಹಗಳ ಮೂಲಕ ಬ್ಲಾಗ್ ಪ್ರಪಂಚದಲ್ಲಿ ನಿಮ್ಮದೇ ಆದ ಹೆಜ್ಜೆಯಿರಿಸಿದ್ದೀರಿ..ಅಭಿನಂದನೆಗಳು...

Ashok ಹೇಳಿದರು...

Hi Rajesh,

I've been looking into your blog for quite sometime now and tried to explore new places followin your blog. I did manage to find few and many are still a mystery. Off late my weekends I've been travelling all the way from Bangalore to udapi/Manipal to cover the places that you have been posting on your blog. I would be grateful to you if you could guide me to few of these amazing unexplored places.

Looking forward to hear from you.
regards,
Ashok
r.ashokgowda@gmail.com

ರಾಜೇಶ್ ನಾಯ್ಕ ಹೇಳಿದರು...

ಪ್ರತಿಕ್ರಿಯಿಸಿದ ಗೆಳೆಯರಿಗೆಲ್ಲರಿಗೂ ತುಂಬಾ ತುಂಬಾ ಧನ್ಯವಾದ.

ಶ್ರೀನಿಧಿ.ಡಿ.ಎಸ್ ಹೇಳಿದರು...

ಶುಭಾಶಯ! ನಿಮ್ಮಿಂದ ಕಲಿತುಕೊಂಡಿದ್ದು, ಕಲಿತುಕೊಳ್ಳೋದು ಬಹಳ ಇದೆ!

jayaramaiah kuppur ಹೇಳಿದರು...

Dear Rajesh Naik,
It’s my good luck that I chanced upon this blog. As soon as I read the first article, I decided to ransack your archives for personal use. As resolution of your photograps are reasonably high, it is possible to increase size without much loss of quality. While devouring all your archive, I could not help but to say a few words of appreciation for your great work. You are truly a great wanderer and your work is like our eqvivalent of THE NATIONAL GEOGRAPHIC TRAVELER for Karnataka! The efforts put by you in visiting places, taking beautiful photographs, compiling it to neat and attractive narrative is truly creative.
All that I need to do now is to edit out a few articles like that on Cricket (I do not consider Cricket as truly a world class sport. It's being driven to iconic status by media frenzy as they have noting better to advertise products in a sportless nation ), my treasure chest in PDF format is ready to enjoy. What can I say other than to appreciate whole heartedly your creative contribution meant for enjoyment by others? May God give you all the strength, entusiasm and resources to keep your good work going.

ರಾಜೇಶ್ ನಾಯ್ಕ ಹೇಳಿದರು...

ಜಯರಾಮಯ್ಯ,
ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು. ತಾವು ಈ ಬ್ಲಾಗನ್ನು ಮೆಚ್ಚಿ ಟಿಪ್ಪಣಿ ಬರೆದು ಪ್ರೋತ್ಸಾಹಿಸಿದ್ದೀರಿ. ತಮ್ಮ ವೈಯುಕ್ತಿಕ ಬಳಕೆಗೆಗಾಗಿ ಬ್ಲಾಗಿನ ಎಲ್ಲಾ ಲೇಖನಗಳನ್ನು ’ಡೌನ್‍ಲೋಡ್’ ಮಾಡಿದ್ದೀರಿ ಎಂದೂ ಹೇಳಿದ್ದೀರಾ. ಈ ’ವೈಯುಕ್ತಿಕ ಬಳಕೆ’ ಎಂಬುವುದು ತೀರಾ ಗೊಂದಲ ಉಂಟುಮಾಡುವ ಎರಡು ಶಬ್ದಗಳು. ಯಾವುದೇ ಕಾರಣಕ್ಕೂ ತಾವು ಈ ಬ್ಲಾಗಿನ ಚಿತ್ರಗಳನ್ನು ಅಥವಾ ಲೇಖನಗಳನ್ನು ಬೇರೆಡೆ ಪ್ರಕಟಿಸಲು ಅನುಮತಿ ಇರುವುದಿಲ್ಲ ಎಂಬ ವಿಷಯ ಗಮನದಲ್ಲಿರಲಿ.

ತಮ್ಮ ಪ್ರೋತ್ಸಾಹದ ಮಾತುಗಳಿಗಾಗಿ ಧನ್ಯವಾದಗಳು.

ರಾಜೇಶ್ ನಾಯ್ಕ ಹೇಳಿದರು...

ಶ್ರೀನಿಧಿ,
ಧನ್ಯವಾದ.

jayaramaiah kuppur ಹೇಳಿದರು...

Dear Rajesh,
Thank you very much for making your concerns clear. Let me make it very clear about what I meant by "for purely personal use" so that there will be no room for confusion. I literally meant what I said!
Those who plan to use your material for things other than purely personal will do so without giving a clue to you! It’s possible that some may mean well and still do it out of ignorance and any way, it is not an excuse. I would like to clarify that I am well aware of copy rights of intellectual property. I do not intend to use your material for any commercial use, in creation of any article with intention to publish or to use it in any other form for re-distribution. Even if I get a chance, I can never think of doing it as it amounts to violation of copy rights. Everything begins and ends with me!
The term “cannot be copied” is part of copy rights warning more to establish a legal footing than to inhibit fair use as “copying” is taking the first step towards an improper or malicious use. It does not forbid or inhibit fair use as long as it is confined within the personal use of the individual simply because no harm or loss of any type is caused to the copy rights owner. It’s with this insight of I use any material I like being made available on Web. I am a person of varied interests and tastes. I have done quite a bit of intellectual creative work that saves sweat and stress of many working in a different field. I do not relish many things that are legally permissible but are wrong morally and ethically. Accordingly, it is below my dignity and conscience to use someone else creative content for gains or to make a name of my own. Nothing is more disgraceful than intellectual deceit and dishonesty.
Some explanation regarding my unusual habits is not out of place. My use of terms “down loading”, “editing” and “PDF format” might have created the confusion in you. It’s just taking a screen image of contents to an electronic file just for a modified view of contents according to my need. My eye-sight problems or constraints are mainly responsible for my altered taste for large size images and fonts than what online blogs generally offer. The problem turned worse when I switched to a 16:9 LCD Monitor where still the dominant traditional 4:3 aspect designed contents either shrink or get cropped forcing constant alteration of Explorer Zoom from site to site. All the extra gymnastics I do is to fit in properly 4:3 to 16:9 display in a traditional two page book format view only for things I like the most. All this may not matter much for others, but, it matters to me!
My Email is jaykuppur@gmail.com. I checked for your Email and could not find it. I intend to send my residential address as proof of my honest intentions. I could have indicated my address in this response itself. I withheld it as it’s not proper to give it uncalled and unsought. As it is only a clarification post to address your concerns, you may delete it if you wish.