ಸೋಮವಾರ, ಡಿಸೆಂಬರ್ 01, 2008

ಉಡುಪಿ ಯೂತ್ ಹಾಸ್ಟೆಲ್ ರಾಜ್ಯ ಮಟ್ಟದ ಚಾರಣದ ಇನ್ನಷ್ಟು ಚಿತ್ರಗಳು


ಇಲ್ಲಿವೆ ನಾನು ತೆಗೆದ ಕೆಲವು ಚಿತ್ರಗಳು. ಈ ಚಾರಣ ಕಾರ್ಯಕ್ರಮ ನನಗಂತೂ ಬಹಳ ಸುಂದರ ನೆನಪು. ಉಡುಪಿ ಯೂತ್ ಹಾಸ್ಟೆಲ್ ಗೆಳೆಯರ ಪರಿಚಯವಾಗಿದ್ದು ೨೦೦೪ರಲ್ಲಿ. ಅದಾಗಲೇ...
೧. ಕಿಲ್ಲೂರು-ಬೊಳ್ಳೆ-ಕುದುರೆಮುಖ-ನಾಲೂರು-ಸಂಸೆ ರಾಜ್ಯ ಮಟ್ಟದ ಚಾರಣ,
೨. ಮಾಳ-ಮಾಳ ಚೌಕಿ-ಕುರಿಂಜಾಲು-ಭಗವತಿ ರಾಜ್ಯ ಮಟ್ಟದ ಚಾರಣ,
೩. ಅಮಾಸೆಬೈಲು-ಹುಲ್ಲುಗುಡ್ಡ-ಎಮ್ಕೆಲ್ ಕೆರೆ-ಆಗುಂಬೆ ರಾಜ್ಯ ಮಟ್ಟದ ಚಾರಣ ಮತ್ತು
೪. ಕೂಡ್ಲು-ಬರ್ಕಣ-ಮಲ್ಲಂದೂರು-ನರಸಿಂಹ ಪರ್ವತ-ಸಿರಿಮನೆ ರಾಜ್ಯ ಮಟ್ಟದ ಚಾರಣಗಳನ್ನು
ಯಶಸ್ವಿಯಾಗಿ ನಿಭಾಯಿಸಿ ಅನುಭವವಿದ್ದ ಗುಂಪು ಇದು.


ಬೇಸ್ ಕ್ಯಾಂಪ್ ಮಾವಿನಕಾರಿಗೆ ಸಂಜೆಯ ಹೊತ್ತಿಗೆ ಆಗಮಿಸಿದ ಪರಮೇಶ್ವರ ಭಟ್ಟರು ಅಲ್ಲೇ ಸಮೀಪದಲ್ಲಿ ಹರಿಯುವ ತೊರೆಯ ಬಳಿ ಕುಳಿತು ರಿಲ್ಯಾಕ್ಸ್ ಮಾಡುತ್ತಿದ್ದಾರೆ.


ಆದರೆ ಈ ಎಲ್ಲಾ ಚಾರಣ ಕಾರ್ಯಕ್ರಮಗಳು ನನಗೆ ಇವರ ಪರಿಚಯವಾಗುವ ಮೊದಲೇ ಆದ ಕಾರ್ಯಕ್ರಮಗಳು. ಆಯೋಜಕರಲ್ಲಿ ಒಬ್ಬನಾಗಿ ಮಾವಿನಕಾರು-ಬಾವುಡಿ-ತೀರ್ಥಬರೆ-ಮೇಗಣಿ-ದೇವಕುಂದ-ಮೇಗಣಿ-ಹುಲ್ಕಡಿಕೆ ಚಾರಣ ನನಗೆ ಅವಿಸ್ಮರಣೀಯ ನೆನಪು. ೨೦೦೩ರ ಬಳಿಕ ೫ ವರ್ಷಗಳ ನಂತರ ಉಡುಪಿ ಯೂತ್ ಹಾಸ್ಟೆಲ್ ಒಂದು ರಾಜ್ಯ ಮಟ್ಟದ ಚಾರಣವನ್ನು ಯಶಸ್ವಿಯಾಗಿ ಆಯೋಜಿಸಿತು.


ಹೆಚ್ಚಿನ ಚಿತ್ರಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಈ ರಾಜ್ಯ ಮಟ್ಟದ ಚಾರಣದಲ್ಲಿ ಭಾಗವಹಿಸಿದ ಚಾರಣಿಗರಲ್ಲಿ ಕೆಲವರು ತೆಗೆದ ಚಿತ್ರಗಳನ್ನು ಈ ಕೆಳಗಿನ ಕೊಂಡಿಗಳಲ್ಲಿ ಕಾಣಬಹುದು.
ರವಿ ಎಸ್. ಘೋಷ್, ಪರಮೇಶ್ವರ ಭಟ್, ಗೌರಿಶಂಕರ್, ವಿನಯ್, ಜಗದೀಶ್ ಕುಮಾರ್, ಗುಣಸೇಕರನ್, ಗಿರೀಶ್, ಮಹೇಶ

8 ಕಾಮೆಂಟ್‌ಗಳು:

sunaath ಹೇಳಿದರು...

ನಿಮ್ಮ ಚಿತ್ರಗಳನ್ನು ನೋಡಿದಾಗ ಒಂದು ಭಾವನೆ ಹೊಳೆಯಿತು:
ಉಡುಪಿ ಯೂಥ್ ಹಾಸ್ಟೆಲ್ ಹಾಗೂ ಚಾರಣಿಗರ ತಂಡ ಇವೆರಡೂ ಜೊತೆಯಾಗಿ,
(೧) ಶಿಸ್ತು
(೨) ವ್ಯವಸ್ಥಿತ ಕಾರ್ಯಕ್ರಮ
(೩) ಟೀಮ್ ಸ್ಪಿರಿಟ್
ಇವನ್ನು ಬೆಳೆಸುತ್ತಿವೆ ಅಂತ.
ಇವೆಲ್ಲದರ ಜೊತೆಗೆ ನಿಸರ್ಗಪ್ರೇಮ!

ರಾಜೇಶ್ ನಾಯ್ಕ ಹೇಳಿದರು...

ಸುನಾಥ್,

ತುಂಬಾ ತುಂಬಾ ಧನ್ಯವಾದಗಳು, ಒಳ್ಳೆಯ ಮಾತುಗಳಿಗಾಗಿ.

Rakesh Holla ಹೇಳಿದರು...

Oh nice photos…gR8 Program!!!

ರಾಜೇಶ್ ನಾಯ್ಕ ಹೇಳಿದರು...

ರಾಕೇಶ್,
ಥ್ಯಾಂಕ್ಸ್.

Padmini ಹೇಳಿದರು...

ರಾಜೇಶ್, ನಿಮ್ಮ blog ತುಂಬಾ ಸೊಗಸಾಗಿದೆ.. ನಿಮ್ಮ ನಿಸರ್ಗದಾಸಕ್ತಿಯಂತೆ. ನೀವು ಆಯ್ದುಕೊಂಡಿರುವ blog layout ಮತ್ತು ಅದನ್ನು ನೀವು ಬಳಸಿಕೊಂಡಿರುವ ವೈಖರಿ ತುಂಬಾ ಮೆಚ್ಚುಗೆಯಾದವು. ನಿಸರ್ಗ ಸಿರಿಯನ್ನು ನೀವು ಬಣ್ಣಿಸುವ ರೀತಿ ಸಹಜವೂ ಮೋಹಕವೂ ಆಗಿದೆ. ಮನುಷ್ಯನ ದುರಾಸೆಯಿಂದ ತತ್ತರಿಸುತ್ತಿರುವ ಈ ಭೂಮಿಯ ಮೇಲೆ ನಿಸರ್ಗವನ್ನು ಪ್ರೀತಿಸುವವರು ದಿನದಿನಕ್ಕೂ ಕಡಿಮೆಯಾಗುತ್ತಿದ್ದಾರೆ. ಕಾರಣ ಇಂಥ ಬರಹಗಳ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಹೆಚ್ಚು ಇದೆ. ಹೀಗೆಯೇ ಬರೆಯುತ್ತಿರಿ. ಅಂದಹಾಗೆ ನನ್ನ blog 'ಪ್ರಣಯಪದ್ಮಿನಿ’ಯನ್ನು ನಿಮ್ಮ ಓದುಗರಿಗೆ ಪರಿಚಯಿಸುತ್ತಿರುವುದಕ್ಕೆ ತುಂಬಾ ಧನ್ಯವಾದಗಳು.

~ಪದ್ಮಿನಿ

ರಾಜೇಶ್ ನಾಯ್ಕ ಹೇಳಿದರು...

ಪದ್ಮಿನಿ,
ಅಬ್ಬಾ! ಎಷ್ಟು ಹೊಗಳಿದ್ದೀರಾ. ಥ್ಯಾಂಕ್ಸ್. ಥ್ಯಾಂಕ್ಸ್. ಪ್ರಣಯ ಪದ್ಮಿನಿಯೂ ಚೆನ್ನಾಗಿ ಬರುತ್ತಿದೆ.

ಹೆಸರಲ್ಲೇನಿದೆ? ಹೇಳಿದರು...

ತೀರ್ಥಬರೆ-ಮೇಗಿನಿ-ದೇವಕುಂದ ಆಯೋಜಿಸಿದ ನಿಮಗೆ ಮಾತ್ರ ಅಲ್ಲ, ನಮಗೂ ಒಂದು ಸುಂದರ ಅನುಭವ. ಮರೆಯಲಾಗದ್ದು ಕೂಡ. ಇಂತ ಚಾರಣಗಳು ಹೆಚ್ಚು ನಡೆಯಲಿ, ನಮಗೂ ಪಾಲ್ಗೊಳ್ಳೋ ಅವಕಾಶ ಸಿಗಲಿ ಅಂತ ಆಶಿಸ್ತೀನಿ.

ರಾಜೇಶ್ ನಾಯ್ಕ ಹೇಳಿದರು...

ವಿನಯ್
ಥ್ಯಾಂಕ್ಸ್.