ಶನಿವಾರ, ಮೇ 30, 2015

ಜಲಸಂಗಿಯ ಮದನಿಕೆಯರು - ೫


ನಾಗಕನ್ಯೆ! ತೊಡೆಗಳಿಗೊಂದು ಹಾವನ್ನು ಸುತ್ತಿಕೊಂಡು, ಕೈಯಲ್ಲೊಂದಷ್ಟು ಹಾವುಗಳನ್ನೆತ್ತಿ ಹಿಡಿದು, ಉಗ್ರ ನೋಟ ಬೀರುತ್ತ ನಿಂತಿರುವ ಮದನಿಕೆ. ಮುಖದ ಮೇಲಿರುವ ವ್ಯಗ್ರ ಭಾವಕ್ಕೆ ತಕ್ಕಂತಿದೆ ಆಕೆಯ ಹರಡಿರುವ ಕೇಶರಾಶಿ.


ಎಡಗೈಯಲ್ಲೊಂದು ಗಿಳಿಯನ್ನು ಕೂರಿಸಿಕೊಂಡು ಕಿಂಚಿತ್ತೂ ಹಾನಿಯಾಗದೆ ಉಳಿದಿರುವ ಅದೃಷ್ಟವಂತೆ ಈಕೆ. ಸುಂದರವಾಗಿ ಕೆತ್ತಲ್ಪಟ್ಟಿರುವ ಆಕೆಯ ಬೆರಳುಗಳನ್ನು ಗಮನಿಸಿ.


ಧ್ಯಾನದಲ್ಲಿ ನಿರತಳಾಗಿರುವ ಮದನಿಕೆ.


ಬಲಗೈಯಲ್ಲಿ ಅದೇನೋ ಸಣ್ಣ ಮಗುವಿನಂತೆ ತೋರುವ ವಸ್ತುವನ್ನು ಹಿಡಿದು, ಅತ್ಯಾಕರ್ಷಕ ತಿರುವುಗಳನ್ನು ಹೊಂದಿರುವ ಮದನಿಕೆಯಿವಳು.

4 ಕಾಮೆಂಟ್‌ಗಳು:

Aravind GJ ಹೇಳಿದರು...

ಸೊಗಸಾಗಿದೆ!!

sunaath ಹೇಳಿದರು...

ಅಪೂರ್ವ ಶಿಲ್ಪಗಳನ್ನು ತೋರಿಸಿದ್ದೀರಿ. ಧನ್ಯವಾದಗಳು.

bannadi vardhan ಹೇಳಿದರು...

ಈಗಿನ ಕಾಲದಲ್ಲಿ ಅಂತಹ ಶಿಲ್ಪಗಳನ್ನು ಕೆತ್ತುವ ಶಿಲ್ಪಿಗಳು ಅಪರೂಪವೆನಿಸುತ್ತದೆ.ಧನ್ಯವಾದಗಳು

ರಾಜೇಶ್ ನಾಯ್ಕ ಹೇಳಿದರು...

ಅರವಿಂದ್, ಸುನಾಥ್, ಬನ್ನಾಡಿ ವರ್ಧನ್,
ಧನ್ಯವಾದ.