ಭಾನುವಾರ, ಫೆಬ್ರವರಿ 09, 2014

ಅಂಬರಗುಡ್ಡ... ಮತ್ತೊಮ್ಮೆ...


ಈ ರಾಗಣ್ಣ ಫೋನ್ ಮಾಡಿ ಮಾಡಿ ಆದಿತ್ಯವಾರ ಎಲ್ಲಾದರೂ ಹೋಗೋಣ ಎಂದು ತಲೆ ತಿನ್ನುತ್ತಿದ್ದರು. ಅತ್ತ ಕಡೆಯಿಂದ ಸುಭಾಸ್ ಕೂಡಾ ಎಲ್ಲಾದರೂ ಹೋಗಬೇಕೆಂದು ಚಡಪಡಿಸುತ್ತಿದ್ದರು. ಇತ್ತ ಕಡೆ ಮಾದಣ್ಣ, ತನ್ನನ್ನು ೨ ತಿಂಗಳ ಹಿಂದೆ ಬಿಟ್ಟು ನಾವು ಚಾರಣವೊಂದಕ್ಕೆ ಹೋದ ಬಗ್ಗೆ ಇನ್ನೂ ಗರಂ ಆಗಿಯೇ ಇದ್ದು, ’ಓಲಾಂಡ ಪೋವೊಡೇ’ (ಎಲ್ಲಾದ್ರೂ ಹೋಗ್ಲೇಬೇಕು) ಎಂದು ಧಮಕಿ ಹಾಕುತ್ತಿದ್ದರು.


ಆದರೆ ಪ್ರಾಬ್ಲೆಮ್ ಏನಿತ್ತೆಂದರೆ, ನನಗೆ ಆ ರವಿವಾರ ಎಲ್ಲೂ ಹೋಗಲು ಆಸಕ್ತಿಯೇ ಇರಲಿಲ್ಲ. ಆದರೆ ಈ ಮೂವ್ವರು, ಕಿರಿಕಿರಿ ಮಾಡಿ, ನನ್ನನ್ನು ಅಂಬರಗುಡ್ಡಕ್ಕೆ ಹೊರಡಿಸಿಯೇಬಿಟ್ಟರು. ಸುಭಾಸ, ತಮ್ಮ ಕಾರಿನಲ್ಲೇ ನಮ್ಮನ್ನೆಲ್ಲ ಲೋಡ್ ಮಾಡಿ ಬಹಳ ಆಸಕ್ತಿಯಿಂದ ಹೊರಟರು.


ಅದಾಗಲೇ ನೋಡಿದ್ದ ಜಾಗವಾಗಿದ್ದರಿಂದ ಅಲ್ಲೇನು ದೃಶ್ಯ ಇದೆ ಎಂದು ನನಗೆ ಗೊತ್ತಿತ್ತು. ಹೀಗಾಗಿ ನನಗಷ್ಟು ಆಸಕ್ತಿಯಿರಲಿಲ್ಲ. ಆದರೆ ಉಳಿದ ಮೂವ್ವರಿಗೆ ಭಾರಿ ಆಸಕ್ತಿ, ಉಲ್ಲಾಸ, ಸಂತೋಷ.


ನಡಿಗೆ ತ್ರಾಸದಾಯಕವಾಗಿರಲಿಲ್ಲ. ಆದರೆ ಬಿಸಿಲಿನ ಝಳಕ್ಕೆ ಬಸವಳಿದುಹೋದೆ. ಐದು ವರ್ಷಗಳ ಬಳಿಕ ತೆರಳಿದಾಗ ಅಲ್ಲಿ ಒಂದೇ ಬದಲಾವಣೆ ಕಂಡುಬಂತು. ಅಂಬಾರಗುಡ್ಡದ ತುದಿಯಲ್ಲಿ ಒಂದು ಭಗವಾಧ್ವಜ ಹಾಗೂ  ಕ್ಷೇತ್ರಪಾಲನ ಸುಂದರ ಮೂರ್ತಿಯುಳ್ಳ ಸಣ್ಣ ದೇವಾಲಯ.


ಬೆಟ್ಟದ ಇಳಿಜಾರಿನಲ್ಲಿ ಒಂದು ಮರದ ನೆರಳಿನಲ್ಲಿ ಸುಮಾರು ಎರಡು ತಾಸು ರಿಲ್ಯಾಕ್ಸ್ ಮಾಡಿ ನಂತರ ನಿಧಾನವಾಗಿ ಬೆಟ್ಟ ಇಳಿದು ಕಾರಿನತ್ತ ಹೆಜ್ಜೆ ಹಾಕಿದೆವು.

4 ಕಾಮೆಂಟ್‌ಗಳು:

Aravind GJ ಹೇಳಿದರು...

ಸೊಗಸಾದ ಚಿತ್ರಗಳು!!

Srik ಹೇಳಿದರು...

Nice pictures.

Do you think its a good move to install a temple there? Or was the temple a pre-historic one?

Srik

Ashok ಹೇಳಿದರು...

nice place, beautiful photos..

ರಾಜೇಶ್ ನಾಯ್ಕ ಹೇಳಿದರು...

ಅರವಿಂದ್, ಅಶೋಕ್
ಧನ್ಯವಾದ.

ಶ್ರೀಕಾಂತ್,
ಇದು ಹಳೆಯ ದೇವಸ್ಥಾನವಲ್ಲ. ಕ್ಷೇತ್ರಪಾಲ ಅಲ್ಲಿರುವ ಕಾರಣ ನನಗೆ ತಿಳಿದಿಲ್ಲ. ಆದರೆ ಶಿಲುಬೆ ಅಥವಾ ಹಸಿರು ಧ್ವಜ ಬರುವ ಮೊದಲೇ ದೇವಾಲಯ ಬಂದರೆ ಒಳಿತು!!!!