ಭಾನುವಾರ, ಜೂನ್ 29, 2014

ಹರಿಹರೇಶ್ವರ ದೇವಾಲಯ ಹಾಗೂ ನಾರಾಯಣ ದೇವಾಲಯ - ಸಾತೇನಹಳ್ಳಿ


ಹರಿಹರೇಶ್ವರ ದೇವಾಲಯವನ್ನು ಗದ್ದೆಗಳ ನಡುವೆ ದಿಬ್ಬವೊಂದರ ಮೇಲೆ ನಿರ್ಮಿಸಲಾಗಿದೆ. ದೇವಾಲಯದೊಳಗೆ ಸಾಧಾರಣ ಮಟ್ಟಿಗೆ ಸ್ವಚ್ಛತೆ ಇದ್ದರೂ ಹೊರಗಡೆ ಸುತ್ತಲೂ ಬೆಳೆದಿರುವ ಗಿಡಗಂಟಿಗಳನ್ನು ತೆಗೆದು ಸ್ವಚ್ಛಗೊಳಿಸಿದರೆ ದೇವಾಲಯ ಇನ್ನಷ್ಟು ಆಕರ್ಷಕವಾಗಿ ಕಾಣುವುದು.


ಗರ್ಭಗೃಹದ ದ್ವಾರವು ಪಂಚಶಾಖಗಳನ್ನು ಹೊಂದಿದ್ದು ಇವುಗಳಲ್ಲಿ ಒಂದೆರಡರಲ್ಲಿ ಮಾತ್ರ ಕೆತ್ತನೆಗಳಿವೆ. ದ್ವಾರದ ಮೇಲಿನ ಅಡ್ಡಪಟ್ಟಿಯಲ್ಲಿ ೫ ಸಣ್ಣ ಗೋಪುರಗಳನ್ನು ಕೆತ್ತಲಾಗಿದೆ.


ಗರ್ಭಗುಡಿಯ ಮೇಲೆ ಕದಂಬ ಶೈಲಿಯ ಸುಂದರ ಗೋಪುರವಿದೆ.


ಹಳ್ಳಿಯ ಸಂದಿಗೊಂದಿಯಲ್ಲಿ ಅಡಗಿಕೊಂಡಿರುವ ನಾರಾಯಣ ದೇವಾಲಯವನ್ನು ಹುಡುಕುವುದೇ ಕಷ್ಟದ ಕೆಲಸ. ದೇವಾಲಯದ ಮುಂದಿನಿಂದಲೇ ಹಾದುಹೋದರೂ ಅದರ ಇರುವಿಕೆಯ ಅರಿವಾಗುವುದಿಲ್ಲ! ಆ ರೀತಿಯಲ್ಲಿ ಹಳ್ಳಿಯ ಮನೆ ಮತ್ತು ಪರಿಸರದಲ್ಲಿ ತನ್ನ ಸನ್ನಿಧಾನವನ್ನು ನಾರಾಯಣ ಗೌಪ್ಯವಾಗಿರಿಸಿಕೊಂಡಿದ್ದಾನೆ.


ಒಬ್ಬ ಮಾತ್ರ ನುಸುಳಬಹುದಾದಷ್ಟು ಅಗಲವಿರುವ ದ್ವಾರದ ಬಳಿ ನಿಂತು ಒಳಗೆ ಇಣುಕಿದರೆ ಬಾವಲಿಗಳು ನನ್ನ ಮುಖದ ಮುಂದೆನೇ ಹಾರಿದ್ದು ತಿಳಿಯಿತೇ ವಿನ: ಬೇರೇನೂ ಕಾಣಲಿಲ್ಲ. ಒಳಗೆಲ್ಲಾ ಕತ್ತಲು ಆವರಿಸಿಕೊಂಡಿತ್ತು.


ಗರ್ಭಗುಡಿಯಲ್ಲಿರುವ ೬ ಅಡಿ ಎತ್ತರದ ಶಂಖಚಕ್ರಗದಾಪದ್ಮಧಾರಿಯಾಗಿರುವ ನಾರಾಯಣನ ಮೂರ್ತಿ ಬಹಳ ಚೆನ್ನಾಗಿದೆ. ಮಕರತೋರಣದಿಂದ ಅಲಂಕೃತ ಪ್ರಭಾವಳಿ ಕೆತ್ತನೆಯಲ್ಲಿ ವಿಷ್ಣುವಿನ ಹತ್ತು ಅವತಾರಗಳನ್ನು ತೋರಿಸಲಾಗಿದೆ.

ಮಾಹಿತಿ: ಪ್ರಾಚ್ಯ ವಸ್ತು ಇಲಾಖೆ

3 ಕಾಮೆಂಟ್‌ಗಳು:

Ashok ಹೇಳಿದರು...

Tumba Chennagide...

ನಂದರಾಜೇ ಅರಸ್ ಹೇಳಿದರು...

ಅಪರೂಪದ ಚಿತ್ರಗಳು ತುಂಬಾ ಚೆನ್ನಾಗಿವೆ
- ನಂದರಾಜೇ ಅರಸ್

ರಾಜೇಶ್ ನಾಯ್ಕ ಹೇಳಿದರು...

ಅಶೋಕ್, ನಂದರಾಜೇ ಅರಸ್,
ಧನ್ಯವಾದ.