ಭಾನುವಾರ, ಆಗಸ್ಟ್ 21, 2011

ಮಲ್ಲಿಕಾರ್ಜುನ ದೇವಾಲಯ - ಪಂಕಜನಹಳ್ಳಿ


ಪಂಕಜನಹಳ್ಳಿಯ ಮಲ್ಲಿಕಾರ್ಜುನ ದೇವಾಲಯ ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡಿದೆ. ಈ ದೇವಾಲಯ ನಿರಾಭರಣ ಸುಂದರಿಯಂತೆ. ಯಾವುದೇ ಕೆತ್ತನೆಯಿಲ್ಲದಿದ್ದರೂ ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿರುವ ವಿಶಿಷ್ಟ ದೇವಾಲಯ. ದೀಪಸ್ತಂಭ, ಮಹಾದ್ವಾರ, ಪ್ರಾಕಾರ, ಗೋಪುರವುಳ್ಳ ನಂದಿ ಮಂಟಪ, ಮುಖಮಂಟಪ, ವಿಶಾಲ ಸುಖನಾಸಿ, ನವರಂಗ, ಪ್ರದಕ್ಷಿಣಾ ಪಥ, ಅಂತರಾಳ ಮತ್ತು ಗರ್ಭಗುಡಿ ಇವೆಲ್ಲವನ್ನು ಒಳಗೊಂಡಿರುವ ಪ್ರಾಚೀನ ದೇವಾಲಯ ಬಹಳ ಅಪರೂಪವಾಗಿ ಕಾಣಬರುತ್ತದೆ.


ಮಹಾದ್ವಾರದ ಮುಂದೆ ೪೦ ಅಡಿ ಎತ್ತರದ ಆಕರ್ಷಕ ದೀಪಸ್ತಂಭವಿದೆ. ಇದರ ಮೇಲೆ ದೀಪ ಇಡಲು ಸಣ್ಣ ಮಂಟಪವನ್ನು ರಚಿಸಲಾಗಿದೆ. ಮಹಾದ್ವಾರವು ಸುಮಾರು ೧೫ ಅಡಿ ಎತ್ತರವಿದ್ದು ಸುಂದರ ದ್ವಾರ ಮತ್ತು ಕಂಬಗಳನ್ನು ಹೊಂದಿದ್ದು, ಇದರ ಬಾಗಿಲುಗಳನ್ನು ನೂತನವಾಗಿ ನಿರ್ಮಿಸಲಾಗಿದೆ. ಮುಖಮಂಟಪ ಮತ್ತು ಮಹಾದ್ವಾರದ ನಡುವಿರುವ ನಂದಿಮಂಟಪದಲ್ಲಿ ಆಕರ್ಷಕ ನಂದಿಯ ಮೂರ್ತಿ ಇದೆ.


ಮುಖಮಂಟಪವೂ ವಿಶಾಲವಾಗಿದ್ದು ೧೨ ಕಂಬಗಳನ್ನು ಹೊಂದಿದೆ. ಛಾವಣಿ ದುರ್ಬಲಗೊಂಡಿರುವ ಕಾರಣ ಅಲ್ಲಲ್ಲಿ ಕೆಲವು ಹೆಚ್ಚುವರಿ ಕಂಬಗಳನ್ನು ಆಸರೆಯಾಗಿ ನೀಡಲಾಗಿದೆ. ವಿಶಾಲವಾಗಿರುವ ಸುಖನಾಸಿಯನ್ನು ದಾಟಿದರೆ ಸಿಗುವ ನವರಂಗದಲ್ಲಿ ಅಸ್ಪಷ್ಟ ಕೆತ್ತನೆಗಳಿರುವ ನಾಲ್ಕು ಕಂಬಗಳಿವೆ. ಸಣ್ಣ ಗಾತ್ರದ ನಂದಿಯನ್ನು ನವರಂಗದಲ್ಲಿರಿಸಲಾಗಿದೆ. ನವರಂಗದ ನಂತರ ಪ್ರದಕ್ಷಿಣಾಪಥ. ಇದರ ಎಡಭಾಗದಲ್ಲಿರುವ ದ್ವಾರದಲ್ಲಿ ಒಳಹೊಕ್ಕು ಬಲಭಾಗದಲ್ಲಿರುವ ದ್ವಾರದ ಮೂಲಕ ಹೊರಬರಬೇಕು. ಈ ಎರಡೂ ದ್ವಾರಗಳ ಮೇಲ್ಗಡೆ ಶಿವಲಿಂಗದ ಕೆತ್ತನೆಯಿದೆ. ಎಡಭಾಗದಲ್ಲಿರುವ ದ್ವಾರದ ಒಂದು ಪಾರ್ಶ್ವದಲ್ಲಿ ಗಣೇಶನ ಒಂದು ದೊಡ್ಡ ಮತ್ತು ಒಂದು ಸಣ್ಣ ಮೂರ್ತಿಗಳನ್ನಿರಿಸಲಾಗಿದ್ದು ಇನ್ನೊಂದು ಪಾರ್ಶ್ವದಲ್ಲಿ ನಾಗನ ಕೆತ್ತನೆಯಿರುವ ಕಲ್ಲುಗಳನ್ನಿರಿಸಲಾಗಿದೆ.


ಇಲ್ಲಿ ಪ್ರದಕ್ಷಿಣೆ ಹಾಕುವುದೇ ರೋಮಾಂಚಕ ಅನುಭವ. ಒಂದು ಸಣ್ಣ ಕಿಂಡಿಯಿಂದ ಒಳಬರುವ ಮಂದ ಬೆಳಕೇ ಇಲ್ಲಿ ಆಸರೆ. ಆ ಮಂದ ಬೆಳಕಿಗೆ ನಮ್ಮ ಕಣ್ಣುಗಳು ಹೊಂದಿಕೊಳ್ಳುವಷ್ಟರಲ್ಲಿ ಅಲ್ಲಲ್ಲಿ ತಡಕಾಡುತ್ತಾ ಪ್ರದಕ್ಷಿಣೆ ಮುಗಿಸಿಯಾಗಿರುತ್ತದೆ.


ಶಿವಲಿಂಗಕ್ಕೆ ಮಲ್ಲಿಕಾರ್ಜುನನ ಆಕರ್ಷಕ ಮುಖವಾಡವನ್ನು ತೊಡಿಸಲಾಗಿತ್ತು. ಇಲ್ಲಿರುವ ಶಿವಲಿಂಗವನ್ನು ೧೦೧ ಲಿಂಗಗಳನ್ನು ಪ್ರತಿನಿಧಿಸುವ ೧೦೧ ಕಲ್ಲುಗಳನ್ನು ಒಟ್ಟುಗೂಡಿಸಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಇದೇ ಕಾರಣದಿಂದ ಈ ಸೀಮೆಯಲ್ಲಿ ಇಂದಿಗೂ ಬಹಳ ಪ್ರಸಿದ್ಧಿಯನ್ನು ಪಡೆದಿರುವ ದೇವಾಲಯ ಇದಾಗಿದೆ.


ಮಲ್ಲಿಕಾರ್ಜುನ ದೇವಾಲಯದ ಪಾರ್ಶ್ವದಲ್ಲೇ ಪಾರ್ವತಿ ದೇವಾಲಯವಿದೆ. ದೇವಾಲಯವು ಮುಖಮಂಟಪ, ನವರಂಗ ಮತ್ತು ಗರ್ಭಗುಡಿಯನ್ನು ಹೊಂದಿದ್ದು, ಗರ್ಭಗುಡಿಯಲ್ಲಿರುವ ಪಾರ್ವತಿಯ ಮೂರ್ತಿ ಸುಂದರವಾಗಿದೆ. ಗರ್ಭಗುಡಿಯ ಮೇಲೆ ಸುಂದರ ಗೋಪುರವೂ ಇದೆ.


ಪಂಕಜನಹಳ್ಳಿಯ ಈ ದೇವಾಲಯಗಳ ನಿರ್ಮಾತೃ ಯಾರು ಮತ್ತು ಯಾವಾಗ ನಿರ್ಮಾಣಗೊಂಡವು ಎಂಬ ಮಾಹಿತಿ ದೊರಕಲಿಲ್ಲ. ತಮ್ಮಲ್ಲಿ ಯಾರಿಗಾದರೂ ಈ ಮಾಹಿತಿ ಇದ್ದರೆ ದಯವಿಟ್ಟು ತಿಳಿಸಿಬಿಡಿ.

7 ಕಾಮೆಂಟ್‌ಗಳು:

sunaath ಹೇಳಿದರು...

ಉತ್ತಮ ಲೇಖನ, ಉತ್ತಮ ಚಿತ್ರಗಳು.

ಗಿರೀಶ್.ಎಸ್ ಹೇಳಿದರು...

where is this pankajanahalli..photos are all nice.

Team G Square ಹೇಳಿದರು...

Wonderful temple , last time we were near this place could not make it , but next time for sure will make. There is no much data available regarding who built it and when it was built.

siddeshwar ಹೇಳಿದರು...

Nice post. Basavanna is quite big and seems to be well preserved.

ರಾಜೇಶ್ ನಾಯ್ಕ ಹೇಳಿದರು...

ಸುನಾಥ,
ಧನ್ಯವಾದ ಸುನಾಥರೆ.

ಗಿರೀಶ್,
ಧನ್ಯವಾದ. ಸ್ವಲ್ಪ ಹುಡುಕಾಡಿ. ಸಿಕ್ಕಿಬಿಡುತ್ತೆ.

ಧೀರಜ್ ಅಮೃತಾ,
ಧನ್ಯವಾದ. ನೀವು ಹೇಳಿದಂತೆ ಈ ದೇವಾಲಯದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಪ್ರಾಚ್ಯ ವಸ್ತು ಇಲಾಖೆಯೂ ಈ ದೇವಾಲಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ. ಅವರು ಬಿಡುಗಡೆ ಮಾಡಿಲ್ಲವೆಂದರೆ ಮಾಹಿತಿ ಲಭ್ಯವಿಲ್ಲ ಎಂದೇ ನಂಬಬೇಕು.

ಸಿದ್ಧೇಶ್ವರ,
ಧನ್ಯವಾದ. ದೇವಾಲಯದ ಪ್ರಮುಖ ಆಕರ್ಷಣೆಯೇ ಬಸವಣ್ಣ. ಆತನನ್ನು ಚೆನ್ನಾಗಿ ಕಾಪಾಡಿಕೊಂಡು ಬರಲಾಗಿದೆ.

Ashok ಹೇಳಿದರು...

Hi Rajesh,

I've been looking into your blog for quite sometime now and tried to explore new places followin your blog. I did manage to find few and many are still a mystery. Off late my weekends I've been travelling all the way from Bangalore to udapi/Manipal to cover the places that you have been posting on your blog. I would be grateful to you if you could guide me to few of these amazing unexplored places.

Looking forward to hear from you.
regards,
Ashok
r.ashokgowda@gmail.com

mahesh.k.Thimmegowda ಹೇಳಿದರು...

hi mr Rajesh im mahesh pankajanahalli is my native place,and
i supporting u for more details i will give you sir , so my contact adress.Mahesh.K.Thimmegowda.Pankajanahalli.mob-9739420173