ಸಮುದ್ರಕ್ಕೆ ತಾಗಿಯೇ ಇರುವ ಗುಡ್ಡದ ಬಂಡೆಗಳ ನಡುವೆ ನಡೆದುಕೊಂಡು ಹೋದರೆ ಇಪ್ಪತ್ತು ನಿಮಿಷಗಳ ಬಳಿಕ ಒಂದು ಅಪೂರ್ವ ಕಡಲತೀರ ನಮ್ಮನ್ನು ಸ್ವಾಗತಿಸುತ್ತದೆ. ಇದೇ ಕಪ್ಪು ಮರಳಿನ ಬೀಚ್. ನೂರು ಮೀಟರಿಗೂ ಕಡಿಮೆ ಉದ್ದವಿರುವ ಈ ಬೀಚಿನಲ್ಲಿ ಇರುವುದು ಕಪ್ಪು ಮರಳು. ಸಮೀಪದಲ್ಲೇ ಇರುವ ಬಂಡೆಗಳನ್ನು ದಾಟಿ ಒಂದೆರಡು ನಿಮಿಷ ನಡೆದು ಆ ಕಡೆ ಹೋದರೆ ಅಲ್ಲಿ ಎಲ್ಲೆಡೆ ಇರುವಂತೆ ರೆಗ್ಯುಲರ್ ಮರಳಿನ ಬೀಚ್. ಆದರೆ ಇಲ್ಲಿ ಮಾತ್ರ ಕಪ್ಪು ಮರಳು.
ಕುತೂಹಲದಿಂದ ಒಂದಡಿ ಆಳಕ್ಕೆ ಅಗೆದು ನೋಡಿದೆವು. ಆದರೂ ಮರಳು ಕಪ್ಪು ಬಣ್ಣದ್ದೇ! ಇಲ್ಲಿ ಮರಳು ಕೊಳೆಯಿಂದ ಮಿಶ್ರಿತವಾಗಿ ಕಪ್ಪು ಬಣ್ಣಕ್ಕೆ ತಿರುಗಿದೆ ಎಂದೆನಿಸಿಬೇಡಿ. ಮರಳಿನ ಬಣ್ಣವೇ ಕಪ್ಪು. ಕೈಗೆತ್ತಿಕೊಂಡರೆ ಮಿರಿ ಮಿರಿ ಮಿಂಚುವ ಕಪ್ಪು ಮರಳು.
ಬೀಚಿನ ತುದಿಯಲ್ಲಿ ವಿವಿಧ ಗಾತ್ರದ ಶಂಖಗಳು, ಚಿಪ್ಪುಗಳು ರಾಶಿರಾಶಿಯಾಗಿ ಬಿದ್ದು ಬಣ್ಣದ ಲೋಕವನ್ನೇ ಸೃಷ್ಟಿಸಿವೆ. ಕಪ್ಪು ಮರಳಂತೂ ಫಳ ಫಳ ಹೊಳೆಯುತ್ತದೆ. ಇಲ್ಲಿನ ಸೌಂದರ್ಯಕ್ಕೆ ಮಾರುಹೋಗಿದ್ದ ಬ್ರಿಟೀಷರು ಇಲ್ಲೊಂದು ಪ್ರವಾಸಿ ಮಂದಿರವನ್ನು ನಿರ್ಮಿಸಿದ್ದು ಅದೀಗ ಪಾಳು ಬಿದ್ದಿದೆ. ಸಮುದ್ರ ತಟದಲ್ಲೇ ಸಿಹಿ ನೀರಿನ ಬಾವಿಯೊಂದಿದೆ. ಈ ಬಾವಿ ಹುಡುಕಬೇಕಾದರೆ ಸ್ವಲ್ಪ ಕಷ್ಟಪಡಬೇಕು.
ಈ ಕಪ್ಪು ಮರಳಿನ ರಹಸ್ಯ ತಿಳಿದುಕೊಳ್ಳುವ ಸಲುವಾಗಿ ನಾಗರಾಜ ರಘುವೀರ ಹಬ್ಬು ಎಂಬವರು ಸಂಶೋಧಕ ಆರ್.ಡಿ.ನಾಯ್ಕ ಇವರನ್ನು ಸಂಪರ್ಕಿಸಿದಾಗ, ಕೇರಳದ ಚಾವರಾ, ಓರಿಸ್ಸಾದ ಗಂಜಾಂ ಮತ್ತು ಕನ್ಯಾಕುಮಾರಿಯಲ್ಲಿ ಇಂತಹ ಕಪ್ಪು ಮರಳು ಕಾಣಸಿಗುತ್ತದೆ ಮತ್ತು ಹಲವಾರು ವರ್ಷಗಳಿಂದ ಇಲ್ಲಿನ ಕಡಲಂಚಿನಲ್ಲಿ ಇರುವ ಕಪ್ಪು ಗ್ರಾನೈಟ್ ಶಿಲೆಗಳಿಗೆ ರಭಸದಿಂದ ಬರುವ ತೆರೆಗಳು ಅಪ್ಪಳಿಸಿ ಒಳಕೊರೆತ ಉಂಟಾಗಿ ಈ ಕಪ್ಪು ಕಲ್ಲುಗಳು ಕಪ್ಪು ಮರಳಾಗಿ ಪರಿವರ್ತಿತವಾಗಿರಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
18 ಕಾಮೆಂಟ್ಗಳು:
ಕಪ್ಪು ಮರಳಿನ ಫೋಟೋ ನೋಡಿ ವಿಸ್ಮಯವಾಯಿತು.
ಬಹುಶಃ granite ಶಿಲೆಗಳಿಂದಲೇ ಈ ಮರಳು ಬಂದಿರಬಹುದು. ಆದರೆ, ಈ ಬೀಚು ಎಲ್ಲಿಯದು ಎಂದು ತಿಳಿಯಲಿಲ್ಲ.
ರಾಜೇಶ್,
ಫೋಟೋ , ಮಾಹಿತಿ ಚೆನ್ನಾಗಿದೆ ಆದರೆ ಎಲ್ಲಿ ಈ ಬೀಚ್ ಇದೆ ಎನ್ನೋದು ಬರೀಲಿಲ್ಲ...
ರಾಜೇಶ್,
ತುಂಬಾ ದಿನವಾಗಿತ್ತು ನಿಮ್ಮ ಬ್ಲಾಗಿಗೆ ಬಂದು. ಕ್ಷಮೆಯಿರಲಿ....ಶ್ರೀ ಶಂ ರ ಬ್ಲಾಗಿನಲ್ಲಿ ನಿಮ್ಮ ಲಿಂಕ್ ಕೊಟ್ಟಿದ್ದರಿಂದ ಮತ್ತೆ ಬಂದೆ....
ಕಪ್ಪು ಮರಳಿನ ಫೋಟೊ ತುಂಬಾ ಚೆನ್ನಾಗಿ ಬಂದಿದೆ...ಬೀಚ್ಗಳ ಫೋಟೊಗಳು ಚೆನ್ನಾಗಿವೆ....ಇನ್ನು ಮುಂದೆ ನಿಮ್ಮ ಬ್ಲಾಗಿಗೆ ಫೋಟೊ ನೋಡಲು ಬರುತ್ತೇನೆ...ಮತ್ತು ಲಿಂಕಿಸಿಕೊಳ್ಳುತ್ತೇನೆ....
ಆಹಾಂ! ಮನಃಪೂರ್ವಕವಾಗಿ ನಗಬೇಕೆ! ನೋಡಬನ್ನಿ ನಡೆದಾಡುವ ಭೂಪಟಗಳ!! ೧೦೦ಕ್ಕೆ ೨೦೦ ಶೇಕಡ ನಗು ಖಚಿತ!
ಫೋಟೋ ಚೆನ್ನಾಗಿದೆ ,ಬೀಚ್ ವರ್ಣನೆಯಿದೆ ಆದರೆ ಬೀಚ್ ಎಲ್ಲಿಯದು ಎನ್ನುವ ಮಾಹಿತಿ ಒದಗಿಸಿದ್ದರೆ ಅನುಕೂಲವಾಗುತ್ತಿತ್ತು...ಎರಡು ಸಲ ಓದಿ ನೋಡಿದೆ ಎಲ್ಲಿಯದು ಎಂದು ಎಲ್ಲಾದರೂ ಬರೆದಿರಬಹುದಾ ಎಂದು.
ತುಂಬಾ ರಿಫ್ರೆಶಿಂಗ್ ಆಗಿದೆ... ಬೀಚ್ ಎಲ್ಲಿಯದು ಅಂತ ಹೇಳದೇ ಸಸ್ಪೆನ್ಸ್ ಉಳಿಸಿಕೊಂಡಿದ್ದೀರಾ! :)
ಕನ್ಯಾಕುಮಾರಿಲಿ ನೋಡಿದ್ದೆ ಕಪ್ಪು ಮರಳು, ಇದು ಎಲ್ಲೀದು ?
ಯಾವೂರು ಸಾರ್..?
Rajesh,
Welcome back.
Thanks for this peculiar information. Would like to visit it soon :)
This seems to be just an informational post, unlike your most others!
Cheers,
Srik
lovely!
thankz for not mentioning the place:)li
gud place!
thank you for not giving the beach name.
ಹೌದು ರಾಜೇಶ್. ಎಲ್ಲರೂ ಕೇಳ್ತಿದಾರೆ. ಹೇಳಿ ಎಲ್ಲಿದೆ ಈ ಬೀಚ್.
ಕಪ್ಪು ಮರಳಿನ ಬೀಚ್!! ಚೆನ್ನಾಗಿದೆ!!!!
ಆಗಂತುಕ,
ನಿಮ್ಮ ಹೆಸರೇ ಹೇಳಿಲ್ಲವಲ್ಲ!
ಸುನಾಥ್, ವೇಣು, ಮನಸ್ವಿ, ಶ್ರೀ, ಅನ್ನಪೂರ್ಣ, ಸುಶ್ರುತ ಮತ್ತು ವಿಕ್ರಮ್,
ವಿವರಗಳನ್ನು ಇಲ್ಲಿ ಹಾಕಿದರೆ ಎಲ್ಲರಿಗೂ ಇನ್ನೊಂದು ಸ್ವಚ್ಛ ಜಾಗದ ಬಗ್ಗೆ ಹೇಳಿದಂತಾಗುತ್ತದಲ್ಲವೇ? ಆ ಜಾಗ ಕೆಡಲು ಅದೇ ಆರಂಭ ಆದಂತಾಗುತ್ತದೆ. ಈ ಜಾಗದ ಗುತ್ತಿಗೆ ನಾನು ಪಡೆದಂತೆ ಮಾತಾಡುತ್ತಿದ್ದೇನೆ ಎಂದು ದಯವಿಟ್ಟು ತಿಳಿದುಕೊಳ್ಳಬೇಡಿ. ಎಲ್ಲಾ ವಿವರಗಳನ್ನು ನೀಡಿ ಪರೋಕ್ಷವಾಗಿ ಆ ಸ್ಥಳದ ಅಂದವನ್ನು ಹಾಳುಗೆಡುವುದರಲ್ಲಿ ನಾನು ಪ್ರಮುಖ ಪಾತ್ರ ವಹಿಸುತ್ತಿದ್ದೇನೆ ಎಂದು ಈ ಬ್ಲಾಗ್ ಓದುಗರಲ್ಲಿ ಒಬ್ಬರಾದ ಶ್ರೀಕಾಂತ್ ಕೆ ಎಸ್ ಅವರು ನನಗೆ ಮನದಟ್ಟು ಮಾಡಿದ ಬಳಿಕ ನಾನು ಯಾವುದೇ ಸ್ಥಳದ ಬಗ್ಗೆ ಪೂರ್ಣ ವಿವರಗಳನ್ನು ನೀಡುತ್ತಾ ಇಲ್ಲ. ಕ್ಷಮೆ ಇರಲಿ.
ಶಿವು,
ಕ್ಷಮೆ ಕೇಳಿ ನನಗೆ ಯಾಕೆ ಮುಜುಗರ ಮಾಡುತ್ತೀರಾ? ನಿಮಗೆ ಯಾವಾಗ ಪುರುಸೊತ್ತಾಗುತ್ತೋ ಆವಾಗ ಇಲ್ಲಿಗೆ ಬರುವಿರಂತೆ.
ಶ್ರೀಕಾಂತ್,
ಇದೊಂದು ’ಬೋರಿಂಗ್ ಪೋಸ್ಟ್’ ಎಂದೇ ಕಾಟಾಚಾರಕ್ಕಾಗಿ ಪೋಸ್ಟ್ ಮಾಡಿದ್ದೆ. ಆದರೆ ಟಿಪ್ಪಣಿಗಳನ್ನು ನೋಡಿ ನನ್ನ ಅಭಿಪ್ರಾಯ ಬದಲಾಯಿಸಬೇಕಾಯಿತು.
ಶ್ರೀ ನಿಧಿ ಮತ್ತು ಅನಂತ,
ಧನ್ಯವಾದಗಳು.
ಅರವಿಂದ,
ಥ್ಯಾಂಕ್ಸ್
ಗುರು,
ಮೊದಲಿಗೆ ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ ನಿಮ್ಮ ಟಿಪ್ಪಣಿಯನ್ನು ಅಳಿಸಿದ್ದಕ್ಕಾಗಿ. ತಾವು ಈ ಬೀಚ್ ಎಲ್ಲಿದೆ ಎಂದು ನಿಮ್ಮ ಟಿಪ್ಪಣಿಯಲ್ಲಿ ತಿಳಿಸಿದ್ದರಿಂದ ಅದನ್ನು ಡಿಲೀಟ್ ಮಾಡಿದ್ದೇನೆ. ಇಂತಹ ಸ್ಥಳಗಳು ಪ್ರವಾಸಿಗರಿಗೆ ತಿಳಿಯದೇ ಇದ್ದರೆ ಒಳ್ಳೆಯದಲ್ಲವೇ? ಆ ಸ್ಥಳ ಇನ್ನೂ ಸ್ವಲ್ಪ ಹೆಚ್ಚಿನ ದಿನ ಸ್ವಚ್ಛವಾಗಿಯೂ, ಸುಂದರವಾಗಿಯೂ ಇರುತ್ತದೆ.
i understand Rajesh... And I understand the sentiments which you and srikanth share. You can add me to that list of sharing the same sentiments :)
photos are beautiful....
I had seen similar beaches in Konkan region, Maharastra . Particularly Raigad district.
Nice photos... nice info
ಗುರು,
ಧನ್ಯವಾದಗಳು.
ಅಶೋಕ್, ವಿಜಯ್
ಥ್ಯಾಂಕ್ಸ್.
ಮಧುರಾ,
ಬರ್ತಾ ಇರಿ. ಹಾಗೇನೇ ಮಾಹಿತಿಗಾಗಿ ಥ್ಯಾಂಕ್ಸ್.
ಕಾಮೆಂಟ್ ಪೋಸ್ಟ್ ಮಾಡಿ