ಜುಲಾಯಿ ೨೦೦೪.
ನಕ್ಸಲರಿಂದ ಪೀಡಿತ ಪ್ರದೇಶದಲ್ಲಿರುವ ಈ ಜಲಧಾರೆಗೆ ಚಾರಣ ಸುಲಭ. ಆದರೆ ಮಾರ್ಗದರ್ಶಕರಿಲ್ಲದೆ ಅಸಾಧ್ಯ. ಸುಮಾರು ಒಂದು ತಾಸಿನ ಚಾರಣ. ದಟ್ಟ ಅಡವಿಯ ನಡುವೆ ಎಲ್ಲೆಲ್ಲೋ ಸಾಗಬೇಕು. ದಾರಿಯಲ್ಲಿ ಸಿಗುವ ಕೊನೆ ಮನೆಯ ಹಿರಿಯರೊಬ್ಬರು ನಮ್ಮೊಂದಿಗೆ ಬಂದರು. ತುಂಬಿ ಹರಿಯುತ್ತಿರುವ ೨ ಹಳ್ಳಗಳನ್ನು ದಾಟಿ ಚಾರಣ ದಾರಿ ಸಾಗುತ್ತದೆ. ಕೊನೆಯಲ್ಲಿ ಜಲಧಾರೆಯ ಮುಂದೆ ಬರಬೇಕಾದರೆ ಕಠಿಣ ಏರುದಾರಿಯನ್ನು ಕ್ರಮಿಸಬೇಕಾಗುತ್ತದೆ.
ಈ ಜಲಧಾರೆಯ ವೈಶಿಷ್ಟ್ಯವೆಂದರೆ ೧೦೦ ಅಡಿಗಳಷ್ಟು ಎತ್ತರದಿಂದ ಧುಮುಕಲು ಆರಂಭವಾಗುವಾಗ ಅಗಲ ಸುಮಾರು ೪೦ ಅಡಿಯಷ್ಟಿದ್ದು ಧರೆಗಪ್ಪಳಿಸಲು ಸಮೀಪವಾದಾಗ ಕೇವಲ ೫ ಅಡಿಯಷ್ಟು ಅಗಲದ ಆಕಾರವನ್ನು ತಾಳಿರುತ್ತದೆ!
ಮೇಲಿನ ಚಿತ್ರವನ್ನು ನೋಡಿದಾಗ ಸಣ್ಣ ಜಲಧಾರೆ ಎನಿಸಬಹುದು. ಆದರೆ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಹಿನ್ನೆಲೆಯಲ್ಲಿ ಬಹಳ ಎತ್ತರದಿಂದ ನೀರು ಧುಮುಕುತ್ತಿರುವುದು ಕಾಣಬರುತ್ತದೆ. ಬಿರುಸಾದ ಮಳೆ, ನಿಂತುಕೊಳ್ಳಲು ಸರಿಯಾಗಿ ಸ್ಥಳಾವಕಾಶ ಮತ್ತು ಎಸ್.ಎಲ್.ಆರ್ ಕ್ಯಾಮರಾ ಈ ಎಲ್ಲಾ ಕಾರಣಗಳಿಂದ ಚಿತ್ರಗಳು ಫ್ಲಾಪ್. ಒಂದೇ ಚಿತ್ರ ಮಾತ್ರ ನನ್ನಲ್ಲಿದೆ. ಈಗ ನಕ್ಸಲ್ ಪೀಡಿತ ಪ್ರದೇಶವಾದ ಕಾರಣ ಈ ಪರಿಸರದಲ್ಲಿ ಚಾರಣ ಕೈದು.
Oh..!
ಪ್ರತ್ಯುತ್ತರಅಳಿಸಿBeautiful place...
I want to go this place..
ರಾಕೇಶ್,
ಪ್ರತ್ಯುತ್ತರಅಳಿಸಿಥ್ಯಾಂಕ್ಸ್. ಹೋಗಿ ಬನ್ನಿ. ಬೈಕಲ್ಲಿ ಸುಲಭ.
ರಾಜೇಶ್,
ಪ್ರತ್ಯುತ್ತರಅಳಿಸಿಈ ಜಲಪಾತ ಯಾವ ಊರಿನಲ್ಲಿದೆ ಅಂತ ಸ್ವಲ್ಪ ತಿಳಿಸಿಕೊಡುತ್ತೀರ?
ಕೈದು ಎಂದರೆ ನಿಷೇಧ ಎಂತಲೇ?
ಪ್ರತ್ಯುತ್ತರಅಳಿಸಿದೇವರಾಜು,
ಪ್ರತ್ಯುತ್ತರಅಳಿಸಿಈ ಜಲಪಾತ ತೊಂಬಟ್ಟು ಎಂಬ ಊರಿನಲ್ಲಿದೆ. ಬರುತ್ತಿರಿ ಇಲ್ಲಿಗೆ.
ಶ್ರೀಕಾಂತ್,
’ಕೈದು’ ಎಂದರೆ ನಿಲ್ಲಿಸಲಾಗಿದೆ ಎಂದು.