ಭಾನುವಾರ, ಅಕ್ಟೋಬರ್ 11, 2015

ಕಾಲಕಾಲೇಶ್ವರ - ಗಜೇಂದ್ರಗಡ


ಗಜೇಂದ್ರಗಡದಿಂದ ಅನತಿ ದೂರಲ್ಲಿರುವ ಬೆಟ್ಟಗಳ ಸಾಲಿನತ್ತ ಹೊರಳಿದರೆ ಕಾಲಕಾಲೇಶ್ವರನ ಸನ್ನಿಧಿ ಕಾಣಬರುವುದು. ಪೌರಾಣಿಕ ಮಹತ್ವವುಳ್ಳ ಈ ಸ್ಥಳದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿ ಪಡೆಯಬಹುದು.


ಸುಮಾರು ೧೦೦ ಮೆಟ್ಟಿಲುಗಳನ್ನೇರಿದರೆ ಮೊದಲು ಸ್ವಾಗತಿಸುವುದು ಎರಡು ಬೃಹತ್ ದೀಪಸ್ತಂಭಗಳು. ಇಲ್ಲಿನ ಪ್ರಮುಖ ಆಕರ್ಷಣೆಯೇ ಈ ದೀಪಸ್ತಂಭಗಳು. ಇವುಗಳ ಮೇಲೆ ದೀಪವನ್ನಿರಿಸುವುದೇ ದೊಡ್ಡ ಸವಾಲೆಂಬಂತೆ ಅನಿಸಿದರೆ ಆಶ್ಚರ್ಯವೇನಿಲ್ಲ.


ದೀಪಸ್ತಂಭದಿಂದ ಮುಂದೆ ಇನ್ನೂ ೩೦ ಮೆಟ್ಟಿಲುಗಳನ್ನೇರಿದರೆ ಕಾಲಕಾಲೇಶ್ವರನ ವಾಸಸ್ಥಾನವನ್ನು ತಲುಪಬಹುದು. ಬೆಟ್ಟದ ನಡುಭಾಗದಲ್ಲಿ ಪ್ರಾಕೃತಿಕವಾಗಿ ಉಂಟಾಗಿರುವ ತೆರೆದ ಗುಹೆಯಂತಿರುವ ರಚನೆಯಲ್ಲಿ ಕಾಲಕಾಲೇಶ್ವರ ನೆಲೆಸಿದ್ದಾನೆ.


ಅಲ್ಲೇ ವೀರಭದ್ರನ ಮೂರ್ತಿಯಿದೆ ಹಾಗೂ ಹಲವು ನಾಗಕಲ್ಲುಗಳನ್ನೂ ಕಾಣಬಹುದು.


ಬೆಟ್ಟದ ಮೇಲಿಂದ ಇಳಿದುಬಂದಿರುವ ಬಲವಾದ ಬೇರಿನಿಂದ ನೀರು ಎಂದಿಗೂ ಇಳಿದುಬಂದು ಸಣ್ಣ ಪುಷ್ಕರಿಣಿಯೊಂದನ್ನು ಸೃಷ್ಟಿಸಿದೆ. ನಾವು ತೆರಳಿದಾಗ ಹನಿ ಹನಿ ನೀರು ಜಿನುಗುತ್ತಿತ್ತು.


ಇಲ್ಲಿಂದ ಗಜೇಂದ್ರಗಡವನ್ನು ಸುತ್ತುವರಿದಿರುವ ಬೆಟ್ಟಗಳ ಸುಂದರ ರಚನೆಯನ್ನು ಮನಸಾರೆ ಆನಂದಿಸಬಹುದು. ಈ ಬೆಟ್ಟದ ಮೇಲೆ ಶಿವಾಜಿ ಕಟ್ಟಿದ ಕೋಟೆಯೊಂದಿದೆ.

3 ಕಾಮೆಂಟ್‌ಗಳು:

Srik ಹೇಳಿದರು...

In the first picture, the "deepasthambha"s look like minarets of a Masjid and the temple (or is it the fort) entrance in the second picture looks like a Masjid door!!

Wonderful discovery, Rajesh.

Srik

Srik ಹೇಳಿದರು...

BTW, the header picture is awesome!

Srik

ರಾಜೇಶ್ ನಾಯ್ಕ ಹೇಳಿದರು...

ಶ್ರೀಕಾಂತ್,

ಹೌದಲ್ವೇ.. ನಾನು ಗಮನಿಸಲೇ ಇಲ್ಲ ನೋಡಿ. ತಮ್ಮದೂ ಇರ್ಲಿ..ಅಂತ ಯಾರೋ ಸಾಬರು ನಂತರ ನಿರ್ಮಿಸಿರಬೇಕು. ಧನ್ಯವಾದ.