ಭಾನುವಾರ, ಜೂನ್ 13, 2010

ಮಹಾಲಿಂಗೇಶ್ವರ ದೇವಾಲಯ - ಮಾವುತನಹಳ್ಳಿ


ಈ ದೇವಸ್ಥಾನವನ್ನು ಹುಡುಕಿ ತೆಗೆಯಬೇಕಾದರೆ ಸಾಕು ಸಾಕಾಯಿತು. ಮಾವುತನಹಳ್ಳಿ ತಲುಪಲು ಸುಮಾರು ಸಮಯ ತಗುಲಿತು. ಅಲ್ಲೇ ಮತ್ತೆ ಹಳ್ಳಿಗರೊಡನೆ ಚರ್ಚೆ. ಅಂತೂ ಕಡೆಗೆ ಮಹಾಲಿಂಗೇಶ್ವರ ದೇವಾಲಯ ತಲುಪಿದೆವೆನ್ನಿ. ಶಿಥಿಲಗೊಂಡಿರುವ ದೇವಾಲಯವಿದು. ಆದರೂ ಪೂಜೆ ನಿತ್ಯ ನಡೆಯುತ್ತದೆ.


ದೇವಾಲಯದ ಪ್ರಮುಖ ದ್ವಾರ ೫ ತೋಳಿನದ್ದಾಗಿದ್ದು ದ್ವಾರಪಾಲಕರನ್ನು ಹೊಂದಿದೆ. ಈ ದ್ವಾರಕ್ಕೆ ಸುಣ್ಣ ಬಳಿಯಲಾಗಿದೆ. ನವರಂಗ, ಅಂತರಾಳ ಮತ್ತು ಗರ್ಭಗುಡಿಗಳನ್ನು ಒಳಗೊಂಡಿರುವ ದೇವಾಲಯದ ಒಳಗೆ ಗೋಡೆಗಳಿಗೆಲ್ಲಾ ಧೂಳು ಅಂಟಿಕೊಂಡಿದೆ. ಗೋಡೆಗಳಿಗೆ ಅದೇನೋ ಬಣ್ಣ ಬಳಿದು ಅಂದಗೆಡಿಸಿದ್ದಾರೆ.


ತ್ರಿಕೂಟ ಶೈಲಿಯ ಈ ದೇವಾಲಯದ ಪ್ರಮುಖ ಗರ್ಭಗುಡಿಯಲ್ಲಿ ಶಿವಲಿಂಗವಿದೆ. ಉಳಿದೆರಡು ಗರ್ಭಗುಡಿಗಳಲ್ಲಿ ಒಂದರಲ್ಲಿ ಉಗ್ರನರಸಿಂಹ ಹಿರಣ್ಯಕಷಿಪುವಿನ ಉದರ ಬಗೆಯುವ ಮೂರ್ತಿ ಇದ್ದರೆ ಇನ್ನೊಂದು ಗರ್ಭಗುಡಿಯಲ್ಲಿರುವ ಸುಂದರ ಮೂರ್ತಿ ಯಾವ ದೇವರದ್ದು ಎಂದು ತಿಳಿಯಲಿಲ್ಲ. ಬಲ್ಲವರು ತಿಳಿಸಿದರೆ ಒಳ್ಳೆಯದು.


ನಾಲ್ಕು ಕಂಬಗಳ ನವರಂಗದಲ್ಲಿ ಆಸೀನನಾಗಿರುವ ಕರಿಕಲ್ಲಿನ ನಂದಿಯ ಮೂರ್ತಿ ಬಹಳ ಸುಂದರವಾಗಿದ್ದು ಫಳಫಳನೆ ಹೊಳೆಯುತ್ತದೆ. ಸಮೀಪದಲ್ಲೇ ದೊರಕಿರಬಹುದಾದ ಗಣೇಶನ ಸುಂದರ ಮೂರ್ತಿಯನ್ನು ನವರಂಗದಲ್ಲಿ ಇರಿಸಲಾಗಿದೆ. ಜೊತೆಗೆ ಇನ್ನೂ ೩ ಬೇರೆ ಬೇರೆ ಮೂರ್ತಿಗಳನ್ನೂ ಇರಿಸಲಾಗಿದೆ. ಅವೇನೆಂದು ತಿಳಿಯಲಿಲ್ಲ.


ದೇವಾಲಯದ ಹೊರಗೋಡೆ ಎಲ್ಲಾ ದಿಕ್ಕುಗಳಲ್ಲೂ ಕುಸಿಯುತ್ತಿದೆ. ಒಂದು ಕಡೆ ಅಕ್ಕಪಕ್ಕದಲ್ಲಿರುವ ಎರಡು ಕೆತ್ತನೆಗಳು ಗತವೈಭವವನ್ನು ಸಾರಿ ಹೇಳುವಂತೆ ನಿಂತುಕೊಂಡಿವೆ. ದೇವಾಲಯದ ಹೊರಗೋಡೆಯ ತುಂಬಾ ಇಂತಹ ಅಪೂರ್ವ ಕೆತ್ತನೆಗಳೇ ತುಂಬಿದ್ದವು ಎಂದು ಇವೆರಡು ಕೆತ್ತನೆಗಳನ್ನು ನೋಡಿ ಊಹಿಸಬಹುದು.


ದೇವಾಲಯದ ಹಿಂಭಾಗದಲ್ಲಿ ಪ್ರಮುಖ ಗರ್ಭಗುಡಿಯ ಆಸುಪಾಸಿನಲ್ಲಿ ಉರುಳಿಬಿದ್ದಿರುವ ಕಲ್ಲುಗಳನ್ನು ಗಮನಿಸಿದರೆ ಮೇಲೆ ಗೋಪುರವಿತ್ತೇನೋ ಎಂದು ಅನಿಸದೆ ಇರಲಾರದು. ಅಲ್ಲೆಲ್ಲ ಈಗ ಗಿಡಗಂಟಿಗಳು ಮತ್ತು ಪೊದೆಗಳು ತುಂಬಿಕೊಂಡಿವೆ. ದೇವಾಲಯ ಪುರಾತತ್ವ ಇಲಾಖೆಯ ಸುಪರ್ದಿಗೆ ಒಳಪಟ್ಟಿಲ್ಲ. ಶಿಥಿಲವಾಗಿರುವ ಹಿಂದೆ ಇದೂ ಒಂದು ಕಾರಣವಿರಬಹುದು.

6 ಕಾಮೆಂಟ್‌ಗಳು:

Aravind GJ ಹೇಳಿದರು...

ಲೇಖನ ಚೆನ್ನಾಗಿದೆ.

ಈ ದೇವಾಲಯದ ಬಗ್ಗೆ ನನಗೆ ತಿಳಿದಿರಲಿಲ್ಲ.

Srik ಹೇಳಿದರು...

Ah! This is sort of a discovery in deed! There are so many unknown temples with such magnonimous traditional backings around us. We just have to see one to believe in our fancied heritage!

Thanks Rajesh for this wonderful work. It is none less than a major historian doing his work. Hats off to your interest and dedication.

lakshmipati ಹೇಳಿದರು...

thanks for this nice article.

ರಾಜೇಶ್ ನಾಯ್ಕ ಹೇಳಿದರು...

ಅರವಿಂದ್, ಲಕ್ಷ್ಮೀಪತಿ
ಧನ್ಯವಾದ.

ಶ್ರೀಕಾಂತ್,
ಕರ್ನಾಟಕದ ಎಲ್ಲೆಡೆ ಇಂತಹ ಹಲವಾರು ದೇವಾಲಯಗಳು ಇವೆ. ಒಂದೊಂದರದ್ದು ಒಂದು ಕಥೆ. ಇತಿಹಾಸದ ಅವಿಭಾಜ್ಯ ಅಂಗವಾಗಿರುವ ಈ ಅದ್ಭುತಗಳು ಈಗಲೂ ಉಳಿದಿರುವುದು ನಮ್ಮ ಭಾಗ್ಯ. ಆದಷ್ಟನ್ನು ನೋಡಿಬಿಟ್ಟರೆ ನಾವು ಧನ್ಯ.

umesha mp ಹೇಳಿದರು...

Thanks for our village temple details,

UMESHA MP
MAVUTHANAHALLI

UMESHMP.PRAKASH ಹೇಳಿದರು...

Thanks Rajesh for our village details.Your work is wonderful work.Hats off to your interest and dedication.and other villages temple details for your work is very wonderfull details.Another interest for our village details plz contact me.

Our Village :MAVUTHANAHALLI
ARASIKRE TALUK
HASSAN DISTRICT-573125

Thanks,

UMESHA MP.PRAKASH
MAVUTHANAHALLI