ಮಂಗಳವಾರ, ಆಗಸ್ಟ್ 04, 2009

ಉದಯಗಿರಿ


೨೨-೦೫-೨೦೦೬.

ಆ ದಿನ ನಾವು ಹೊರಟದ್ದು ಶಿಂಗಾಣಿಬೆಟ್ಟಕ್ಕೆ ಚಾರಣ ಮಾಡುವ ಇರಾದೆಯಿಂದ. ಆದರೆ ಅದಾಗಲೇ ಸಮಯ ೧೧.೩೦ ಆಗಿದ್ದರಿಂದ ಗೋಪು ಗೋಖಲೆಯವರು ಇನ್ನು ಶಿಂಗಾಣಿಬೆಟ್ಟಕ್ಕೆ ಹೋಗುವುದು ಕಷ್ಟ ಎಂದಾಗ ಸಮೀಪದಲ್ಲೇ ಇದ್ದ ಉದಯಗಿರಿಗೆ ಚಾರಣ ಮಾಡುವ ನಿರ್ಧಾರ ಮಾಡಿದರು ದಿನೇಶ್ ಹೊಳ್ಳ. ಸ್ವತ: ಗೋಖಲೆಯವರೇ ಅವರ ಪರಿಚಯದ ಯುವಕನೊಬ್ಬನೊಂದಿಗೆ ನಮಗೆ ಮಾರ್ಗದರ್ಶಕರಾಗಿ ಬಂದರು.


ದೇವಸ್ಥಾನದ ಮುಂದೆಯೇ ಉದಯಗಿರಿಯ ನೋಟ ಲಭ್ಯ. ಸುಮಾರು ೭೫ ನಿಮಿಷಗಳ ಚಾರಣ. ಮೊದಲರ್ಧ ಕಾಡಿನ ನೆರಳಲ್ಲಾದರೆ ಉಳಿದರ್ಧ ಬಿಸಿಲಿನಲ್ಲಿ. ಆದರೂ ನಾನು ಮತ್ತು ಸಂದೀಪ ಎಂದಿನಂತೆ ಹಿಂದೆ. ಅದರಲ್ಲೂ ನಮ್ಮಿಬ್ಬರಲ್ಲಿ ನಾನು ಮತ್ತೂ ಹಿಂದೆ. ಸಂದೀಪ ಮುಂದೆ ಇದ್ದಾನೋ ಎಂದು ನಾನು ಆಗಾಗ ನೋಡುವುದು, ನಾನು ಹಿಂದೆ ಬರುತ್ತಿದ್ದೇನೋ ಇಲ್ವೋ ಎಂದು ಖಾತ್ರಿ ಮಾದಿಕೊಳ್ಳಲು ಸಂದೀಪ ಆಗಾಗ ಹಿಂತಿರುಗಿ ನೋಡುವುದು!


ಒಂದೆಡೆ ಕಪ್ಪೆಗುಡ್ಡ ಹಾಗೂ ಶಿಂಗಾಣಿಬೆಟ್ಟದ ದೃಶ್ಯ ಮತ್ತು ಇನ್ನೊಂದೆಡೆ ಕಾಡು. ಕಾಡು ಬಿಟ್ಟು ಹೊರಬಂದಾಗ ದೂರದಲ್ಲಿ ಉದಯಗಿರಿಯ ಶಿಖರ ತಲುಪಲು ಇರುವ ಕೊನೆಯ ಏರು ಏರತೊಡಗಿದ್ದರು ನಮ್ಮ ತಂಡದ ಮುಂಚೂಣಿಯ ಸದಸ್ಯರು. ಸುತ್ತ ಮುತ್ತಲಿನ ವೈಭವದ ದೃಶ್ಯವನ್ನು ಆಸ್ವಾದಿಸುವ ಸಲುವಾಗಿ ಮಾತ್ರ ಉದಯಗಿರಿಯ ಚಾರಣ ಕೈಗೊಳ್ಳಬೇಕು.


ಒಂದು ಸಲ ಕಾಡಿನ ಪರಿಧಿಯಿಂದ ಹೊರಬಂದು ನಂಟರ ಬೋಳುಗುಡ್ಡದಲ್ಲಿ ಚಾರಣ ಮಾಡುವಾಗ ಲಭ್ಯವಿರುವ ದೃಶ್ಯ ವೈಭವ ಅಸಾಮಾನ್ಯ. ಕಪ್ಪೆಗುಡ್ಡ, ಶಿಂಗಾಣಿಬೆಟ್ಟ, ಅಮೇದಿಕಲ್ಲು, ಎತ್ತಿನಭುಜ, ಕುಕ್ಕೆಯ ಕುಮಾರಪರ್ವತ ಮತ್ತು ಉದಯಗಿರಿಯ ಸಮೀಪದಲ್ಲೇ ಇರುವ ಇನ್ನೊಂದು ಕುಮಾರಪರ್ವತ ಹೀಗೆ ಬೆಟ್ಟಗಳ ರಮ್ಯ ನೋಟವೇ ಲಭ್ಯ.


ಉದಯಗಿರಿಯ ನೆತ್ತಿಯಲ್ಲಿ ನೆರಳಿಲ್ಲ. ಮತ್ತೊಂದು ಪಾರ್ಶ್ವದಲ್ಲಿರುವ ಇಳಿಜಾರಿನಲ್ಲಿ ಸಣ್ಣ ಮರವೊಂದಿದ್ದು ಇದರ ನೆರಳೇ ನಮಗೆಲ್ಲಾ ಸ್ವಲ್ಪ ಆರಾಮ ನೀಡಿದ್ದು. ಆದರೆ ಲಭ್ಯವಿರುವ ದೃಶ್ಯಾವಳಿಯ ಮುಂದೆ ಬಿಸಿಲಿನ ಝಳ ಯಾವ ಲೆಕ್ಕ?

4 ಕಾಮೆಂಟ್‌ಗಳು:

Rakesh Holla ಹೇಳಿದರು...

Nice article...

ರಾಜೇಶ್ ನಾಯ್ಕ ಹೇಳಿದರು...

ರಾಕೇಶ್,
ಧನ್ಯವಾದಗಳು.

sudheer kumar ಹೇಳಿದರು...

u remembered me udayagiri trek by this one,realy good trek for one day

ರಾಜೇಶ್ ನಾಯ್ಕ ಹೇಳಿದರು...

ಸುಧೀರ್,
ಥ್ಯಾಂಕ್ಸ್.