ಬುಧವಾರ, ಮೇ 06, 2009

ಇಲ್ಲೊಂದು ಚಂದದ ಜಲಧಾರೆ


ಮುಖ್ಯ ರಸ್ತೆಯಿಂದ ಒಂದು ಕಿ.ಮಿ ಇಳಿಜಾರಿನ ರಸ್ತೆಯನ್ನು ಕ್ರಮಿಸಿದರೆ ಈ ಪುಟ್ಟ ಹಳ್ಳಿ. ಇಲ್ಲಿ ಮನೆಯೊಂದರ ತೋಟದಲ್ಲಿ ಒಂದೈದು ನಿಮಿಷ ನಡೆದು ಪ್ರಾಂಗಣ ಗೋಡೆಯನ್ನು ಹಾರಿದರೆ ಮತ್ತೊಂದು ಕಡೆ ಹಳ್ಳಕ್ಕೇ ಕಾಲಿಟ್ಟಂತೆ. ಮರಗಳ ಮರೆಯಿಂದ ಸ್ವಲ್ಪ ಮುಂದೆ ಬಂದರೆ ಅಡಿಕೆ ತೋಟಗಳ ನಡುವೆ ಧುಮುಕುತ್ತಿರುವ ಈ ಚಂದದ ಜಲಧಾರೆಯ ದರ್ಶನ.


ಮನೆಯ ಬಳಿ ತೋಟಕ್ಕಿಳಿಯದೇ ಹಾಗೆ ಮೇಲಿನಿಂದಲೇ ನಡೆದರೆ ಜಲಧಾರೆಯ ಮೇಲ್ಭಾಗಕ್ಕೆ ಬರಬಹುದು. ಸುಮಾರು ೫೦ ಅಡಿ ಎತ್ತರವಿರುವ ಈ ಜಲಧಾರೆ ಮಳೆಗಾಲದ ಅತಿಥಿ. ವ್ಯವಸಾಯಕ್ಕಾಗಿ ಹಳ್ಳಿಗರು ಜಲಧಾರೆಯ ಮೇಲ್ಭಾಗದಲ್ಲಿ ಒಡ್ಡನ್ನು ನಿರ್ಮಿಸಿ ಹಳ್ಳದ ನೀರನ್ನು ಹಳ್ಳಿಯೆಡೆ ಹರಿಸಿಕೊಳ್ಳುವುದರಿಂದ ಮಳೆಗಾಲದ ನಂತರ ಇಲ್ಲಿ ನೀರಿರುವುದಿಲ್ಲ.


ಮಳೆ ಬೀಳಲಾರಂಭಿಸಿತ್ತು. ಆದರೂ ಜಲಧಾರೆಯ ಅಂದವನ್ನು ಹಳ್ಳದ ಮಧ್ಯೆ ಇರುವ ಬಂಡೆಗಳಲ್ಲೊಂದರ ಮೇಲೆ ಆಸೀನರಾಗಿ ೧೫-೨೦ ನಿಮಿಷ ಸವಿದೆವು. ಹಳ್ಳ ಈ ರೀತಿ ಹರಿಯುತ್ತಿರುವಾಗಲೇ ಇಲ್ಲಿಗೆ ಬರಬೇಕು. ಆಗಲೇ ಈ ಜಲಧಾರೆ ನೋಡಲು ಚಂದ.

7 ಕಾಮೆಂಟ್‌ಗಳು:

Rakesh Holla ಹೇಳಿದರು...

Hmmm
Yava Falls anta gottagta illvalla...
Chennagide>>

Padmini ಹೇಳಿದರು...

ತುಂಬಾ ತುಂಬಾ ಚೆನ್ನಾಗಿದೆ. ಆದರೆ ಇದು ಯಾವ ಹಳ್ಳಿ ಅಂತಾನೇ ನೀವು ಹೇಳಲಿಲ್ಲವಲ್ಲ?

Aravind GJ ಹೇಳಿದರು...

ಜಲಪಾತ ಯಾವುದೆಂದು ಗೊತ್ತಾಯಿತು!! ಮಳೆಗಾಲದಲ್ಲಿ ಹೋಗಬೇಕು.

ಚಿತ್ರಗಳನ್ನು ನೋಡಿದರೆ ಖುಷಿಯಾಗುತ್ತದೆ.

ರಾಜೇಶ್ ನಾಯ್ಕ ಹೇಳಿದರು...

ರಾಕೇಶ್, ಪದ್ಮಿನಿ, ಅರವಿಂದ್,

ಥ್ಯಾಂಕ್ಸ್. ಚಿತ್ರಗಳು ಇಷ್ಟವಾದರೆ ಅದೇ ಸಂತೋಷ. ಇನ್ನು ಈ ಜಲಧಾರೆ ದೊಡ್ಡ ಸಿಕ್ರೆಟ್ ಆಗಿ ಉಳಿದಿಲ್ಲ. ಜನರು ಬಂದು ಕೇಕೆ ಹಾಕುವುದು, ಗೌಜಿ ಗದ್ದಲ ಮಾಡುವುದು, ಗಲೀಜು ಮಾಡಿ ಹಾಕುವುದು ಇದನ್ನೆಲ್ಲಾ ನೋಡಿ, ಈಗ ಅಲ್ಲಿನ ಮನೆಯವರು ಪ್ರವಾಸಿಗಳನ್ನು ನೋಡಿದರೆ ಅಸಹನೆ ವ್ಯಕ್ತಪಡಿಸುತ್ತಾರೆ!

Unknown ಹೇಳಿದರು...

yava fall anta gottagilla davittu tilisi

Unknown ಹೇಳಿದರು...

ಮಳೆಗಾಲದ ಆನುಭವವನ್ನು ಉಣಬಡಿಸುತ್ತಿರುವ ನಿಮಗೆ ಧನ್ಯವಾದಗಳು, dimpitha thaloor, coorg

ರಾಜೇಶ್ ನಾಯ್ಕ ಹೇಳಿದರು...

ನಾಗರಾಜ್, ದಿಂಪಿತಾ
ಧನ್ಯವಾದ.