ಭಾನುವಾರ, ನವೆಂಬರ್ 28, 2010

ಚಿಕ್ಕನಂದಿಹಳ್ಳಿಯ ಬಸವೇಶ್ವರ


ನಂದಿಗಾಗಿಯೇ ಮೀಸಲಿರುವ ದೇವಾಲಯವೊಂದಿದೆ ಎಂದು ಗೊತ್ತಾದಾಗ ಚಿಕ್ಕನಂದಿಹಳ್ಳಿಯತ್ತ ಸುಳಿದೆವು. ಈ ಸಣ್ಣ ಸುಂದರ ದೇವಾಲಯವನ್ನು ಬಸವೇಶ್ವರ ದೇವಾಲಯವೆಂದು ಕರೆಯುತ್ತಾರೆ. ದೇವಾಲಯದ ಹೆಬ್ಬಾಗಿಲಲ್ಲಿ ಹಾಕಿರುವ ಫಲಕದಲ್ಲಿ ಬಸವಣ್ಣನವರ ಚಿತ್ರವನ್ನೂ ಹಾಕಿದ್ದಾರೆ! ಅದನ್ನು ಕಂಡು ಒಂದು ಕ್ಷಣ ಗಲಿಬಿಲಿಯುಂಟಾಯಿತು. ಇದು ಈ ಬಸವ(ನಂದಿ)ನ ದೇವಾಲಯವೋ ಅಥವಾ ಆ ಬಸವ(ಬಸವಣ್ಣ)ನ ದೇವಾಲಯವೋ ಎಂದು!


ಸುಮಾರು ೬ ಅಡಿ ಎತ್ತರವಿರುವ ಸುಂದರ ನಂದಿಯ ಮೂರ್ತಿಯನ್ನು ಚೆನ್ನಾಗಿ ಅಲಂಕರಿಸಲಾಗಿತ್ತು. ಶಿವರಾತ್ರಿಯಂದು ಚಿಕ್ಕನಂದಿಹಳ್ಳಿಯ ನಂದಿಗೆ ಯೋಗ. ಆ ದಿನ ಇಲ್ಲಿ ಭರ್ಜರಿ ಜಾತ್ರೆ. ಸುತ್ತಮುತ್ತಲಿನ ಹಳ್ಳಿಯ ಜನರು ಸೇರಿ ಈ ನಂದಿಯನ್ನು ಪೂಜಿಸಿ ಹಬ್ಬದ ವಾತಾವರಣ ಸೃಷ್ಟಿಸುತ್ತಾರೆ. ನಂತರ ಮುಂದಿನ ಶಿವರಾತ್ರಿಯವರೆಗೆ ಚಿಕ್ಕನಂದಿಹಳ್ಳಿಗೆ ಜನರು ಸುಳಿಯುವುದಿಲ್ಲ.


ಗ್ರಾಮದ ಜನರು ದೇವಾಲಯವನ್ನು ಚೆನ್ನಾಗಿ ಇಟ್ಟುಕೊಂಡಿದ್ದಾರೆ. ಗರ್ಭಗುಡಿಯ ಗೋಡೆಗಳಿಗೆ ಮಾರ್ಬಲ್, ಮತ್ತು ನೆಲಕ್ಕೆ ಗ್ರಾನೈಟ್ ಹಾಕಲಾಗಿದೆ. ಗರ್ಭಗುಡಿಯ ದ್ವಾರಕ್ಕೆ ಬೆಳ್ಳಿಯ ಲೇಪನ (ಬಣ್ಣ) ಹಾಕಲಾಗಿದ್ದು ಮೇಲೆ ನಂದಿಯ ಸಣ್ಣ ಕೆತ್ತನೆಯಿದೆ. ಭಗವಾನ್ ಶಿವನ ಭಕ್ತನಿಗೆ ದೇವಾಲಯದ ಯೋಗ.

5 ಕಾಮೆಂಟ್‌ಗಳು:

  1. ರಾಜೇಶ್,

    ನಂದಿ ದೇವಾಲಯ ಕೇಳಿದ್ದು ಇದೇ ಮೊದಲು.
    ಹತ್ತಿರದಲ್ಲಿ ಎಲ್ಲೂ ಶಿವಲಿಂಗ ಇಲ್ಲವೇ?

    ಪ್ರತ್ಯುತ್ತರಅಳಿಸಿ
  2. ಟೀಮ್ ಜಿ ಸ್ಕ್ವೇರ್,
    ಧನ್ಯವಾದ. ಕ್ಷಮಿಸಿ, ಎಲ್ಲಿದೆ ಎಂದು ಹೇಳಲಾರೆ. ಕರ್ನಾಟಕದ ನಕಾಶೆಯಲ್ಲಿ ಸ್ವಲ್ಪ ಹುಡುಕಾಡಿದರೆ ಎಲ್ಲಿದೆ ಎಂದು ನೀವು ತಿಳಿದುಕೊಳ್ಳಬಹುದು.

    ಶಿವ್,
    ಅದೇ ವಿಶೇಷ. ಅಲ್ಲಿ ಶಿವಲಿಂಗನೇ ಇರಲಿಲ್ಲ.

    ಪ್ರತ್ಯುತ್ತರಅಳಿಸಿ
  3. Chikka naMdihalli mostly Khanapur taluknalli barutte..nanu chikkavaniddag hogidda nenapu!!!!!

    ಪ್ರತ್ಯುತ್ತರಅಳಿಸಿ
  4. Chikkanandihalli gram bailhongal talukinalli irithate

    ಪ್ರತ್ಯುತ್ತರಅಳಿಸಿ