ಕಸಮಳಗಿ ಹಳ್ಳಿಯ ಶಾಲೆಗೆ ಶೌಚಾಲಯ ಕಟ್ಟಿಸುವ ಸಲುವಾಗಿ ಪಾಯ ಅಗೆಯುತ್ತಿರುವಾಗ ಸಿಕ್ಕಿದ ಅದ್ಭುತ ಮೂರ್ತಿ ಈ ಪಾರ್ಶ್ವನಾಥ ತೀರ್ಥಂಕರರದ್ದು. ಈ ಮೂರ್ತಿಯಿಂದಲೇ ಕಸಮಳಗಿ ರಾಷ್ಟ್ರದ ಜೈನ ಸಮುದಾಯದಲ್ಲಿ ಸಡನ್ನಾಗಿ ಪ್ರಸಿದ್ಧಿ ಪಡೆದುಕೊಂಡಿತು. ಈ ತೀರ್ಥಂಕರರ ವಿಗ್ರಹದ ವೈಶಿಷ್ಟ್ಯವೇನೆಂದರೆ ದಿನಕ್ಕೆ ೩ ಬಾರಿ ಬಣ್ಣ ಬದಲಾಯಿಸುವುದು! ಮಧ್ಯಾಹ್ನದವರೆಗೆ ಸಿಮೆಂಟ್ ಬಣ್ಣದಲ್ಲಿರುವ ವಿಗ್ರಹ, ಮಧ್ಯಾಹ್ನ ಒಂದು ಅಥವಾ ಎರಡು ಗಂಟೆಯ ಸಮಯಕ್ಕೆ ನೀಲಿ ಬಣ್ಣ ಪಡೆಯುತ್ತದೆ. ಮತ್ತೆ ಸಂಜೆ ಐದಾರು ಗಂಟೆಯ ಸಮಯದಲ್ಲಿ ಹಸಿರು ಬಣ್ಣ ಪಡೆದುಕೊಳ್ಳುತ್ತದೆ. ದಿನಕ್ಕೆ ೩ ಬಣ್ಣದಲ್ಲಿ ಕಾಣುವ ಈ ವಿಗ್ರಹವನ್ನು ಕೋಟ್ಯಂತರ ರೂಪಾಯಿ ನೀಡಿ ಖರೀದಿಸಲು ಜೈನ ಸಮುದಾಯದ ಸ್ಥಿತಿವಂತರು ರಾಷ್ಟ್ರದ ಎಲ್ಲೆಡೆಯಿಂದ ಬಂದರೂ, ಕಸಮಳಗಿ ಗ್ರಾಮಸ್ಥರು ವಿಗ್ರಹವನ್ನು ಬಿಟ್ಟುಕೊಡದೇ ತಮ್ಮಲ್ಲಿಯೇ ಇಟ್ಟುಕೊಂಡಿದ್ದಾರೆ. ವಿಗ್ರಹದ ಸುತ್ತಲೂ ಗಾಜಿನ ಪೆಟ್ಟಿಗೆಯ ತರಹ ರಚಿಸಲಾಗಿರುವುದರಿಂದ ಪ್ರತಿಬಿಂಬ ಕಾಣದಂತೆ ಚಿತ್ರ ತೆಗೆಯಲು ನಾನು ವಿಫಲನಾದೆ.
ಅಲ್ಲೇ ಇದ್ದ ಮಾಹಿತಿ ಫಲಕದ ಚಿತ್ರವನ್ನೇ ಇಲ್ಲಿ ಹಾಕಿದ್ದೇನೆ. ವಿಗ್ರಹದ ಬಗ್ಗೆ ಅದರಲ್ಲಿ ಚೆನ್ನಾಗಿ ವಿವರಿಸಿದ್ದಾರೆ. ಆದರೆ ೩ ಬಣ್ಣ ಪಡೆಯುವ ಬಗ್ಗೆ ಯಾವುದೇ ಮಾತಿಲ್ಲ! ದಿನಕ್ಕೆ ೩ ಬಣ್ಣ ಪಡೆಯುವ ಚಿತ್ರವಿದೆಯಾ ಎಂದು ಕೇಳಿದರೆ ಅಲ್ಲಿನ ಅರ್ಚಕ ನಗುತ್ತಾ ಇಲ್ಲವೆಂದ. ವಿಗ್ರಹವಂತೂ ಟಾಪ್ ಕ್ಲಾಸ್. ಅದ್ಭುತ ಕೆತ್ತನೆ. ಅಷ್ಟೇ ಸುಂದರ. ನಾವು ಮುಂಜಾನೆ ಸುಮಾರು ೧೧ ಗಂಟೆಯ ಹೊತ್ತಿಗೆ ತೆರಳಿದ್ದರಿಂದ ವಿಗ್ರಹ ಇನ್ನೂ ಸಿಮೆಂಟ್ ಬಣ್ಣದಲ್ಲಿತ್ತು.
5 ಕಾಮೆಂಟ್‌ಗಳು:
Most wonderful!
ತುಂಬ ಕುತೂಹಲಕರವಾಗಿದೆ. ವಿಗ್ರಹ ಚಂದವಿದೆ.
ಏನೇನನ್ನೋ ಹುಡುಕಿತೆಗೆಯುತ್ತಲೇ ಇರುತ್ತೀರ.
ಹುಟ್ಟಾ ಅನ್ವೇಷಕ!
-ಪ್ರೀತಿಯಿಂದ,ಸಿಂಧು
ರಾಜೇಶ್,
ಮಾಹಿತಿಗೆ ಧನ್ಯವಾದಗಳು. ಇದಕ್ಕೆ ಕಾರಣ ವಾತಾವರಣದ ಉಷ್ಣಾಂಶ ಕಾರಣವಾಗಿದ್ದಿರಬಹುದು ಎಂದು ನನ್ನ ಅನಿಸಿಕೆ.
ಲಕ್ಷ್ಮೀಪತಿ.
ಕಸಮಳಗಿಯ ಬಗ್ಗೆ ಕೇಳಿದ್ದೆ.. ಹೋದ ವರ್ಷ ಧಾರವಾಡಕ್ಕೆ ಹೋಗಿದ್ದಾಗ ಕಸಮಳಗಿಗೆ ಹೋಗೋಣ ಅಂದುಕೊಂಡಿದ್ದೆ, ಆದರೆ ಸಮಯಾಭಾವದಿಂದ ಆಗಲಿಲ್ಲ :(
ಸುನಾಥ್,
ಧನ್ಯವಾದ.
ಸಿಂಧು,
ಅನ್ವೇಷಕ!! ಹ್ಹ ಹ್ಹ.. ಚೆನ್ನಾಗಿದೆ.
ಲಕ್ಷ್ಮೀಪತಿ,
ವಿಗ್ರಹ ಬಣ್ಣ ಬದಲಿಸುವುದು ನಿಜವೋ ಸುಳ್ಳೋ.. ಆದರೆ ವಿಗ್ರಹವಂತೂ ಚೆನ್ನಾಗಿದೆ.
ಪ್ರಶಾಂತ್,
ಮುಂದಿನ ಸಲ ಮಿಸ್ ಮಾಡ್ಬೇಡಿ..
ಕಾಮೆಂಟ್ ಪೋಸ್ಟ್ ಮಾಡಿ