ಭಾನುವಾರ, ಜೂನ್ 09, 2013

ಇಲ್ಲೊಂದು ಕಡಲತೀರ...


೨೦೦೭ರಲ್ಲಿ ಮೊದಲ ಬಾರಿ ಈ ಸ್ಥಳಕ್ಕೆ ಬಂದಾಗ ಅಲ್ಲೊಂದು ತಾತ್ಕಾಲಿಕ ಸಣ್ಣ ಗುಡಿಸಲು (ಹಟ್ಟಿ) ಇತ್ತು. ಅದರೊಳಗೆ ಕುಳಿತು ಈ ಕಡಲತೀರವನ್ನು ಆನಂದಿಸಿದ ನೆನಪು ಎಂದಿಗೂ ಮಾಸದು.ತದನಂತರ ಈ ಕಡಲತೀರಕ್ಕೆ ಹಲವಾರು ಭೇಟಿ ನೀಡಿದ್ದು ಆಗಿದೆ. ಇನ್ನು ಮುಂದೆಯೂ ಭೇಟಿ ನೀಡಲಿದ್ದೇನೆ. ಮೊದಲ ಬಾರಿ ಭೇಟಿ ನೀಡಿದಾಗ ಆದ ಸಂತೋಷ ಪ್ರತಿ ಸಲವೂ ಪುನರಾವರ್ತನೆಯಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಇಲ್ಲಿಗೆ ಯಾರೂ ಬರದಿರುವುದು!


ಉಡುಪಿಗೆ ನನ್ನ ಗೆಳೆಯರು ಬಂದಾಗ ಅವರು ಕಡಲತೀರದ ಭೇಟಿಗೆ ಉತ್ಸುಕರಾಗಿರುವುದು ಸ್ವಾಭಾವಿಕ. ಆಗ ಅವರಲ್ಲಿ ನನ್ನ ಪ್ರಶ್ನೆ - ’ಜನರಿರುವ ಬೀಚ್ ಬೇಕೋ ಅಥವಾ ನಿರ್ಜನ ಬೀಚ್ ಬೇಕೋ’ ಎಂದು. ಇದುವರೆಗೂ ಯಾರೂ ’ಜನರಿರುವ ಬೀಚ್’ ಎಂದು ಹೇಳೇ ಇಲ್ಲ! ಹಾಗಾಗಿ ಈ ಸ್ಥಳಕ್ಕೆ ಹಲವು ಭೇಟಿ ನೀಡಿದ್ದಾಗಿದೆ. ನನ್ನೊಂದಿಗೆ ಬಂದ ಎಲ್ಲಾ ಗೆಳೆಯರೂ ಈ ಸ್ಥಳವನ್ನು ಬಹಳ ಆನಂದಿಸಿದ್ದಾರೆ ಕೂಡಾ (ಹಾಗಂತ ನಾನು ತಿಳಿದುಕೊಂಡಿದ್ದೇನೆ).


ಕರಾವಳಿಯಲ್ಲಿ ಪಶ್ಚಿಮಕ್ಕೆ ಎಲ್ಲಿ ಹೋದರೂ ಕಡಲತೀರ ಸಿಗುವುದಾದರೂ, ಸರಿಯಾದ ರಸ್ತೆ, ಸ್ವಚ್ಛ ಪರಿಸರ, ನಿರ್ಮಲ ವಾತಾವರಣ ಹಾಗೂ ಸದ್ದುಗದ್ದಲವಿಲ್ಲದ ಕಡಲತೀರ ಸಿಗುವುದು ವಿರಳ.


ಕಳೆದೊಂದು ದಶಕದಲ್ಲಿ ಅಂತಹ ಕೆಲವು ಕಡಲತೀರಗಳು ಈಗ ಪ್ರಸಿದ್ಧಿ ಪಡೆದು ಪ್ರವಾಸಿ ಸ್ಥಳಗಳಾಗಿವೆ. ಆದರೆ ಈ ಕಡಲತೀರ ಇನ್ನೂ ಪ್ರವಾಸಿಗರ ನಕ್ಷೆಯಲ್ಲಿ ಗುರುತಿಸಲ್ಪಟ್ಟಿಲ್ಲ.ಇನ್ನೂ ಹಲವಾರು ಇಂತಹ ಕಡಲತೀರಗಳಿವೆ. ಅವಿನ್ನೂ ಸ್ವಚ್ಛವಾಗಿವೆ, ಜನರ ಸದ್ದುಗದ್ದಲದಿಂದ ದೂರವಿವೆ. ಹಾಗೇ ಇದ್ದರೆ ಚೆನ್ನ.

ಮಾಹಿತಿ: ನಿಶಾಂತ್ ಭಾರದ್ವಜ್

3 ಕಾಮೆಂಟ್‌ಗಳು:

ವಿ.ರಾ.ಹೆ. ಹೇಳಿದರು...

ನನ್ನ ಆಯ್ಕೆಯೂ ಜನರಿಲ್ಲದ ಬೀಚ್ :). ಮುಲ್ಕಿ ಮಂಗಳೂರು ರಸ್ತೆಯಲ್ಲಿ ಹಿಂದೊಮ್ಮೆ ಇಂಥದ್ದೇ ನಿರ್ಜನ ಬೀಚ್ ಗೆ ಹೋಗಿದ್ದಿದೆ. ಅನಂತರ ಒಮ್ಮೆ ಹೊನ್ನಾವರದ ಬಳಿ ನಿರ್ಜನ ಬೀಚ್ ಗೆ ಹೋಗಿದ್ದೆ. ಇತ್ತೀಚೆಗೆ ಬೀಚ್ ಗೆ ಹೋಗಿದ್ದೇ ಕಡಿಮೆ. ಹೋದರೂ ಬರೀ ಜನ ಜಂಗುಳಿ ಇರುವ ಕಡೆಗಳಲ್ಲೇ. :(

Srik ಹೇಳಿದರು...

Rajesh,

I think you had guided Prashanth and me to this very same beach, and we had a wonderful time there as well.

I had suggested it to a few cousins who went to Mangalore and they came back with fond memories of this place too.

Thanks a lot!
Srik

ರಾಜೇಶ್ ನಾಯ್ಕ ಹೇಳಿದರು...

ವಿಕಾಸ್,
ಕರಾವಳಿಯುದ್ದಕ್ಕೂ ಇಂತಹ ಬಹಳ ಕಡಲತೀರಗಳಿವೆ. ಅಂತಹ ಸ್ಥಳಗಳನ್ನು ಆನಂದಿಸುವವರು ಕಡಿಮೆಯಾಗಿದ್ದಾರೆ. ಧನ್ಯವಾದ.

ಶ್ರೀಕಾಂತ್,
ಹೌದು. ಇದು ಅದೇ ಕಡಲತೀರ. ಧನ್ಯವಾದ.