ಕಳೆದ ೬ ವರ್ಷಗಳಲ್ಲಿ ಗಣೇಶ ಚತುರ್ಥಿಗೆ ಮನೆಗೆ ತೆರಳಲಾಗಿರಲಿಲ್ಲ. ಪ್ರತಿ ಸಲ ಏನಾದರೊಂದು ತೊಡಕುಗಳಿದ್ದವು (ಅಥವಾ ನನಗೇ ಮನಸ್ಸಿರಲಿಲ್ಲವೋ). ಆದರೆ ಮನಸ್ಸಿದ್ದಲ್ಲಿ ಮಾರ್ಗವಿದ್ದೇ ಇರುತ್ತದೆ ಎಂಬಂತೆ ಈ ಬಾರಿಯೂ ತೊಡಕುಗಳಿದ್ದರೂ ಹಳದೀಪುರದೆಡೆ ಪ್ರಯಾಣಿಸಿದೆ. ಯಾವಾಗಲೂ ನಮ್ಮ ಮನೆಯಲ್ಲಿ ಚೌತಿ ಎರಡು ದಿವಸ. ಆದರೆ ಪರಿವಾರದಲ್ಲಿ ಮರಣವೊಂದು ಸಂಭವಿಸಿದ್ದರಿಂದ ಈ ಬಾರಿ ಚೌತಿ ಒಂದೇ ದಿನ. ಇನ್ನು ಮುಂದೆ ಚೌತಿಗೆ ಮನೆಯಲ್ಲಿ ಹಾಜರಿರಲೇಬೇಕು. ಗಣೇಶನನ್ನು ಮನೆಗೆ ಸ್ವಾಗತಿಸಿ ನಂತರ ಬೀಳ್ಕೊಡುವವರೆಗಿನ ಕೆಲವು ಚಿತ್ರಗಳು ಇಲ್ಲಿವೆ.
ಗಣೇಶನ ಹಬ್ಬಕ್ಕೆ ಊರಿಗೆ ಹೋಗಿದ್ದು ಸಂತೋಷದ ವಿಷಯ. ಚಿತ್ರಗಳೆಲ್ಲವೂ ಸೊಗಸಾಗಿ ತೆಗೆದಿದ್ದೀರ. ಹಾಗೇ ಅಲಂಕಾರವೂ ಚೆನ್ನಾಗಿಯೇ ಮಾಡಿದ್ದೀರ. ಬಾಳೇಎಲೆಯ ಮೇಲೆ ಏನದು? ಅದರ ಮೇಲೆ ಕಬ್ಬು ಅನ್ಸತ್ತೆ. ಇದರ ವಿವರ ಹಾಕಿ.
ಆಹ! ಎಲ್ಲರೂ ಒಂದಾಗಿ ಕೂಡಿ, ನಕ್ಕು-ನಲಿದು, ಹಂಚಿ-ತಿಂದು, ಮಾಡಿ-ಬಡಿಸಿ, ಕೂಗಿ-ಕೂಗಿಸಿ, ಹಾಡಿ-ಕುಣಿದು, ದಣಿದು-ದಣಿಸಿ ಮಾಡಿದ ಹಬ್ಬವೇ ಹಬ್ಬ! ಈ ಗಣೇಶೋತ್ಸವ ಬಹಳ ಸಂಭ್ರಮಿಸಿದಿರೆಂದು ಚಿತ್ರಗಳೇ ಹೇಳುತ್ತವೆ. ಆ ಸಂಭ್ರಮವನ್ನು ಸ್ವಲ್ಪ ನಮಗೂ ಹಂಚಿದ್ದಕ್ಕೆ ಧನ್ಯವಾದಗಳು.
ಚೌತಿಯ ದಿನ ಗಣೇಶನನ್ನು ಹೊತ್ತು ತರುವುದರಿಂದ ಹಿಡಿದು, ವಿಸರ್ಜಿಸುವ ತನಕ ಸಂಭ್ರಮವೋ ಸಂಭ್ರಮ. ನಮ್ಮ ಮನೆಯಲ್ಲೂ ಹೀಗೆಯೇ ಆಚರಿಸಿದೆವು. ಎಲ್ಲ ಕ್ಷಣಗಳನ್ನು ಮತ್ತೆ ಮತ್ತೆ ನೆನಪಿಸುವ ನಿಮ್ಮ ಫೋಟೋಗಳಿಗೆ ಅಭಿನಂದನೆಗಳು.
ರಾಜೇಶ್ ನಾಯ್ಕರೆ, ತುಂಬಾ ತುಂಬಾ ಚೆನ್ನಾಗಿದೆ ನಿಮ್ಮ ಮನೆಯ ಗಣಪತಿ ಹಬ್ಬ. ಪ್ರಕೃತಿಯ ಮಧ್ಯದಲ್ಲಿ ಹಾಯಾಗಿ ಕುಳಿತಿರುವಂತೆ ನಿಮ್ಮ ಮನೆ, ಗಣಪನ ಮಂಟಪ, ಅದರ ಅಲಂಕಾರ, ಎಳ್ಳುಂಡೆ (?), ಜೇನು, ಕಬ್ಬು, ನೈವೇದ್ಯ, ಎಲ್ಲಾ ಅತಿ ಮಧುರ! ಇಷ್ಟು ಚೆನ್ನಾಗಿ ನಡೆಯೋ ಹಬ್ಬಕ್ಕೆ ಹೋಗೋ ಮನಸಾಗ್ಲಿಲ್ಲ ಅಂತೀರಲ್ಲ? ನಾನಾಗಿದ್ರೆ ಅತ್ತೂ ಕರೆದೂ ಪ್ರತಿ ವರ್ಷ ಹೇಗಾದ್ರೂ ಮಾಡಿ ಹೊರತುಬಿಡ್ತಿದ್ದೆ :) ನನಗೆ ಕತ್ತಲಲ್ಲಿ ಗಣಪನ ಮೇಲೆ ಮಾತ್ರ ಬೆಳಕು ಹಾಯಿಸಿ ತೆಗೆದಿರುವ ಚಿತ್ರ ಬಹಾಅಆಅಳ ಇಷ್ಟ ಆಯ್ತು.
ಶಿವ್, ಹುಣಸೆಕಾಯಿ ಏನಾಯ್ತು ಅಂತ ನನಗೂ ಗೊತ್ತಾಗ್ಲಿಲ್ಲ ನೋಡಿ! ಬಾಳೆ ಎಲೆ ಮೇಲೆ ಹಾಕಿದ್ದು ಗಣೇಶನಿಗೆ ನಡೆಸಲಾಗುವ ಗಣಹೋಮದ ನೈವೇದ್ಯ.
ಚಿತ್ರ, ಬ್ಲಾಗಿಗೆ ಸ್ವಾಗತ. ಬಾಳೆ ಎಲೆಯ ಮೇಲೆ ಇರುವುದು ಗಣೇಶನಿಗೆ ಅಷ್ಟದ್ರವ್ಯ(ಧಾನ್ಯ)ಗಳ ನೈವೇದ್ಯ. ಭತ್ತದ ಹೊದ್ಲು, ಅವಲಕ್ಕಿ, ಕರಿಎಳ್ಳು, ಬಾಳೆಹಣ್ಣು, ತೆಂಗಿನಕಾಯಿ, ಗೋದಿಹಿಟ್ಟು, ಕಬ್ಬು ಮತ್ತು ಎಂಟು ಮೋದಕಗಳ ಮಿಶ್ರಣ. ಇವಿಷ್ಟರ ಉಂಡೆ ಮಾಡಲೋಸುಗ ಅಲ್ಪ ಪ್ರಮಾಣದಲ್ಲಿ ಬೆಲ್ಲ ಉಪಯೋಗಿಸುತ್ತಾರೆ. ಈ ಅಷ್ಟದ್ರವ್ಯಗಳ ಎಂಟು ಉಂಡೆಗಳನ್ನು ಮಾಡಿ ಗಣಹೋಮದ ಕುಂಡಕ್ಕೆ (ಅಗ್ನಿಗೆ) ಅರ್ಪಿಸಲಾಗುತ್ತದೆ. ಸ್ವಲ್ಪ ಮಿಶ್ರಣವನ್ನು ತೆಗೆದಿರಿಸಿ ಗಣಹೋಮದ ಪ್ರಸಾದವೆಂದು ಹಂಚಲಾಗುತ್ತದೆ. ಗಣಹೋಮದ ಕುಂಡದಲ್ಲಿರುವ ಕೆಲವು ಆಯ್ದ ಮರದ ಚೆಕ್ಕೆ(ತುಂಡು)ಗಳಿಗೆ ತುಪ್ಪ ಸುರಿದು, ಈ ಅಷ್ಟದ್ರವ್ಯ ಮಿಶ್ರಣವನ್ನು ಹಾಕಿದಾಗ ಬರುವ ಹೊಗೆ ಮನೆಯ ಎಲ್ಲಾ ಮೂಲೆಗಳಿಗೂ ಪಸರಿಸಬೇಕೆಂಬ ನಂಬಿಕೆಯಿದೆ. ಹಾಗಾದಲ್ಲಿ ಎಲ್ಲಾ ದುಷ್ಟ ಶಕ್ತಿಗಳು ಮನೆಯಿಂದ ದೂರದಲ್ಲಿರುತ್ತವೆ ಎಂಬ ನಂಬಿಕೆ!
ಶ್ರೀಕಾಂತ್, ಸಂಭ್ರಮಿಸಿದ್ದಂತೂ ಹೌದು. ಧನ್ಯವಾದ.
ಸಿಂಧು, ಈ ಪುಟ್ಟ ಗೌರಿ ಬಹಳ ಕಾಟ ಕೊಡುತ್ತಿದ್ದಾಳೆ. ಆಕೆಯೂ ಗಣಪನ ಹಬ್ಬ ತುಂಬಾ ಎಂಜಾಯ್ ಮಾಡಿದಳು!
ಪ್ರಶಾಂತ್, ಥ್ಯಾಂಕ್ಸ್. ಉತ್ತರ ಕನ್ನಡದಲ್ಲಿ ಎಲ್ಲೆಡೆ ಗಣೇಶನ ಹಬ್ಬ ಹೆಚ್ಚಾಗಿ ಇದೇ ರೀತಿಯಲ್ಲಿ ಆಚರಿಸುತ್ತಾರೆ.
ಸುಧೀರ್, ಧನ್ಯವಾದ.
ಶಾಮಲ, ಸ್ವಾಗತ ಬ್ಲಾಗಿಗೆ. ಗಣಪನ ಹಬ್ಬದ ಪೋಸ್ಟ್ ಮೆಚ್ಚಿಕೊಂಡದ್ದಕ್ಕೆ ಧನ್ಯವಾದ. ಪ್ರತಿ ವರ್ಷ ಇದೇ ರೀತಿ ಹಬ್ಬ ಆಚರಿಸಲಾಗುತ್ತದೆ. ಈ ಬಾರಿ ಒಂದೇ ದಿನವಿತ್ತು. ಹಾಗಾಗಿ ೨ ದಿನಗಳ ಪೂಜೆ, ಹವನ ಇತ್ಯಾದಿಗಳನ್ನು ಒಂದೇ ದಿನದಲ್ಲಿ ಮುಗಿಸಬೇಕಾಗಿತ್ತು. ಇಲ್ಲವಾದಲ್ಲಿ ೨ ದಿನ ಭಾರಿ ಸಂಭ್ರಮ!
ಸೊಗಸಾಗಿದೆ. ಚಿತ್ರಗಳೇ ಎಲ್ಲವನ್ನೂ ಹೇಳುತ್ತದೆ!!
ಪ್ರತ್ಯುತ್ತರಅಳಿಸಿಗಣೇಶಮೂರ್ತಿ ತುಂಬ ಚೆನ್ನಾಗಿದೆ. ಅಲಂಕಾರಗಳೂ ಅಷ್ಟೇ ಸೊಗಸಾಗಿವೆ.
ಪ್ರತ್ಯುತ್ತರಅಳಿಸಿchennaagide ganesha... banna irade iddidre innu chennaag irtittu. :-)
ಪ್ರತ್ಯುತ್ತರಅಳಿಸಿರಾಜೇಶ್,
ಪ್ರತ್ಯುತ್ತರಅಳಿಸಿಗಣಪತಿ ಹಬ್ಬದ ಶುಭಾಶಯಗಳು !
ತುಂಬಾ ಸುಂದರವಾಗಿದೆ ಗಣಪ.
ದಾರದಿಂದ ಕಟ್ಟಿದ್ದ ಹುಣಸೆಕಾಯಿ ಎನಾಯ್ತೋ ಗೊತ್ತಾಗಲಿಲ್ಲ :)
ಅಂದಾಗೆ ಬಾಳೆ ಎಲೆಯ ಮೇಲೆ ಹಾಕಿದ್ದು ಏನು?
ರಾಜೇಶ್ ರವರೇ,
ಪ್ರತ್ಯುತ್ತರಅಳಿಸಿಗಣೇಶನ ಹಬ್ಬಕ್ಕೆ ಊರಿಗೆ ಹೋಗಿದ್ದು ಸಂತೋಷದ ವಿಷಯ. ಚಿತ್ರಗಳೆಲ್ಲವೂ ಸೊಗಸಾಗಿ ತೆಗೆದಿದ್ದೀರ. ಹಾಗೇ ಅಲಂಕಾರವೂ ಚೆನ್ನಾಗಿಯೇ ಮಾಡಿದ್ದೀರ. ಬಾಳೇಎಲೆಯ ಮೇಲೆ ಏನದು? ಅದರ ಮೇಲೆ ಕಬ್ಬು ಅನ್ಸತ್ತೆ. ಇದರ ವಿವರ ಹಾಕಿ.
ಚಿತ್ರ
ಆಹ! ಎಲ್ಲರೂ ಒಂದಾಗಿ ಕೂಡಿ, ನಕ್ಕು-ನಲಿದು, ಹಂಚಿ-ತಿಂದು, ಮಾಡಿ-ಬಡಿಸಿ, ಕೂಗಿ-ಕೂಗಿಸಿ, ಹಾಡಿ-ಕುಣಿದು, ದಣಿದು-ದಣಿಸಿ ಮಾಡಿದ ಹಬ್ಬವೇ ಹಬ್ಬ! ಈ ಗಣೇಶೋತ್ಸವ ಬಹಳ ಸಂಭ್ರಮಿಸಿದಿರೆಂದು ಚಿತ್ರಗಳೇ ಹೇಳುತ್ತವೆ. ಆ ಸಂಭ್ರಮವನ್ನು ಸ್ವಲ್ಪ ನಮಗೂ ಹಂಚಿದ್ದಕ್ಕೆ ಧನ್ಯವಾದಗಳು.
ಪ್ರತ್ಯುತ್ತರಅಳಿಸಿಹಾಯ್ ರಾಜೇಶ್,
ಪ್ರತ್ಯುತ್ತರಅಳಿಸಿತುಂಬ ಚೆನ್ನಾಗಿದೆ. ಗಣೇಶನಷ್ಟೇ ನಿಮ್ಮ ಪುಟ್ಟ ಗೌರಿಯೂ ಮುದ್ದಾಗಿದ್ದಾಳೆ.. :)
ಪ್ರೀತಿಯಿಂದ
ಸಿಂಧು
ರಾಜೇಶ್ ಅವರೇ,
ಪ್ರತ್ಯುತ್ತರಅಳಿಸಿಚೌತಿಯ ದಿನ ಗಣೇಶನನ್ನು ಹೊತ್ತು ತರುವುದರಿಂದ ಹಿಡಿದು, ವಿಸರ್ಜಿಸುವ ತನಕ ಸಂಭ್ರಮವೋ ಸಂಭ್ರಮ. ನಮ್ಮ ಮನೆಯಲ್ಲೂ ಹೀಗೆಯೇ ಆಚರಿಸಿದೆವು. ಎಲ್ಲ ಕ್ಷಣಗಳನ್ನು ಮತ್ತೆ ಮತ್ತೆ ನೆನಪಿಸುವ ನಿಮ್ಮ ಫೋಟೋಗಳಿಗೆ ಅಭಿನಂದನೆಗಳು.
naanu maharashtradalli iruvaga kannare kanda drushyagalu marukalisidavu. ganesh habbada acharane photo nodi kushiyayithu.
ಪ್ರತ್ಯುತ್ತರಅಳಿಸಿರಾಜೇಶ್ ನಾಯ್ಕರೆ,
ಪ್ರತ್ಯುತ್ತರಅಳಿಸಿತುಂಬಾ ತುಂಬಾ ಚೆನ್ನಾಗಿದೆ ನಿಮ್ಮ ಮನೆಯ ಗಣಪತಿ ಹಬ್ಬ. ಪ್ರಕೃತಿಯ ಮಧ್ಯದಲ್ಲಿ ಹಾಯಾಗಿ ಕುಳಿತಿರುವಂತೆ ನಿಮ್ಮ ಮನೆ, ಗಣಪನ ಮಂಟಪ, ಅದರ ಅಲಂಕಾರ, ಎಳ್ಳುಂಡೆ (?), ಜೇನು, ಕಬ್ಬು, ನೈವೇದ್ಯ, ಎಲ್ಲಾ ಅತಿ ಮಧುರ! ಇಷ್ಟು ಚೆನ್ನಾಗಿ ನಡೆಯೋ ಹಬ್ಬಕ್ಕೆ ಹೋಗೋ ಮನಸಾಗ್ಲಿಲ್ಲ ಅಂತೀರಲ್ಲ? ನಾನಾಗಿದ್ರೆ ಅತ್ತೂ ಕರೆದೂ ಪ್ರತಿ ವರ್ಷ ಹೇಗಾದ್ರೂ ಮಾಡಿ ಹೊರತುಬಿಡ್ತಿದ್ದೆ :)
ನನಗೆ ಕತ್ತಲಲ್ಲಿ ಗಣಪನ ಮೇಲೆ ಮಾತ್ರ ಬೆಳಕು ಹಾಯಿಸಿ ತೆಗೆದಿರುವ ಚಿತ್ರ ಬಹಾಅಆಅಳ ಇಷ್ಟ ಆಯ್ತು.
ಅಂದ್ಹಾಗೆ ನಿಮ್ ಪುಟ್ಟ ಗೌರಿ ಮುದ್ದಾಗಿದ್ದಾಳೆ.
ಧನ್ಯವಾದ,
ಶಾಮಲ
ರಾಜೇಶ್ ರವರೇ , ಚಿತ್ರಗಳು ಹಬ್ಬವನ್ನು ಆಚರಿಸಿದ ಪರಿಯನ್ನು ಹೇಳುತ್ತವೆ , ಬಹಳ ಸೊಗಸಾಗಿವೆ .....
ಪ್ರತ್ಯುತ್ತರಅಳಿಸಿಅರವಿಂದ್, ಸುನಾಥ್, ಅರುಣ್
ಪ್ರತ್ಯುತ್ತರಅಳಿಸಿಧನ್ಯವಾದ.
ಶಿವ್,
ಹುಣಸೆಕಾಯಿ ಏನಾಯ್ತು ಅಂತ ನನಗೂ ಗೊತ್ತಾಗ್ಲಿಲ್ಲ ನೋಡಿ! ಬಾಳೆ ಎಲೆ ಮೇಲೆ ಹಾಕಿದ್ದು ಗಣೇಶನಿಗೆ ನಡೆಸಲಾಗುವ ಗಣಹೋಮದ ನೈವೇದ್ಯ.
ಚಿತ್ರ,
ಬ್ಲಾಗಿಗೆ ಸ್ವಾಗತ. ಬಾಳೆ ಎಲೆಯ ಮೇಲೆ ಇರುವುದು ಗಣೇಶನಿಗೆ ಅಷ್ಟದ್ರವ್ಯ(ಧಾನ್ಯ)ಗಳ ನೈವೇದ್ಯ. ಭತ್ತದ ಹೊದ್ಲು, ಅವಲಕ್ಕಿ, ಕರಿಎಳ್ಳು, ಬಾಳೆಹಣ್ಣು, ತೆಂಗಿನಕಾಯಿ, ಗೋದಿಹಿಟ್ಟು, ಕಬ್ಬು ಮತ್ತು ಎಂಟು ಮೋದಕಗಳ ಮಿಶ್ರಣ. ಇವಿಷ್ಟರ ಉಂಡೆ ಮಾಡಲೋಸುಗ ಅಲ್ಪ ಪ್ರಮಾಣದಲ್ಲಿ ಬೆಲ್ಲ ಉಪಯೋಗಿಸುತ್ತಾರೆ. ಈ ಅಷ್ಟದ್ರವ್ಯಗಳ ಎಂಟು ಉಂಡೆಗಳನ್ನು ಮಾಡಿ ಗಣಹೋಮದ ಕುಂಡಕ್ಕೆ (ಅಗ್ನಿಗೆ) ಅರ್ಪಿಸಲಾಗುತ್ತದೆ. ಸ್ವಲ್ಪ ಮಿಶ್ರಣವನ್ನು ತೆಗೆದಿರಿಸಿ ಗಣಹೋಮದ ಪ್ರಸಾದವೆಂದು ಹಂಚಲಾಗುತ್ತದೆ. ಗಣಹೋಮದ ಕುಂಡದಲ್ಲಿರುವ ಕೆಲವು ಆಯ್ದ ಮರದ ಚೆಕ್ಕೆ(ತುಂಡು)ಗಳಿಗೆ ತುಪ್ಪ ಸುರಿದು, ಈ ಅಷ್ಟದ್ರವ್ಯ ಮಿಶ್ರಣವನ್ನು ಹಾಕಿದಾಗ ಬರುವ ಹೊಗೆ ಮನೆಯ ಎಲ್ಲಾ ಮೂಲೆಗಳಿಗೂ ಪಸರಿಸಬೇಕೆಂಬ ನಂಬಿಕೆಯಿದೆ. ಹಾಗಾದಲ್ಲಿ ಎಲ್ಲಾ ದುಷ್ಟ ಶಕ್ತಿಗಳು ಮನೆಯಿಂದ ದೂರದಲ್ಲಿರುತ್ತವೆ ಎಂಬ ನಂಬಿಕೆ!
ಶ್ರೀಕಾಂತ್,
ಸಂಭ್ರಮಿಸಿದ್ದಂತೂ ಹೌದು. ಧನ್ಯವಾದ.
ಸಿಂಧು,
ಈ ಪುಟ್ಟ ಗೌರಿ ಬಹಳ ಕಾಟ ಕೊಡುತ್ತಿದ್ದಾಳೆ. ಆಕೆಯೂ ಗಣಪನ ಹಬ್ಬ ತುಂಬಾ ಎಂಜಾಯ್ ಮಾಡಿದಳು!
ಪ್ರಶಾಂತ್,
ಥ್ಯಾಂಕ್ಸ್. ಉತ್ತರ ಕನ್ನಡದಲ್ಲಿ ಎಲ್ಲೆಡೆ ಗಣೇಶನ ಹಬ್ಬ ಹೆಚ್ಚಾಗಿ ಇದೇ ರೀತಿಯಲ್ಲಿ ಆಚರಿಸುತ್ತಾರೆ.
ಸುಧೀರ್,
ಧನ್ಯವಾದ.
ಶಾಮಲ,
ಸ್ವಾಗತ ಬ್ಲಾಗಿಗೆ. ಗಣಪನ ಹಬ್ಬದ ಪೋಸ್ಟ್ ಮೆಚ್ಚಿಕೊಂಡದ್ದಕ್ಕೆ ಧನ್ಯವಾದ. ಪ್ರತಿ ವರ್ಷ ಇದೇ ರೀತಿ ಹಬ್ಬ ಆಚರಿಸಲಾಗುತ್ತದೆ. ಈ ಬಾರಿ ಒಂದೇ ದಿನವಿತ್ತು. ಹಾಗಾಗಿ ೨ ದಿನಗಳ ಪೂಜೆ, ಹವನ ಇತ್ಯಾದಿಗಳನ್ನು ಒಂದೇ ದಿನದಲ್ಲಿ ಮುಗಿಸಬೇಕಾಗಿತ್ತು. ಇಲ್ಲವಾದಲ್ಲಿ ೨ ದಿನ ಭಾರಿ ಸಂಭ್ರಮ!
ಸತೀಶ,
ಧನ್ಯವಾದ.
Hi, Rajesh
ಪ್ರತ್ಯುತ್ತರಅಳಿಸಿNext time nannanu kooda habbakke kareyuvudanna mari bedi k. nice photos.
ಸುರೇಖಾ,
ಪ್ರತ್ಯುತ್ತರಅಳಿಸಿಖಂಡಿತ. ಧನ್ಯವಾದಗಳು.