ಬುಧವಾರ, ಅಕ್ಟೋಬರ್ 09, 2013

ಮತ್ತೆ ಸಿಕ್ಕಳು ರಕ್ಷಿತಾ!!


ಈ ಹಳ್ಳಿಗೆ ೨೦೦೫ರಲ್ಲಿ ಮೊದಲ ಬಾರಿ ತೆರಳಿದ್ದೆ. ಆಗ ನನಗೆ ಮಾರ್ಗದರ್ಶಕನಾಗಿ ಬಂದಿದ್ದ ಹನ್ಮಂತುವಿನ ಮಗಳು ರಕ್ಷಿತಾಗೆ ಎರಡು ವರ್ಷ ಪ್ರಾಯ. ಎಂಟು ವರ್ಷಗಳ ಬಳಿಕ ಮತ್ತದೇ ಹಳ್ಳಿಯತ್ತ ಚಾರಣಕ್ಕೆ ತೆರಳಿದಾಗ ರಕ್ಷಿತಾ ಮತ್ತೆ ಸಿಗುತ್ತಾಳೆ ಎಂಬ ಕಲ್ಪನೆಯೇ ಇರಲಿಲ್ಲ.


ಹಳ್ಳಿಯ ಶಾಲೆ ಬಳಿ ಸುಳಿದಾಗ ಅಲ್ಲಿನ ಮೇಷ್ಟ್ರ ಪರಿಚಯವಾಯಿತು. ಇವರೊಂದಿಗೆ ಹರಟುತ್ತ ನಾನು ಎಂಟು ವರ್ಷದ ಮೊದಲು ಬಂದ ವಿಷಯ ಮಾತನಾಡುತ್ತಿರುವಾಗ, ’ರಕ್ಷಿತಾ ಇಲ್ಲೇ ಶಾಲೆಯಲ್ಲೇ ಇದ್ದಾಳೆ, ಬನ್ನಿ’ ಎಂದು ನಮ್ಮನ್ನು ಶಾಲೆಯೊಳಗೆ ಆಮಂತ್ರಿಸಿದರು. ಒಳ ಬಂದ ಕೂಡಲೇ ’ನಮಸ್ಕಾರ ಸಾರ್..’ ಎಂದು ವಿದ್ಯಾರ್ಥಿಗಳು ನಮ್ಮನ್ನು ಸ್ವಾಗತಿಸಿದರು. ಅಲ್ಲೇ ಇದ್ದಳು ರಕ್ಷಿತಾ. ಮೇಷ್ಟ್ರ ಪರವಾನಿಗೆ ಪಡೆದು ಒಂದೆರಡು ಚಿತ್ರಗಳನ್ನು ತೆಗೆದೆವು. ಈಗ ಆಕೆ ಐದನೇ ತರಗತಿಯ ವಿದ್ಯಾರ್ಥಿನಿ.

6 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

Naanu nimma blog annu regular aagi follow maduthene.
Nimma evathinna photos nodi bahala khushi aythu.

Naveen Gowda ಹೇಳಿದರು...

Liked it Rajesh.

Shadakshari ಹೇಳಿದರು...

Super.

sunaath ಹೇಳಿದರು...

ಎಂಟು ವರ್ಷಗಳ ಹಿಂದಿನ ಘಟನೆಯನ್ನು ನೆನಪಿಟ್ಟುಕೊಡಿದ್ದೀರಲ್ಲ. That is great!

ಸಿಂಧು sindhu ಹೇಳಿದರು...

super.
ee kathe nim baayalli keLidashte khushi adannE odi, nodidaagaloo aytu. :)

sindhu

ರಾಜೇಶ್ ನಾಯ್ಕ ಹೇಳಿದರು...

ಅನಾಮಧೇಯ, ನವೀನ್, ಷಡಕ್ಷರಿ, ಸುನಾಥ್, ಸಿಂಧು,
ಧನ್ಯವಾದ.