ಬುಧವಾರ, ಅಕ್ಟೋಬರ್ 22, 2008

ರಾಜ್ಯ ಮಟ್ಟದ ಚಾರಣ 2008 - ಉಡುಪಿ ಯೂತ್ ಹಾಸ್ಟೆಲ್

ಉಡುಪಿ ಯೂತ್ ಹಾಸ್ಟೆಲ್ 2008 ನವೆಂಬರ್ 13, 14, 15, ಮತ್ತು 16ರಂದು ರಾಜ್ಯ ಮಟ್ಟದ ಚಾರಣ ಕಾರ್ಯಕ್ರಮವನ್ನು ಆಯೋಜಿಸಿದೆ.

ಚಾರಣ ಹಾದಿಯ ವಿವರಗಳು ಈ ಕೆಳಗಿನಂತಿವೆ.

ನವೆಂಬರ್ 13: ಮಧ್ಯಾಹ್ನ ೩ ಗಂಟೆಯ ಬಳಿಕ ಬೇಸ್ ಕ್ಯಾಂಪ್-ಗೆ (ಮಾವಿನಕಾರು ಅಥವಾ ಬಾವುಡಿ) ಆಗಮನ. ಸಂಜೆಗೆ ಚಾರಣ ಹಾದಿಯ ಮತ್ತು ಅಲ್ಲಿನ ಸ್ಥಳಗಳ ಬಗ್ಗೆ ಮಾಹಿತಿ ಹಾಗೂ ಪರಿಚಯ, ನಿಯಮಗಳು ಮತ್ತು ಷರತ್ತುಗಳ ಬಗ್ಗೆ ಒಂದೆರಡು ಮಾತು.

ನವೆಂಬರ್ 14: ಮಾವಿನಕಾರಿನಲ್ಲಿ ಬೇಸ್ ಕ್ಯಾಂಪ್ ಆದರೆ ಅಲ್ಲಿಂದ ಬಾವುಡಿಗೆ ಚಾರಣ. ನಂತರ ಬಾವುಡಿ ಜಲಧಾರೆಗೆ ಚಾರಣ. ಜಲಧಾರೆಯಿಂದ ಬಾವುಡಿಗೆ ಹಿಂತಿರುಗಿ ನಂತರ ಮೇಗಣಿಗೆ ಚಾರಣ. (ಸುಮಾರು 15 ಕಿ.ಮಿ)

ನವೆಂಬರ್ 15: ಮೇಗಣಿಯಿಂದ ಗಾಳಿಗುಡ್ಡ, ಹದ್ದುಬರೆ ಮತ್ತು ದೇವಕುಂದ ಬೆಟ್ಟಗಳಿಗೆ ಚಾರಣ. (ಸುಮಾರು 10 ಕಿ.ಮಿ)

ನವೆಂಬರ್ 16: ಮೇಗಣಿಯಿಂದ ಹುಲ್ಲುಕುಡಿಕೆಗೆ ಚಾರಣ. ದಾರಿಯಲ್ಲಿ ಹರಿಗೆ ಜಲಧಾರೆಗೆ ಭೇಟಿ. (ಸುಮಾರು 9 ಕಿ.ಮಿ.) ಹುಲ್ಲುಕುಡಿಕೆಯಲ್ಲಿ ಸಣ್ಣ ಬೀಳ್ಕೊಡುಗೆ ಸಮಾರಂಭ.

ಈ ಚಾರಣ ಕಾರ್ಯಕ್ರಮದ ವೈಶಿಷ್ಟ್ಯವೇನೆಂದರೆ ಇದೇ ಕೊನೆಯ ಬಾರಿಗೆ ಈ ಸ್ಥಳಗಳನ್ನು ನೋಡುವ ಅವಕಾಶ. ಮೇಲೆ ತಿಳಿಸಿರುವ ಎಲ್ಲಾ ಹಳ್ಳಿಗಳು ಮತ್ತು ಸುತ್ತಮುತ್ತಲಿನ ಪಟ್ಟಾ ಜಮೀನು ಎಲ್ಲವನ್ನು ಉದ್ಯಮಿಯೊಬ್ಬರು ಖರೀದಿಸಿರುವುದರಿಂದ ಅವರು ಇನ್ನೊಮ್ಮೆ ಇಲ್ಲಿಗೆ ಬರಲು ಯಾರಿಗೂ ಅನುಮತಿ ನೀಡುವುದಿಲ್ಲ ಎಂದು ಎಚ್ಚರಿಸಿಯೇ, ಈ ಚಾರಣ ಕಾರ್ಯಕ್ರಮವನ್ನು ಆಯೋಜಿಸಲು ನಮಗೆ ಅನುಮತಿ ನೀಡಿದ್ದಾರೆ.

ಆಸಕ್ತಿಯುಳ್ಳವರು 9845937556, 9945414193 ಮತ್ತು 9342985704 ಈ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು.

2 ಕಾಮೆಂಟ್‌ಗಳು:

ಮಿಥುನ ಕೊಡೆತ್ತೂರು ಹೇಳಿದರು...

ನೀವು ನನ್ನ ಹೊಟ್ಟೆ ಉರಿಸುತ್ತಿದ್ದೀರಿ.
ವೈಶಿಷ್ಟ್ಯ ಓದಿ ತಲೆ ಕೆಟ್ಟಿತು.
ನನಗೆ ಬರಲಾಗುವುದಿಲ್ಲವೆಂದು!
ಆದರೂ ನಿಮ್ಮ ಸಂಘಟನೆ ಯಶಸ್ವಿಯಾಗಲಿ.

ರಾಜೇಶ್ ನಾಯ್ಕ ಹೇಳಿದರು...

ಮಿಥುನ,
ವಂದನೆ. ಬರಲು ಪ್ರಯತ್ನ ಮಾಡಿ.