ಬುಧವಾರ, ಅಕ್ಟೋಬರ್ 16, 2013

ಚನ್ನಕೇಶವ ದೇವಾಲಯ - ಆರಕೆರೆ


ಅರಕೆರೆಯ ಚನ್ನಕೇಶವನ ನೆಲೆ ಸಣ್ಣದಾದರೂ ಚೊಕ್ಕವಾಗಿರುವ ದೇವಾಲಯ. ಪುರಾತತ್ವ ಇಲಾಖೆ ಸುತ್ತಲೂ ಬೇಲಿ ಹಾಕಿಸಿ ದೇವಾಲಯಕ್ಕೆ ಕಾವಲುಗಾರನೊಬ್ಬನನ್ನು ನೇಮಿಸಿದ್ದು, ಚೆನ್ನಾಗಿ ನೋಡಿಕೊಳ್ಳುತ್ತಿದೆ.


ತ್ರಿಕೂಟ ಶೈಲಿಯ ಈ ದೇವಾಲಯದಲ್ಲಿ ಪ್ರಮುಖ ಗರ್ಭಗುಡಿಯ ಮೇಲೆ ಮಾತ್ರ ಗೋಪುರವಿದ್ದು, ಗೋಪುರದ ಮೇಲ್ಮೈಯಲ್ಲಿ ಯವುದೇ ಶಿಲ್ಪಕಲೆಯಿಲ್ಲ. ದೇವಾಲಯದ ಮುಖಮಂಟಪ ಬಿದ್ದುಹೋಗಿದ್ದು, ಇಕ್ಕೆಲಗಳಲ್ಲಿರುವ ೨ ಕಲ್ಲಿನ ಆಸನಗಳು ಮಾತ್ರ ಉಳಿದಿವೆ. ಎಲ್ಲಾ ೩ ಗರ್ಭಗುಡಿಗಳಿಗೆ ಸಾಮಾನ್ಯ ನವರಂಗವಿದ್ದು, ಪ್ರಮುಖ ಗರ್ಭಗುಡಿಗೆ ಮಾತ್ರ ಅಂತರಾಳವಿದೆ.


ಪ್ರಮುಖ ಗರ್ಭಗುಡಿಯಲ್ಲಿ ಚನ್ನಕೇಶವನ ಮೂರ್ತಿಯಿದೆ. ಬಲಕ್ಕಿರುವ ಗರ್ಭಗುಡಿಯಲ್ಲಿ ಲಕ್ಷ್ಮೀನರಸಿಂಹನ ಮೂರ್ತಿಯಿದ್ದು ಎಡಕ್ಕಿರುವ ಗರ್ಭಗುಡಿಯಲ್ಲಿ ವೇಣುಗೋಪಾಲನ ಮೂರ್ತಿಯಿದೆ. ಎಲ್ಲಾ ೩ ಮೂರ್ತಿಗಳು ಕರಿಕಲ್ಲಿನದ್ದಾಗಿದ್ದು ಬಹಳ ಸುಂದರವಾಗಿವೆ.


ದೇವಾಲಯದ ಹೊರಗೋಡೆಯಲ್ಲಿ ಸುಂದರ ಭಿತ್ತಿ ಶಿಲ್ಪಗಳಿವೆ. ಈ ಭಿತ್ತಿಚಿತ್ರಗಳನ್ನು ಒತ್ತೊತ್ತಾಗಿ ಕೆತ್ತಲಾಗದೆ ಸ್ವಲ್ಪ ಅಂತರದಲ್ಲಿ ಕೆತ್ತಲಾಗಿದೆ. ಈ ಕೆತ್ತನೆಗಳೇ ಈ ದೇವಾಲಯದ ಪ್ರಮುಖ ಅಂಶ.


ಲಕ್ಷ್ಮೀನರಸಿಂಹ ದೇವರ ಗರ್ಭಗುಡಿಯ ಹೊರಗೋಡೆಯಲ್ಲಿ ವಿಷ್ಣುವಿನ ಒಂಬತ್ತು ಅವತಾರಗಳನ್ನು ಬಿಂಬಿಸುವ ಕೆತ್ತನೆಗಳಿವೆ. ಸರಿಯಾದ ಮಾಹಿತಿ ನೀಡುವವರಿದ್ದರೆ ಕೆತ್ತನೆಗಳ ಬಗ್ಗೆ ತಿಳಿಕೊಳ್ಳಬಹುದಿತ್ತು.

3 ಕಾಮೆಂಟ್‌ಗಳು:

Teamgsquare ಹೇಳಿದರು...

Wonderful temple.

Ashok ಹೇಳಿದರು...

Tumba Chennagide..

ರಾಜೇಶ್ ನಾಯ್ಕ ಹೇಳಿದರು...

ಧೀರಜ್‍ಅಮೃತಾ, ಅಶೋಕ್
ಧನ್ಯವಾದ.