ಗುರುವಾರ, ಆಗಸ್ಟ್ 13, 2009

ಉಡುಪಿ ಯೂತ್ ಹಾಸ್ಟೆಲ್ ಕಾರ್ಯಕ್ರಮ - ೨೦೦೯


ಯೂತ್ ಹಾಸ್ಟೆಲ್ ಆಫ್ ಇಂಡಿಯಾದ ಉಡುಪಿ ಘಟಕ ೨ ರಾತ್ರಿ ಮತ್ತು ೩ ದಿನಗಳ ’ಐಲ್ಯಾಂಡ್ ಎಕ್ಸ್-ಪೆಡಿಷನ್’ ಎಂಬ ಕಾರ್ಯಕ್ರಮವೊಂದನ್ನು ೨೦೦೯ ಅಕ್ಟೋಬರ್ ೩೦, ೩೧ ಮತ್ತು ನವೆಂಬರ್ ೧ ರಂದು ಆಯೋಜಿಸಲಿದೆ.


ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಸಕ್ತಿಯಿದ್ದವರು ಮುಂಚಿತವಾಗಿ ಕೆಳಗೆ ಕೊಟ್ಟಿರುವ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.
ರಾಘವೇಂದ್ರ ನಾಯಕ್: ೯೯೪೫೪ ೧೪೧೯೩
ಪ್ರೊ.ಕೆ.ಎಸ್.ಅಡಿಗ: ೯೮೪೫೯ ೩೭೫೫೬
ಉಮಾನಾಥ್: ೯೪೪೮೮ ೩೬೦೭೦
ರಾಜೇಶ್ ನಾಯಕ್ ಗುಜ್ಜಾಡಿ: ೯೭೪೧೫ ೦೧೭೭೭
ವಿವೇಕ್ ಕಿಣಿ: ೯೪೪೮೨ ೬೨೨೪೫
ಗುರುದತ್: ೯೮೪೫೧ ೯೩೮೮೩


ಅಕ್ಟೋಬರ್ ೩೦: ಮುಂಜಾನೆ ೯ ಕ್ಕೆ ಬಾರ್ಕೂರಿನಲ್ಲಿ ಸೇರಬೇಕು. ಬಾರ್ಕೂರಿನ ಕೆಲವು ಪುರಾತನ ದೇವಾಲಯಗಳಿಗೆ ಭೇಟಿ ನೀಡಿ ಸಮೀಪದಲ್ಲೇ ಇರುವ ಬೆಣ್ಣೆಕುದ್ರು ಎಂಬಲ್ಲಿಗೆ ಚಾರಣ. ಬೆಣ್ಣೆಕುದ್ರುವಿನಿಂದ ಯಾಂತ್ರಿಕ ದೋಣಿಯಲ್ಲಿ ಸೀತಾನದಿಯಲ್ಲಿ ಪ್ರಯಾಣ. ದಾರಿಯಲ್ಲಿ ಒಂದೆರಡು ಕುದ್ರು (ನದಿಯುಂಟಾದ ದ್ವೀಪಗಳು) ಗಳಲ್ಲಿ ನಿಲುಗಡೆ. ನಂತರ ಸೀತೆ ಮತ್ತು ಸ್ವರ್ಣೆಯರ ಸಂಗಮವನ್ನು ದಾಟಿ, ನಂತರ ಸೀತಾನದಿ ಸಮುದ್ರ ಸೇರುವ ಅಳಿವೆ ಪ್ರದೇಶವಾಗಿರುವ ’ಕೋಡಿ ಕನ್ಯಾನ (ಹಂಗಾರಕಟ್ಟೆ)’ವನ್ನೂ ದಾಟಿ, ಸೀತೆಯ ಹಿನ್ನೀರಿನಲ್ಲಿ ಇನ್ನೂ ಮುಂದಕ್ಕೆ ಸಾಗಿ, ಒಂದೆಡೆ ದೋಣಿಯಿಂದ ಇಳಿದು ಪಾರಂಪಳ್ಳಿ ಎಂಬಲ್ಲಿರುವ ಸುಂದರ ಕಡಲ ತೀರದೆಡೆ ನಡಿಗೆ. ಮೊದಲ ದಿನ ರಾತ್ರಿ ಪಾರಂಪಳ್ಳಿ ಕಡಲ ತೀರದಲ್ಲೇ ಹಾಲ್ಟ್.


ಅಕ್ಟೋಬರ್ ೩೧: ಮುಂಜಾನೆಯೆ ಸಮುದ್ರ ತೀರದಲ್ಲೇ ಸೀತಾ ನದಿ ಸಮುದ್ರ ಸೇರುವ ಅಳಿವೆಯೆಡೆ (ಹಂಗಾರಕಟ್ಟೆ) ನಡಿಗೆ. ಬೀಚ್ ಟ್ರೆಕ್. ಅಳಿವೆಯನ್ನು ದಾಟಿ ಈ ಕಡೆ ಇರುವ ಬೆಂಗ್ರೆಗೆ ಪಯಣ. ಬೆಂಗ್ರೆಯಿಂದ ಹೂಡೆಯ ಮೂಲಕ ಮಲ್ಪೆಯೆಡೆ ಬೀಚ್ ಟ್ರೆಕ್. ಮಲ್ಪೆಗೆ ತುಸು ಮೊದಲು ಹಾಲ್ಟ್.


ನವೆಂಬರ್ ೧: ಮಲ್ಪೆಯೆಡೆ ಸಾಗಿ ಸಮುದ್ರದ ನಡುವೆ ಇರುವ ತೋನ್ಸೆಪಾರ್ ದ್ವೀಪದೆಡೆ ಪಯಣ. ಸಂಜೆ ಇಲ್ಲೇ ಕಾರ್ಯಕ್ರಮದ ಸಮಾರೋಪ.


ಕಳೆದ ವರ್ಷ ಆಯೋಜಿಸಿದ ಮಾವಿನಕಾರು-ಬಾವುಡಿ-ಮೇಗಣಿ-ದೇವಕುಂದ-ಹುಲ್ಕಡಿಕೆ ಚಾರಣದ ಯಶಸ್ಸಿನ ಬಳಿಕ ಇದೊಂದು ಬೇರೆ ತರಹದ ಪ್ರಯತ್ನ. ಮೇಗಣಿ ಚಾರಣದ ಲ್ಯಾಂಡ್-ಸ್ಕೇಪ್ ಬೇರೇನೆ ಮತ್ತು ಈ ಬಾರಿಯ ಕಾರ್ಯಕ್ರಮದ ಲ್ಯಾಂಡ್-ಸ್ಕೇಪ್ ಬೇರೇನೆ. ಎರಡಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಈ ಬಾರಿ ಉಡುಪಿ ಯೂತ್ ಹಾಸ್ಟೆಲ್ ಕಾರ್ಯಕ್ರಮವನ್ನು ಅರಣ್ಯದ ಪರಿಧಿಯಿಂದ ಹೊರಗಿಡಲು ಬೇರೆ ಕಾರಣಗಳೂ ಇವೆ. ಆದರೆ ಅವನ್ನೆಲ್ಲಾ ಇಲ್ಲಿ ಬರೆಯುವುದು ಅನಾವಶ್ಯಕ.

ಉಡುಪಿ ಜಿಲ್ಲೆಯ ಎರಡು ಪ್ರಮುಖ ನದಿಗಳು ಸ್ವರ್ಣಾ ಮತ್ತು ಸೀತಾ. ಇವೆರಡು ನದಿಗಳು ಹಂಗಾರಕಟ್ಟೆಯ ಸ್ವಲ್ಪ ಮೊದಲು ಸಂಗಮಿಸಿ ನಂತರ ಸೀತಾ ನದಿಯಾಗಿ ಸ್ವಲ್ಪವೇ ದೂರದಲ್ಲಿ ಸಮುದ್ರವನ್ನು ಸೇರುತ್ತದೆ. ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿರುವ ನದಿಗಳ ಹಿನ್ನೀರಿನ ಸೌಂದರ್ಯವನ್ನು ಸವಿದರೆ ಮತ್ತೆ ನೆರೆ ರಾಜ್ಯಕ್ಕೆ ಓಡಿ ಹೋಗಬೇಕಾಗಿಲ್ಲ!

10 ಕಾಮೆಂಟ್‌ಗಳು:

sunaath ಹೇಳಿದರು...

ಎಂದಿನಂತೆ ಕೆಲವು ಅತ್ಯುತ್ತಮ ನಿಸರ್ಗ ಚಿತ್ರಗಳನ್ನು ಕೊಟ್ಟಿದ್ದೀರಿ. ನೋಡಿ ಮನಸ್ಸಿಗೆ ಮುದವಾಗುತ್ತದೆ. ಧನ್ಯವಾದಗಳು.

ಸಾಗರದಾಚೆಯ ಇಂಚರ ಹೇಳಿದರು...

ಒಳ್ಳೆಯ ಚಿತ್ರಗಳು, ನಮಗೂ ಬರಲು ಆಸಕ್ತಿಯಿದೆ, ಆದರೆ ದೂರದ ದೇಶದಿಂದ ಬರುವುದೇ ದೊಡ್ಡ ಸಮಸ್ಯೆ

Unknown ಹೇಳಿದರು...

"ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿರುವ ನದಿಗಳ ಹಿನ್ನೀರಿನ ಸೌಂದರ್ಯವನ್ನು ಸವಿದರೆ ಮತ್ತೆ ನೆರೆ ರಾಜ್ಯಕ್ಕೆ ಓಡಿ ಹೋಗಬೇಕಾಗಿಲ್ಲ!"ಒಳ್ಳೆಯ quotes. ಏಕೆಂದರೆ ನಮ್ಮ ಕರ್ನಾಟಕದಲ್ಲೂ ತುಂಬಾ ಸ್ಥಳಗಳು ಇವೆ(ನಿಮ್ಮ blog ನೋಡಿದರೆ ನೋಡಿದರೆ ಗೊತ್ತಾಗುತ್ತೆ)

ರಾಜೇಶ್ ನಾಯ್ಕ ಹೇಳಿದರು...

ಸುನಾಥ, ಗುರುಮೂರ್ತಿ, ಬಾಬು
ಧನ್ಯವಾದಗಳು.

sudheer kumar ಹೇಳಿದರು...

realiy good programme.but i may miss this programme.best of luck sir

ರಾಜೇಶ್ ನಾಯ್ಕ ಹೇಳಿದರು...

ಸುಧೀರ್,
ಧನ್ಯವಾದ.

Unknown ಹೇಳಿದರು...

How to join you on your weekly trek. Dear ????

Shriharsha B S ಹೇಳಿದರು...

hi my dear friend. I m Shriharsha from Mysore (Banavasi) publisher of Sutthona Banni. Sorry yar.I got d photos of Bidar from my friend. I don't know whether he had taken those photos from ur blog & given me. And i didn't cut d copy right name from the photos. If mistake is happen from my side by unknowingly plz excuse me.And now i m asking ur permission that shall i delete that photos or remains as same? Shall i put ur name as photo courtesy? For more conversation plz mail me to shriharshabs@gmail.com Plz reply.
Ur blog is very interesting & nice to see in Kannada Language.
I m once again asking u sorry.

ಹೆಸರಲ್ಲೇನಿದೆ? ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಹೆಸರಲ್ಲೇನಿದೆ? ಹೇಳಿದರು...

ನಮಸ್ಕಾರ ರಾಜೇಶ್,

ಚಿತ್ರಗಳೆಲ್ಲ ತುಂಬಾ ಚೆನ್ನಾಗಿವೆ.. ಆದ್ರೆ registration ೩ ತಿಂಗಳು ಮೊದ್ಲೇ ಮುಗಿಸಿಬಿಟ್ಟ್ರಲ್ಲ :( . ನಮ್ಮಂತೋರ ಗತಿ ಏನು? ಪರವಾಗಿಲ್ಲ ಬಿಡಿ.. ಕಾರ್ಯಕ್ರಮ ಯಶಸ್ವಿ ಆಗ್ಲಿ.