ಬುಧವಾರ, ಆಗಸ್ಟ್ 05, 2009

ಈ ಹಳ್ಳಿಯ ಜಲಧಾರೆ


ಜುಲಾಯಿ ೨೦೦೪.

ನಕ್ಸಲರಿಂದ ಪೀಡಿತ ಪ್ರದೇಶದಲ್ಲಿರುವ ಈ ಜಲಧಾರೆಗೆ ಚಾರಣ ಸುಲಭ. ಆದರೆ ಮಾರ್ಗದರ್ಶಕರಿಲ್ಲದೆ ಅಸಾಧ್ಯ. ಸುಮಾರು ಒಂದು ತಾಸಿನ ಚಾರಣ. ದಟ್ಟ ಅಡವಿಯ ನಡುವೆ ಎಲ್ಲೆಲ್ಲೋ ಸಾಗಬೇಕು. ದಾರಿಯಲ್ಲಿ ಸಿಗುವ ಕೊನೆ ಮನೆಯ ಹಿರಿಯರೊಬ್ಬರು ನಮ್ಮೊಂದಿಗೆ ಬಂದರು. ತುಂಬಿ ಹರಿಯುತ್ತಿರುವ ೨ ಹಳ್ಳಗಳನ್ನು ದಾಟಿ ಚಾರಣ ದಾರಿ ಸಾಗುತ್ತದೆ. ಕೊನೆಯಲ್ಲಿ ಜಲಧಾರೆಯ ಮುಂದೆ ಬರಬೇಕಾದರೆ ಕಠಿಣ ಏರುದಾರಿಯನ್ನು ಕ್ರಮಿಸಬೇಕಾಗುತ್ತದೆ.

ಈ ಜಲಧಾರೆಯ ವೈಶಿಷ್ಟ್ಯವೆಂದರೆ ೧೦೦ ಅಡಿಗಳಷ್ಟು ಎತ್ತರದಿಂದ ಧುಮುಕಲು ಆರಂಭವಾಗುವಾಗ ಅಗಲ ಸುಮಾರು ೪೦ ಅಡಿಯಷ್ಟಿದ್ದು ಧರೆಗಪ್ಪಳಿಸಲು ಸಮೀಪವಾದಾಗ ಕೇವಲ ೫ ಅಡಿಯಷ್ಟು ಅಗಲದ ಆಕಾರವನ್ನು ತಾಳಿರುತ್ತದೆ!

ಮೇಲಿನ ಚಿತ್ರವನ್ನು ನೋಡಿದಾಗ ಸಣ್ಣ ಜಲಧಾರೆ ಎನಿಸಬಹುದು. ಆದರೆ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಹಿನ್ನೆಲೆಯಲ್ಲಿ ಬಹಳ ಎತ್ತರದಿಂದ ನೀರು ಧುಮುಕುತ್ತಿರುವುದು ಕಾಣಬರುತ್ತದೆ. ಬಿರುಸಾದ ಮಳೆ, ನಿಂತುಕೊಳ್ಳಲು ಸರಿಯಾಗಿ ಸ್ಥಳಾವಕಾಶ ಮತ್ತು ಎಸ್.ಎಲ್.ಆರ್ ಕ್ಯಾಮರಾ ಈ ಎಲ್ಲಾ ಕಾರಣಗಳಿಂದ ಚಿತ್ರಗಳು ಫ್ಲಾಪ್. ಒಂದೇ ಚಿತ್ರ ಮಾತ್ರ ನನ್ನಲ್ಲಿದೆ. ಈಗ ನಕ್ಸಲ್ ಪೀಡಿತ ಪ್ರದೇಶವಾದ ಕಾರಣ ಈ ಪರಿಸರದಲ್ಲಿ ಚಾರಣ ಕೈದು.

5 ಕಾಮೆಂಟ್‌ಗಳು:

rakesh holla ಹೇಳಿದರು...

Oh..!
Beautiful place...
I want to go this place..

ರಾಜೇಶ್ ನಾಯ್ಕ ಹೇಳಿದರು...

ರಾಕೇಶ್,
ಥ್ಯಾಂಕ್ಸ್. ಹೋಗಿ ಬನ್ನಿ. ಬೈಕಲ್ಲಿ ಸುಲಭ.

Devaraju ಹೇಳಿದರು...

ರಾಜೇಶ್,
ಈ ಜಲಪಾತ ಯಾವ ಊರಿನಲ್ಲಿದೆ ಅಂತ ಸ್ವಲ್ಪ ತಿಳಿಸಿಕೊಡುತ್ತೀರ?

Srik ಹೇಳಿದರು...

ಕೈದು ಎಂದರೆ ನಿಷೇಧ ಎಂತಲೇ?

ರಾಜೇಶ್ ನಾಯ್ಕ ಹೇಳಿದರು...

ದೇವರಾಜು,
ಈ ಜಲಪಾತ ತೊಂಬಟ್ಟು ಎಂಬ ಊರಿನಲ್ಲಿದೆ. ಬರುತ್ತಿರಿ ಇಲ್ಲಿಗೆ.

ಶ್ರೀಕಾಂತ್,
’ಕೈದು’ ಎಂದರೆ ನಿಲ್ಲಿಸಲಾಗಿದೆ ಎಂದು.