ಗೆಳೆಯರೆ,
ಇದೇ ಎಪ್ರಿಲ್ ೨೭ರ ಆದಿತ್ಯವಾರ ಮಂಗಳೂರಿನ ಹವ್ಯಾಸಿ ಚಾರಣಿಗರ ಗುಂಪು ’ವನ್ಯ ಚಾರಣ ಬಳಗ’ ಚಾರ್ಮಾಡಿಯ ಮಲಯಮಾರುತದಲ್ಲಿ ’ಮೇಘರಾಗ’ ಎಂಬ ಸಣ್ಣ ಮಟ್ಟದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಪ್ರಮುಖ ಉದ್ದೇಶ, ದಿನೇಶ್ ಹೊಳ್ಳ ಬರೆದ ಕಥಾ ಸಂಕಲನ ’ಬೆಟ್ಟದ ಹೆಜ್ಜೆಗಳು’ ಪುಸ್ತಕದ ಬಿಡುಗಡೆ. ಈ ಪುಸ್ತಕದ ಬಿಡುಗಡೆಯ ಕಾರ್ಯಕ್ರಮವನ್ನು ಬೆಟ್ಟದ ಮೇಲೆಯೇ ಹಮ್ಮಿಕೊಳ್ಳೋಣವೆಂಬ ವಿಚಾರ ಬಂದಾಗ ಮನಸ್ಸಿಗೆ ಬಂದ ತಾಣಗಳು ಹಲವಾರು. ಕೊನೆಗೆ ಎಲ್ಲಾ ದೃಷ್ಟಿಯಿಂದಲೂ ಸೂಕ್ತವಾಗಿರುವ ತಾಣವೆಂದು ಮಲಯಮಾರುತವನ್ನೇ ಆಯ್ಕೆ ಮಾಡಿಕೊಂಡೆವು.
ಈ ಸಂದರ್ಭದಲ್ಲಿ ಉದಯೋನ್ಮುಖ ಯುವ ಕವಿಗಳಿಂದ ಕವನ ವಾಚನ ಮತ್ತು ಕಲಾವಿದರಿಂದ ಚಾರ್ಮಾಡಿಯ ಗಿರಿ ವನಗಳ ಕ್ಯಾನ್ವಾಸ್ ಪೇಂಟಿಂಗ್ ಕಾರ್ಯಕ್ರಮವೂ ಇದೆ. ಉತ್ತರ ಕನ್ನಡದ ಹಾಲಕ್ಕಿ ಸಮುದಾಯದ ಹಿರಿಯ ಜಾನಪದ ಕಲಾವಿದೆ, ರಾಜ್ಯಪ್ರಶಸ್ತಿ ಮತ್ತು ನಾಡೋಜ ಪ್ರಶಸ್ತಿ ವಿಜೇತ, ’ಹಾಡೊ ಹಕ್ಕಿ’ ಎಂದೇ ನಾಮಾಂಕಿತ ಶ್ರೀಮತಿ ಸುಕ್ರಿ ಬೊಮ್ಮಗೌಡ, ಆರ್ಯಭಟ ಪ್ರಶಸ್ತಿ ವಿಜೇತ ಕೊಳಲು ವಾದಕ ಶ್ರೀ ಕೆ.ಮುರಳೀಧರ ಮತ್ತು ಪರಿಸರ ಪ್ರೇಮಿ ಶ್ರೀ ಶೀನ ನಡೋಳಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.
ಇನ್ನೊಂದು ಸಂತೋಷದ ಸುದ್ದಿ ಎಂದರೆ ಬಂಡಾಜೆ ಜಲಪಾತಕ್ಕೆ ಚಾರಣಗೈಯುವ ಚಾರಣಿಗರಿಗೆ ಯಾವುದೇ ಸಮಯದಲ್ಲೂ ಸಹಾಯ ಹಸ್ತ ನೀಡಲು ಸಿದ್ಧರಾಗಿರುವ ಶ್ರೀ ವಳಂಬ್ರ ನಾರಾಯಣ ಗೌಡರು ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಗಮಿಸಲಿರುವರು. ಕಾರ್ಯಕ್ರಮಕ್ಕೆ ಆಗಮಿಸಲಿರುವ ಉಳಿದ ಗಣ್ಯರ ವಿವರಗಳು ಆಮಂತ್ರಣ ಪತ್ರಿಕೆಯಲ್ಲಿವೆ.
ಮಂಗಳೂರು ಯೂತ್ ಹಾಸ್ಟೆಲ್-ನಿಂದ ೨೭ ಎಪ್ರಿಲ್ ಮುಂಜಾನೆ ೬.೩೦ಕ್ಕೆ ಮಲಯಮಾರುತಕ್ಕೆ ತೆರಳಲು ಉಚಿತ ವಾಹನ ಸೌಕರ್ಯವಿದೆ. ತಮಗೆಲ್ಲರಿಗೂ ’ವನ್ಯ ಚಾರಣ ಬಳಗ’ ವತಿಯಿಂದ ’ಮೇಘರಾಗ’ಕ್ಕೆ ಇದು ಆಮಂತ್ರಣ.
ಹೆಚ್ಚಿನ ಮಾಹಿತಿಗೆ ’ವನ್ಯ ಚಾರಣ ಬಳಗ’ದ ಪದಾಧಿಕಾರಿಗಳನ್ನು ಸಂಪರ್ಕಿಸಬಹುದು.
ಸುಧೀರ್ ಕುಮಾರ್ - ೯೪೪೯೦೭೯೬೫೬
ವಿನಯ್ - ೯೮೮೦೭೯೨೯೪೬
ಪ್ರವೀಣ್ ಕುಮಾರ್ - ೯೪೪೮೨೪೯೩೧೩
ದಿನೇಶ್ ಹೊಳ್ಳ - ೯೩೪೧೧೧೬೧೧೧

3 ಕಾಮೆಂಟ್ಗಳು:
ನಿಮ್ಮ ತಂಡದ ಸಾಹಸ ಅಮೆಜಿಂಗ್. ಎಲ್ಲರಿಗು ಶುಭಾಶಯ. ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸುವೆ.
Very Impressive Indeed.
All the very best for you guys.
-SP
ಪ್ರವೀಣ್, ಎಸ್.ಪಿ.
ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಧನ್ಯವಾದಗಳು.
ಕಾಮೆಂಟ್ ಪೋಸ್ಟ್ ಮಾಡಿ