ಸೋಮವಾರ, ನವೆಂಬರ್ 24, 2008

ಉಡುಪಿ ಯೂತ್ ಹಾಸ್ಟೆಲ್ ರಾಜ್ಯ ಮಟ್ಟದ ಚಾರಣದ ಕೆಲವು ಚಿತ್ರಗಳು


ಉಡುಪಿ ಯೂತ್ ಹಾಸ್ಟೆಲ್, ನವೆಂಬರ್ ೧೩,೧೪,೧೫ ಮತ್ತು ೧೬ರಂದು ಆಯೋಜಿಸಿದ ರಾಜ್ಯ ಮಟ್ಟದ ಚಾರಣದ ಕೆಲವು ಚಿತ್ರಗಳನ್ನು ಇಲ್ಲಿ ಹಾಕಿದ್ದೇನೆ. ಅರಣ್ಯ ಇಲಾಖೆಯ ಕೊನೆಯ ಗಳಿಗೆಯ ನಖರಾ ಮತ್ತು ದರ್ಪದ ಹೊರತಾಗಿಯೂ ನಾವು ಈ ಚಾರಣವನ್ನು ಯಾವುದೇ ವಿಘ್ನವಿಲ್ಲದೇ ನಡೆಸಿದ್ದೇ ಸೋಜಿಗವೆನಿಸುತ್ತಿದೆ. ೬೪ ಚಾರಣಿಗರು ಭಾಗವಹಿಸಿ, ನಮ್ಮ ನಿರೀಕ್ಷೆಗೂ ಮೀರಿ ಈ ಚಾರಣ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು. ಅವರಿಗೆಲ್ಲರಿಗೂ ಉಡುಪಿ ಯೂತ್ ಹಾಸ್ಟೆಲ್ ಆಭಾರಿ. ಮೇಲೆ ಇರುವುದು ಎಲ್ಲಾ ಚಾರಣಿಗರ ಗ್ರೂಪ್ ಚಿತ್ರ.



ಗೆಳೆಯ ಗುರುದತ್ ಕಾಮತ್ ಒಬ್ಬ ಅಸಾಮಾನ್ಯ ಫೋಟೋಗ್ರಾಫರ್. ಯಾವುದೇ ಚಿತ್ರಗಳನ್ನು ಇವರು ನಂತರ ಸ್ಪೆಷಲ್ ಎಫೆಕ್ಟ್ಸ್ ಹಾಕಿ ಚಂದ ಕಾಣುವಂತೆ ಮಾಡುವುದಿಲ್ಲ. ಬದಲಾಗಿ ಚಿತ್ರಗಳನ್ನೇ ಅಷ್ಟು ಚೆನ್ನಾಗಿ ಕ್ಲಿಕ್ ಮಾಡುತ್ತಾರೆ. ಇಲ್ಲಿ ಎಲ್ಲಾ ಅವರು ತೆಗೆದ ಚಿತ್ರಗಳನ್ನೇ ಹಾಕಿದ್ದೇನೆ. ನಾನು ತೆಗೆದ ಸೆಕೆಂಡ್ ಕ್ಲಾಸ್ ಚಿತ್ರಗಳು ಸ್ವಲ್ಪ ದಿನಗಳ ನಂತರ. ಬೇಸ್ ಕ್ಯಾಂಪ್ ಇದ್ದದ್ದು ಮಾವಿನಕಾರಿನಲ್ಲಿ. ನಮ್ಮ ಅಡುಗೆಯ ತ್ರಿಮೂರ್ತಿಗಳೂ ಈ ಕಾರ್ಯಕ್ರಮ ಯಶಸ್ವಿಯಾಗಲು ಪ್ರಮುಖ ಕಾರಣವೂ ಹೌದು. ಮಾವಿನಕಾರಿನಲ್ಲಿ ೧೩ನೇ ತಾರೀಕಿನ ರಾತ್ರಿ ಗೇರು ಮರಗಳ ಕೆಳಗೆ ಕುಳಿತು ಕಾರ್ಯನಿರ್ವಹಿಸುತ್ತಿದ್ದಾರೆ.


ನಮ್ಮ ಬೇಸ್ ಕ್ಯಾಂಪ್ - ಮಾವಿನಕಾರು. ಸಮೀಪದಲ್ಲೇ ತೊರೆಯೊಂದು ಹರಿಯುತ್ತಿರುವುದರಿಂದ ಎಲ್ಲರೂ ಈ ಜಾಗವನ್ನು ಬಹಳ ಇಷ್ಟಪಟ್ಟರು.


೧೪ನೇ ತಾರೀಕಿನಂದು ಮಾವಿನಕಾರು-ಬಾವುಡಿ-ಮೇಲ್ಬಾವುಡಿ-ತೀರ್ಥಬರೆ ಜಲಧಾರೆ-ಮೇಗಣಿ ಚಾರಣ ಆರಂಭವಾಗುವ ಮೊದಲು ನಮ್ಮ ಲೀಡರ್ ಪ್ರೊಫೆಸರ್ ಕೆ.ಎಸ್. ಅಡಿಗರು ಚಾರಣಿಗರಿಗೆ ಸೂಚನೆಗಳನ್ನು ನೀಡುತ್ತಿರುವುದು.


ವಲಯ ಅರಣ್ಯಾಧಿಕಾರಿಗಳು ಚಾರಣಿಗರನ್ನು ಉದ್ದೇಶಿಸಿ ಒಂದೆರಡು ಮಾತುಗಳನ್ನಾಡುತ್ತಿದ್ದಾರೆ.


ವಲಯ ಅರಣ್ಯಾಧಿಕಾರಿಗಳು ರಾಜ್ಯ ಮಟ್ಟದ ಚಾರಣಕ್ಕೆ ಹಸಿರು ನಿಶಾನೆ ತೋರಿಸುತ್ತಿದ್ದಾರೆ. ಎಲ್ಲಾ ಚಾರಣಿಗರಿಗಿಂತ ಮುಂದೆ ನಮ್ಮ ಸುಹಾಸ್ ಕಿಣಿಯವರಿದ್ದರೆ, ಎಲ್ಲರಿಗಿಂತ ಹಿಂದೆ ವಿವೇಕ್ ಕಿಣಿಯವರಿದ್ದರು. ಇವರಿಬ್ಬರ ನಡುವೆಯೇ ಎಲ್ಲಾ ೬೪ ಚಾರಣಿಗರು ಇರಬೇಕೆಂದು ಸೂಚಿಸಲಾಗಿತ್ತು.


ಮೇಗಣಿಯಲ್ಲಿ ಅಡುಗೆಯ ಸ್ಥಳ. ಒಂಟಿ ಗೇರು ಮರವೊಂದರ ಕೆಳಗೆ.

ಮೇಗಣಿ ಕ್ಯಾಂಪ್ ಸೈಟ್

ಮುಸ್ಸಂಜೆಯ ಸಮಯದಲ್ಲಿ ಮೇಗಣಿ ಕ್ಯಾಂಪ್ ಸೈಟ್

ಮೇಗಣಿ ಕ್ಯಾಂಪ್ ಸೈಟ್! ಚಿತ್ರದ ಬಲದಲ್ಲಿರುವ ಶಿಖರವೇ ದೇವಕುಂದ!

ಮೇಗಣಿಯಲ್ಲಿ ಮುಂಜಾನೆ ಉಪಹಾರದ ಸಮಯ

೧೫ನೇ ತಾರೀಕು ಮೇಗಣಿ - ಕುನ್ನಿಕಟ್ಟೆ - ದೇವಕುಂದ - ಹದ್ದುಬರೆ - ಗಾಳಿಗುಡ್ಡ - ಮೇಗಣಿ ಚಾರಣಕ್ಕೆ ಎಲ್ಲರೂ ರೆಡಿ

ಮುಸ್ಸಂಜೆ ಮೋಡಗಳ ಚಿತ್ತಾರ

೧೫ನೇ ತಾರೀಕು ರಾತ್ರಿ ಕ್ಯಾಂಪ್ ಬೆಂಕಿ!

ಆಯೋಜಕರು

ರಾತ್ರಿ ವೇಳೆ ಮೇಗಣಿ ಕ್ಯಾಂಪ್ ಸ್ಥಳದ ನೋಟ

೧೬ನೇ ತಾರೀಕು ಮುಂಜಾನೆ ಮೇಗಣಿ ಕ್ಯಾಂಪ್ ಸ್ಥಳದ ರಮಣೀಯ ನೋಟ

ಗಗನದ ಚೆಲುವು

ಮೇಗಣಿ!

೧೬ನೇ ತಾರೀಕು ಮೇಗಣಿ-ಹುಲ್ಕಡಿಕೆ ಚಾರಣದ ಆರಂಭ

ಹುಲ್ಕಡಿಕೆಯ ದಾರಿಯಲ್ಲಿ

೩ ದಿನಗಳ ಚಾರಣದ ಬಳಿಕ ದಣಿದ ಚಾರಣಿಗರು ಹುಲ್ಕಡಿಕೆಯ ದೇವಾಲಯದಲ್ಲಿ ಬೀಳ್ಕೊಡುಗೆ ಸಮಾರಂಭದಲ್ಲಿ...

ಗುರುದತ್ ತೆಗೆದಿರುವ ಎಲ್ಲಾ ಚಿತ್ರಗಳನ್ನು ಇಲ್ಲಿಂದ ಡೌನ್-ಲೋಡ್ ಮಾಡಿಕೊಳ್ಳಬಹುದು.

11 ಕಾಮೆಂಟ್‌ಗಳು:

  1. ಚಾರಣದ ಹಲವರ ಚಿತ್ರಗಳನ್ನು ನೋಡಿದೆ,ಗುರುದತ್ ಅವರ ಚಿತ್ರಗಳ ಬಗೆ ಎರಡು ಮಾತಿಲ್ಲ.ಮರೆಯಾಲಾಗದ ಚಾರಣ. ಈಗ ಮೇಗಣಿಯ ನೆನಪುಗಳು ಮಾತ್ರ.

    ಪ್ರತ್ಯುತ್ತರಅಳಿಸಿ
  2. ಅಬ್ಬಾ! ಎಂತಹಾ ಅದ್ಭುತ ಚಿತ್ರಗಳು! ನಿಮ್ಮ ರಾಜ್ಯ ಮಟ್ಟದ ಚಾರಣ ಯಶಸ್ವಿಯಾಗಿದ್ದು ಸಂತೋಷ ಮತ್ತು ಅದರಲ್ಲಿ ನಾನು ಭಾಗವಹಿಸದಿದ್ದಕ್ಕೆ ಖೇದವಾಯಿತು.

    - ಶ್ರಿಕ್.

    ಪ್ರತ್ಯುತ್ತರಅಳಿಸಿ
  3. ಚಿತ್ರಗಳೆಲ್ಲ ಅಧ್ಬುತವಾಗಿವೆ ರಾಜೇಶ್.... especially, ರಾತ್ರಿಯ ಚಿತ್ರಗಳು ಮತ್ತು ಕ್ಯಾಂಪ್ ಚಿತ್ರಗಳು.

    ಪ್ರತ್ಯುತ್ತರಅಳಿಸಿ
  4. ಅದ್ಭುತ ಕ್ಯಾಂಪ್ ಇದ್ದ ಹಾಗಿದೆ, ನನಗೆ ಇಲ್ಲೂ ಬರಲಾಗಿಲ್ಲ ನೋಡಿ, ಇರಲಿ ನೀವೆಲ್ಲಾ ಖುಷಿ ಪಟ್ರಲ್ಲ....

    ಪ್ರತ್ಯುತ್ತರಅಳಿಸಿ
  5. ರಾಜೇಶ್,
    ನಿಮ್ಮ ಚಾರಣ ಕ್ಯಾಂಪ್ ಫೋಟೊಗಳು ತುಂಬಾ ಚೆನ್ನಾಗಿವೆ. ನೋಡುತ್ತಿದ್ದರೆ ನನಗೂ ಹೋಗಬೇಕಿತ್ತೇನೊ ಅನ್ನಿಸುತ್ತೆ. ನಿಮ್ಮ ಕ್ಯಾಂಪಿನ ಒಟ್ಟಾರೆ ಸಂಪೂರ್ಣ ಅನುಭವವನ್ನು ಗುರುದತ್ ಫೋಟೊಗಳೇ ಹೇಳುತ್ತಿವೆ. ಹೀಗೆ ನಿಮ್ಮ ಮುಂದಿನ ಕ್ಯಾಂಪುಗಳು ಯಶಸ್ವಿಯಾಗಲಿ...
    ಆಹಾಂ! ನೀವು ಇತ್ತೀಚೆಗೆ ನನ್ನ ಬ್ಲಾಗಿಗೆ ಬರುವುದು ನಿಲ್ಲಿಸಿದ್ದೀರಿ. ಬಿಡುವು ಮಾಡಿಕೊಂಡು ಬನ್ನಿ. ಕೆಲವು ಲೇಖನಗಳನ್ನು ಹಾಕಿದ್ದೇನೆ.
    ಮತ್ತೊಂದು ವಿಚಾರ ನನ್ನ ಇನ್ನೊಂದು ಬ್ಲಾಗ್ "ಛಾಯಾಕನ್ನಡಿ"ಯಲ್ಲಿ ಫೋಟೊಸಹಿತವಾದ ಲೇಖನಗಳಿವೆ. ಅದಕ್ಕೂ ಬಿಡುವು ಮಾಡಿಕೊಂಡು ಬನ್ನಿ.

    ಪ್ರತ್ಯುತ್ತರಅಳಿಸಿ
  6. chitragaLe ishTu sundaravagiddarey nijavaada drushyaGaLu yashTu sundaravaagirabahudu...tumba sundaravasiddavey raajesh

    ಪ್ರತ್ಯುತ್ತರಅಳಿಸಿ
  7. ಅಮೀನ್,
    ಧನ್ಯವಾದಗಳು. ಆ ಜಾಗವಂತೂ ಅದ್ಭುತವಾಗಿತ್ತು.

    ಪ್ರತ್ಯುತ್ತರಅಳಿಸಿ