ಬುಧವಾರ, ಜುಲೈ 09, 2008

ಹುಲಿಯ ಬಗ್ಗೆ ಒಂದು ಜಾಹೀರಾತು!


ಈ ಜಾಹೀರಾತನ್ನು ಬಹಳ ಇಷ್ಟಪಟ್ಟು ನನ್ನ ಸಂಗ್ರಹದಲ್ಲಿ ಇರಿಸಿದ್ದೆ. ಸರಿಸ್ಕಾ ಹುಲಿ ಅಭಯಾರಣ್ಯದಲ್ಲಿ ಹುಲಿ ಕಾಣದೆ ನಾಲ್ಕೈದು ವರ್ಷಗಳಾಗುತ್ತಾ ಬಂದವು. ಮೊನ್ನೆ ಅಲ್ಲಿಗೆ ರಣಥಂಬೋರ್-ನಿಂದ ಯುವ ಗಂಡು ಹುಲಿಯೊಂದನ್ನು ತಂದು ಬಿಟ್ಟರಂತೆ. ಆಗ ಈ ಜಾಹೀರಾತು ನೆನಪಾಯಿತು. ಕೆಲವು ದಿನಗಳ ಹಿಂದೆ ’ವಕ್ರದಂತ’ದಲ್ಲಿ ಜಾಹೀರಾತುಗಳ ಬಗ್ಗೆ ಲೇಖನ ಬಂದಾಗ ಈ ಜಾಹೀರಾತು ಮತ್ತೊಮ್ಮೆ ನೆನಪಾಯಿತು. ಮೊನ್ನೆ ’ಎಲ್ಲಾ ನೋಟಗಳಾಚೆ ಇನ್ನೊಂದು ಚಿತ್ರವಿದೆ’ಯಲ್ಲಿ ಈ ಲೇಖನ ಓದಿದಾಗ ಮಗದೊಮ್ಮೆ ಈ ಜಾಹೀರಾತು ನೆನಪಾಗಿ, ವನ್ಯ ಪ್ರೇಮಿಗಳು ಯಾರಾದರು ಈ ಜಾಹೀರಾತನ್ನು ನೋಡದೇ ಇದ್ದಲ್ಲಿ, ನೋಡಿದಂತಾಗಲಿ..ಎಂದು ಇಲ್ಲಿ ಹಾಕಿದ್ದೇನೆ.

ಒಂದೇ ಶಬ್ದದ ಜಾಣ್ಮೆಭರಿತ ಪ್ರಯೋಗದಿಂದ ಈ ಜಾಹೀರಾತು ಎಷ್ಟು ಸುಂದರವಾಗಿ ಸದ್ಯದ ಪರಿಸ್ಥಿತಿಯನ್ನು ಎತ್ತಿ ಹೇಳುತ್ತಿದೆಯಲ್ಲವೇ?

5 ಕಾಮೆಂಟ್‌ಗಳು:

  1. ನಿಜ. ಶಬ್ದಗಳ ಈ ತರಹದ ಪರಿಣಾಮಕಾರಿ ಪ್ರಯೋಗಗಳಿಂದಲೇ ಜನರ ದೃಷ್ಟಿಕೋನದಲ್ಲಿ, ಮನೋಭಾವನೆಗಳಲ್ಲಿ ಬದಲಾವಣೆ ತರಲು ಸಾಧ್ಯ.

    ಪ್ರತ್ಯುತ್ತರಅಳಿಸಿ
  2. ರಾಜೇಶ್,

    ಈ ಅಭಿವ್ಯಕ್ತಿ ತುಂಬ ಚೆನ್ನಾಗಿದೆ.
    ನಿಮ್ಮ ಭಂಡಾರದಲ್ಲಿರುವ ವನ ಮತ್ತು ವನ್ಯಜೀವಿ ಸಂಪತ್ತಿನ ಬಗೆಗಿನ ವಿಚಾರ ಪ್ರಚೋದಕ ವಿಷಯಗಳನ್ನು, ಕ್ರಿಯಾಶೀಲ ವಿಚಾರಗಳನ್ನು ನಮ್ಮೊಂದಿಗೆ ಆದಷ್ಟು ಬೇಗ ಹಂಚಿಕೊಳ್ಳುತ್ತೀರೆಂದು ಆಶಿಸುತ್ತೇನೆ.
    ನಿಮ್ಮ ಪೂರ್ವಾಗ್ರಹ ರಹಿತ ಮತ್ತು ವಸ್ತುನಿಷ್ಟ ದೃಷ್ಟಿಕೋನ ನನಗೆ ಬಹಳ ಮೆಚ್ಚುಗೆ.

    ಪ್ರೀತಿಯಿಂದ
    ಸಿಂಧು

    ಪ್ರತ್ಯುತ್ತರಅಳಿಸಿ
  3. ಅನಾಮಧೇಯಜುಲೈ 11, 2008 5:36 PM

    ರಕ್ಷಕರೆ ಭಕ್ಷಕರಾಗುವ ಇ ಕಾಲದಲ್ಲಿ ಜಾಹೀರಾತು ನಿಜಾಂಶವನ್ನ ಹೇಳುತ್ತಿದೆ.
    ಮುಂದೆ ಚಿತ್ರ ನೋಡಿ ಇದು ಹುಲಿ ಎನ್ನುವ ಕಾಲವು ಬರಬಹುದು.

    ಪ್ರತ್ಯುತ್ತರಅಳಿಸಿ
  4. ಲಕ್ಷ್ಮೀ,
    ಸರಿಯಾದ ಮಾತನ್ನು ಹೇಳಿದ್ದೀರಿ. ಆದರೆ ದಿನಪತ್ರಿಕೆಗಳು/ವಾರಪತ್ರಿಕೆಗಳು ತಮ್ಮ ವ್ಯಾಪಾರಿ ಮನೋಭಾವವನ್ನು ಬದಿಗಿಟ್ಟು ಇಂತಹ ಜಾಹೀರಾತುಗಳನ್ನು ಉಚಿತವಾಗಿ ಅಥವಾ ಕಡಿಮೆ ದರದಲ್ಲಿ ಪ್ರಕಟಿಸುವ ಔದಾರ್ಯ ತೋರಿದರೆ ಇನ್ನೂ ಒಳ್ಳೆದು. ನಿಮ್ಮ ಮೊದಲ ಟಿಪ್ಪಣಿ ಅಲೆಮಾರಿಯ ತಾಣದಲ್ಲಿ. ಬರ್ತಾ ಇರಿ.

    ಸಿಂಧು,
    ಧನ್ಯವಾದ.

    ರಾಕೇಶ,
    ????????

    ಸುಧೀರ್,
    ಆ ಕಾಲ ’ಬರಬಹುದು’ ಅಲ್ಲ, ಬಂದೇ ಬರುತ್ತೆ.

    ಪ್ರತ್ಯುತ್ತರಅಳಿಸಿ