ಶನಿವಾರ, ಜುಲೈ 18, 2009

ಸೇನೇಶ್ವರ ದೇವಾಲಯ - ಬೈಂದೂರು


೧೩-೦೭-೨೦೦೮.

ಬೈಂದೂರಿನಲ್ಲಿ ಸೇನೇಶ್ವರ ದೇವಾಲಯವಿರುವುದು ತಿಳಿದಿತ್ತಾದರೂ ಇದೊಂದು ಪ್ರಾಚೀನ ದೇವಾಲಯವೆಂದು ಗೊತ್ತಿರಲಿಲ್ಲ. ಹಾಗೆಂದು ಗೊತ್ತಾದ ಬಳಿಕ ಅದೊಂದು ದಿನ ದೇವಾಲಯದೆಡೆ ಸುಳಿದೆ. ಮುಖಮಂಟಪ, ನವರಂಗ ಮತ್ತು ಗರ್ಭಗೃಹಗಳಿರುವ ಸಣ್ಣ ದೇವಾಲಯ. ನವರಂಗದ ಬಾಗಿಲು ೫ ತೋಳಿನದ್ದಾಗಿದೆ. ಬೀಗ ಹಾಕಲಾಗಿದ್ದರಿಂದ ಒಳಗೆ ತೆರಳಲಾಗಲಿಲ್ಲ.


ಮುಖಮಂಟಪದಲ್ಲೇ ಕರಿಕಲ್ಲಿನ ನಯವಾದ ಬಲೂ ಸುಂದರ ನಂದಿಯ ಮೂರ್ತಿಯಿದೆ. ಮುಖಮಂಟಪದಲ್ಲಿ ಕುಳಿತುಕೊಳ್ಳಲು ವ್ಯವಸ್ಥೆಯಿದೆ. ದೇವಾಲಯ ಸಂಪೂರ್ಣವಾಗಿ ಆಧುನಿಕತೆಯ ಆಡಂಬರದಲ್ಲಿ ಮುಳುಗಿಹೋಗಿದ್ದರೂ ತನ್ನ ನೈಜತೆಯನ್ನು ಉಳಿಸಿಕೊಂಡಿದೆ. ಇದಕ್ಕಾಗಿ ಬೈಂದೂರಿನ ಜನರಿಗೆ ಥ್ಯಾಂಕ್ಸ್ ಹೇಳಬೇಕು.


ಈ ಏಕಕೂಟ ದೇವಾಲಯದ ಗೋಪುರದ ಮೈಯಲ್ಲಿ ಯಾವುದೇ ಶಿಲ್ಪಕಲೆಯಿಲ್ಲ. ಆದರೆ ಗೋಪುರದ ತುದಿಯಲ್ಲಿ ನಾಲ್ಕೂ ದಿಕ್ಕುಗಳಿಂದ ಕೆಲವು ಕೆತ್ತನೆಗಳನ್ನು ಮಾಡಲಾಗಿದೆ. ನವರಂಗಕ್ಕೆ ಪ್ರಮುಖ ದ್ವಾರದ ಹೊರತಾಗಿಯೂ ದೇವಾಲಯದ ಎಡ ಪಾರ್ಶ್ವದಿಂದ ಇನ್ನೊಂದು ದ್ವಾರವಿದೆ. ಈ ದ್ವಾರಕ್ಕೆ ಮುಖಮಂಟಪವೂ ಇದ್ದು, ಛಾವಣಿಯಲ್ಲಿ ಕಮಲದ ಕೆತ್ತನೆಯಿದೆ.


ದೇವಾಲಯಕ್ಕೆ ಪ್ರದಕ್ಷಿಣೆ ಹಾಕುವಾಗ ಮೊದಲು ಕಾಲಭೈರವನ ಮೂರ್ತಿ ನಂತರ ಚತುರ್ಮುಖ ಬ್ರಹ್ಮನ ಮೂರ್ತಿ ಮತ್ತು ಕಡೆಯದಾಗಿ ಚಂಡೇಶ್ವರಿಯ ಮೂರ್ತಿಗಳನ್ನು ದೇವಾಲಯದ ಹೊರಗೋಡೆಯಲ್ಲಿ ದಿಕ್ಕಿಗೊಂದರಂತೆ ಇರುವ ಕವಾಟಗಳಲ್ಲಿ ಇರಿಸಲಾಗಿದೆ.


ಮಹನೀಯರೊಬ್ಬರು ಅಂತರ್ಜಾಲದಲ್ಲಿ ಈ ದೇವಾಲಯದ ಸಂಪೂರ್ಣ ವಿವರಗಳನ್ನು ಹಾಕಿರುವಾಗ ನಾನು ಇನ್ನು ಹೆಚ್ಚು ಬರೆಯುವುದು ಅನಾವಶ್ಯಕವೆನಿಸುತ್ತಿದೆ. ಅವರು ಬರೆದಿರುವುದನ್ನು ಇಲ್ಲಿ ಓದಬಹುದು.

3 ಕಾಮೆಂಟ್‌ಗಳು:

Aravind GJ ಹೇಳಿದರು...

ಸೊಗಸಾದ ಚಿತ್ರಗಳು ಹಾಗೂ ನಿರೂಪಣೆ. ಜೋರು ಮಳೆ ಶುರುವಾಗಿದೆ!! ಹಾಗೆ ಜಲಪಾತದ ಬಗ್ಗೆಯೂ ಲೇಖನ ಬರಲಿ!!!!

rakesh holla ಹೇಳಿದರು...

Nice place...

ರಾಜೇಶ್ ನಾಯ್ಕ ಹೇಳಿದರು...

ಅರವಿಂದ್,
ಒಂದರ ಹಿಂದೆ ಒಂದು ದೇವಾಲಯಗಳ ಲೇಖನ ಓದಿ(ನೋಡಿ) ಸಿಕ್ಕಾಪಟ್ಟೆ ಬೋರು ಆಗಿರಬೇಕಲ್ವೇ? ನನಗೂ ಬೇರೆ ದಾರಿಯಿಲ್ಲ. ಕಳೆದ ೧೦ ತಿಂಗಳಿನಿಂದ ಯಾವುದೇ ಚಾರಣ ಮಾಡಿಲ್ಲ. ಕೆಲಸದ ಒತ್ತಡ ಹಾಗೂ ಆರೋಗ್ಯದ ಒತ್ತಡ. ಪ್ರೋತ್ಸಾಹ ಇರಲಿ.

ರಾಕೇಶ್,
ಹ್ಮ್..