ಭಾನುವಾರ, ಮಾರ್ಚ್ 02, 2014

ಜಲಸಂಗಿಯ ಮದನಿಕೆಯರು - ೧


ಜಲಸಂಗಿಯ ಕಲ್ಮೇಶ್ವರ ದೇವಾಲಯದಲ್ಲಿ ಮದನಿಕೆಯರ ೨೯ ಅದ್ಭುತ ಕೆತ್ತನೆಗಳಿದ್ದವು ಎನ್ನಲಾಗುತ್ತದೆ. ಆದರೆ ಈಗ ೨೧ ಮಾತ್ರ ಇವೆ. ಈ ಮದನಿಕೆಯರಲ್ಲಿ ನನ್ನನ್ನು ಬಹುವಾಗಿ ಆಕರ್ಷಿಸಿದ್ದು ಶಾಸನ ಸುಂದರಿ. ಆಕೆಯ ಬಗ್ಗೆ ಪ್ರತ್ಯೇಕವಾಗಿ ಬರೆದಾಗಿದೆ. ಉಳಿದ ಮದನಿಕೆಯರ ಕೆಲವು ಚಿತ್ರಗಳನ್ನು ಇಲ್ಲಿ ಹಾಕಿದ್ದೇನೆ. ಕೆಲವು ಸುಂದರಿಯರ ಕೈ ಕಾಲುಗಳನ್ನು ಹಾನಿಗೊಳಿಸಿ ವಿರೂಪಗೊಳಿಸಲಾಗಿದೆ. ವಿಕೃತ ಮನಸ್ಸಿನ ದುಷ್ಟ ನೀಚ ತುರುಕರ ಕೆಲಸವದು. ವಿರೂಪಗೊಂಡರೂ ಈ ಶಿಲ್ಪಗಳು ಇನ್ನೂ ಅದ್ಭುತವಾಗಿ ಕಂಗೊಳಿಸುತ್ತಿವೆ. ಅದು ಈ ಮದನಿಕೆಯರನ್ನು ಕೆತ್ತಿದ ಶಿಲ್ಪಿಗಳ ಕೈಚಳಕದ ಕರಾಮತ್ತು.


ಕೈಕಾಲು ತುಂಡಾದರೂ ತೇಜಸ್ಸು ಕಡಿಮೆಯಾಗಿಲ್ಲ. ಕೈಯಲ್ಲಿ ಕುಳಿತಿದ್ದ ಹಕ್ಕಿ ವಿಕೃತ ಸಂತೋಷಕ್ಕೆ ಬಲಿಯಾಗಿದೆ.


ಅದ್ಭುತ ತಿರುವುಗಳ ಮದನಿಕೆ. ಕೇಶ ವಿನ್ಯಾಸವನ್ನು ಗಮನಿಸಿ.


ದೈವಿಕ ಸುಂದರಿ ೧.


ದೈವಿಕ ಸುಂದರಿ ೨.

2 ಕಾಮೆಂಟ್‌ಗಳು:

Ashok ಹೇಳಿದರು...

Beauties of Indian Culture. Nicely captured. Good narration and observation..

ರಾಜೇಶ್ ನಾಯ್ಕ ಹೇಳಿದರು...

ಅಶೋಕ್,
ಧನ್ಯವಾದ.