ಇದು ನನಗೆ ತುಂಬಾ ನಿರಾಸೆಯುಂಟುಮಾಡಿದ ಸ್ಥಳ. ಕಣಿವೆಯ ನೋಟ ಸುಂದರವಾಗಿದ್ದರೂ ಸ್ಥಳದಲ್ಲಿ ಗಲೀಜು ಹೆಚ್ಚೇ ಇತ್ತು. ಎಲ್ಲಕ್ಕಿಂತಲೂ ಮಿಗಿಲಾಗಿ ಇಲ್ಲಿದ್ದ ಜಲಧಾರೆ ಈಗ ಶಾಶ್ವತವಾಗಿ ಕಣ್ಮರೆಯಾಗಿದೆ ಎಂಬುದನ್ನು ಕೇಳಿ ಬಹಳ ಖೇದವಾಯಿತು. ಈ ಜಲಧಾರೆಯನ್ನು ನೋಡಲೆಂದೇ ಶಬರಿ ಕೊಳ್ಳಕ್ಕೆ ಬಂದರೆ ಅದು ದರ್ಶನ ನೀಡದೆ ಈಗ ೩ನೇ ವರ್ಷ ಎಂದು ಕೇಳಿ ಬಹಳ ನಿರಾಸೆಯಾಯಿತು.
ಕಣಿವೆ ತುಂಬಾ ವೃಕ್ಷಗಳೇ ತುಂಬಿಹೋಗಿವೆ. ಎಲ್ಲಾ ಉತ್ತಮ ಜಾತಿಯ ವೃಕ್ಷಗಳು. ವೃಕ್ಷಗಳ ತುಂಬಾ ಪಕ್ಷಿಗಳು. ಪಕ್ಷಿಗಳ ಕಲರವ ಕಿವಿಗಳಿಗೆ ಇಂಪಾದ ಅನುಭವವನ್ನು ನೀಡಿತು. ಎರಡೂ ಕಡೆಯಿಂದ ಮೇಲಕ್ಕೆ ಹಬ್ಬಿರುವ ಬೆಟ್ಟಗಳು. ಎರಡೂ ಬೆಟ್ಟಗಳು ಸಂಧಿಸುವ ಸ್ಥಳದಲ್ಲಿ ಇದ್ದ ಜಲಧಾರೆ ಮಾಯ. ಶಬರಿಯ ಮಂದಿರದ ಪಕ್ಕದಲ್ಲೇ ಎರಡು ನೀರಿನ ಹೊಂಡಗಳು. ಅಲ್ಲೇ ಶಬರಿ ರಾಮನಿಗೆ ನೀಡಿದ್ದ ಬೋರೆ ಹಣ್ಣುಗಳ ಮರ.
ಶ್ರೀರಾಮನ ದರ್ಶನಕ್ಕಾಗಿ ಶಬರಿ ಕಾದು ನಿಂತಿದ್ದು, ಆತ ಬಂದಾಗ ಬಟ್ಟಲು ತುಂಬಾ ಇದ್ದ ಬೋರೆ ಹಣ್ಣುಗಳಲ್ಲಿ ಸಿಹಿಯಾದುದು ಯಾವುದೆಂದು ತಾನೇ ತಿಂದು ಪರೀಕ್ಷಿಸಿ ಆ ಹಣ್ಣನ್ನು ಮಾತ್ರ ಶ್ರೀರಾಮನಿಗೆ ನೀಡಿದಳು. ರಾಮನು ಆಕೆಯ ಭಕ್ತಿಯನ್ನು ಮೆಚ್ಚಿ ವರ ಕೇಳು ಎಂದಾಗ, ಆಕೆ ರಾಮನ ತೊಡೆಯ ಮೇಲೆ ಶಿರವನ್ನಿಟ್ಟು ಅಲ್ಲೇ ಕೊನೆಯುಸಿರೆಳೆಯಲು ಇಚ್ಛಿಸಿದಾಗ ಆಕೆಗೆ ನೀರು ಬೇಕಿತ್ತು. ರಾಮ ಕುಳಿತಲ್ಲಿಂದಲೇ ಬಾಣ ಬಿಟ್ಟು ನೀರು ಪುಟಿದ ಸ್ಥಳವನ್ನು ಈಗ ಎಣ್ಣೆಹೊಂಡ ಎನ್ನಲಾಗುತ್ತದೆ. ಈ ಹೊಂಡದ ನೀರು ಎಂದಿಗೂ ಬತ್ತುವುದಿಲ್ಲ ಮತ್ತು ಇದನ್ನು ಪವಿತ್ರ ತೀರ್ಥವೆಂದು ಇಲ್ಲಿಗೆ ಬರುವ ಭಕ್ತಾದಿಗಳು ಭಾವಿಸುತ್ತಾರೆ. ಆದರೆ ಈ ಹೊಂಡ ತುಂಬಾ ಗಲೀಜಾಗಿತ್ತು. ಅದನ್ನು ಸ್ವಚ್ಛ ಮಾಡದೇ ಅದೆಷ್ಟು ವರ್ಷಗಳಾದವೋ.
ಇಲ್ಲಿರುವ ಬೋರೆ ಹಣ್ಣಿನ ಮರದ ಎಲ್ಲಾ ಹಣ್ಣುಗಳನ್ನು ಲೀನಾ ಮತ್ತು ಆಕೆಯ ತಂಡ ಪೂರ್ತಿಯಾಗಿ ಖಾಲಿಮಾಡಿತು. ಸರಿಯಾಗಿ ಹಣ್ಣಾದ ಮೇಲೆ ತಿಂದರೆ ಅದ್ಭುತ ರುಚಿಯಿರುತ್ತೆ ಎನ್ನುತ್ತಾ ಇನ್ನೂ ಪಕ್ವವಾಗದ ಹಣ್ಣುಗಳನ್ನು ಕೂಡಾ ಚೀಲದಲ್ಲಿ ತುಂಬಿಸಿಕೊಂಡರು. ಪುಕ್ಕಟೆ ಸಿಕ್ಕಿದರೆ ಬಾಚುವ ನಮ್ಮ ಚಾಳಿ ಕಂಡು ಸೋಜಿಗವೆನಿಸಿತು!
ಶಬರಿಯ ದೇಗುಲ ಬಹಳ ವಿಶಾಲ ಮುಖಮಂಟಪವನ್ನು ಹೊಂದಿದೆ. ನವರಂಗವೂ ಚೆನ್ನಾಗಿದೆ. ಗರ್ಭಗುಡಿಯಲ್ಲಿರುವ ಶಬರಿಯ ಮೂರ್ತಿಯು ಸಣ್ಣ ಆಕಾರದಾಗಿದ್ದು, ಹಸಿರು ಬಣ್ಣದ ಸೀರೆಯನ್ನು ತೊಡಿಸಲಾಗಿತ್ತು. ಈ ಸೀರೆಯಲ್ಲಿ ಶಬರಿ ಬಹಳ ಆಕರ್ಷಕವಾಗಿ ಕಾಣುತ್ತಿದ್ದಳು. ಅಲ್ಲೇ ಸಮೀಪದಲ್ಲಿ ರಾಮನ ಭೇಟಿಯ ನೆನಪಿಗಾಗಿ ಸಣ್ಣ ರಾಮ ದೇವಾಲಯವನ್ನೂ ನಿರ್ಮಿಸಲಾಗಿದೆ.
ಮಾಹಿತಿ: ವಿವೇಕ್ ಯೇರಿ
7 ಕಾಮೆಂಟ್‌ಗಳು:
Nice article...3rd photo is outstanding...
ರಾಜೇಶ್ ಅವರೇ,
ತಮ್ಮ ಚಿತ್ರ- ಬರಹಗಳೆಲ್ಲ ಇಷ್ಟವಾಯಿತು.
ತಾವು ಸುತ್ತಾಡಿದ ಸ್ಥಳಗಳನ್ನೆಲ್ಲ ನಮಗೂ ಪರಿಚಯಿಸುತ್ತಿದ್ದೀರ.
ಅಭಿನಂದನೆಗಳು.....
ಸೊಗಸಾದ ಚಿತ್ರಗಳು. ನೀರು ಚೆನ್ನಾಗಿರುವ ಕಲ್ಯಾಣಿ ಅಥವಾ ಹೊಂಡವನ್ನು ಇತ್ತೀಚೆಗೆ ನೋಡೇ ಇಲ್ಲ!! ಜನರೂ ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ರಾಕೇಶ್,
ಧನ್ಯವಾದ!
ರಾಘವೇಂದ್ರ,
ಧನ್ಯವಾದ.
ಅರವಿಂದ್,
ನೀರು ಇರೋದೇ ಕೊಳಕು ಮಾಡೋಕೆ! ಏನಂತೀರಿ? ಎಲ್ಲಾ ನೀರಿನ ಕರ್ಮ. ನೀರು ಇದ್ದಲ್ಲಿ ಗಲೀಜು ಮಾಡುವುದು ನಮ್ಮ ಚಾಳಿ. "ನೀರು ಚೆನ್ನಾಗಿರುವ ಕಲ್ಯಾಣಿ ಅಥವಾ ಹೊಂಡವನ್ನು ಇತ್ತೀಚೆಗೆ ನೋಡೇ ಇಲ್ಲ!!" ನಿಜವಾದ ಮಾತು.
Hi Rajesh
This is Naveen Gowda here. From 1 year I am visiting your blog and liked also.
From now onwards I am uploading Chandana TV Travel based programme ತಾಣ ಯಾನ broadcasting everyday at 09:30pm.
http://naveenashsn.blogspot.com/
That is my blog.
Please add my blog in your ನನ್ನಂತೆ list as ತಾಣ ಯಾನ_ಚಂದನ ವಾಹಿನಿ. I am new to these BLOG's.
Thank you.
http://naveenahsn.blogspot.com/
Rajesh pls add in your blog in "ನನ್ನಂತೆ" list as ತಾಣ ಯಾನ_ಚಂದನ ವಾಹಿನಿ
Hi Rajesh
Once again sorry for Disturbing you. Actually I have updated my http://naveenahsn.blogspot.com/ to http://thaana-yaana.blogspot.com/.
Because the videos I am uploading is Travel based programme telecating in Chandana Tv named Thaana Yaana. So I changed the blog name also
please change it.
And I have one more blog related to Hypnosis and Past life related videos blog. This programmes are telecating in SAMAYA News 24X7.
http://e-loka-aa-loka.blogspot.com/
Please add this blog also.(as ಈ ಲೋಕ ಆ ಲೋಕ)
Please dont mind.
Thanks and regards
Naveena.K
ಕಾಮೆಂಟ್ ಪೋಸ್ಟ್ ಮಾಡಿ