ಭಾನುವಾರ, ಮಾರ್ಚ್ 29, 2009

ಕಳಚೆ ಕಲ್ಲು!ಕಳಚೆ! ಈ ಹಳ್ಳಿಯಲ್ಲಿ ಸುಮಾರು ೮೦ ಅಡಿ ಎತ್ತರವಿರುವ ಕಲ್ಲೊಂದಿದೆ ಎಂದು ನೋಡೋಣವೆಂದು ತೆರಳಿದರೆ, ಇಳಿಜಾರಿನ ರಸ್ತೆಯಲ್ಲಿ ಎಷ್ಟು ಚಲಿಸಿದರೂ ಇಳಿಜಾರು ಮುಗಿಯುತ್ತಿರಲಿಲ್ಲ, ಕಳಚೆಯೂ ಬರುತ್ತಿರಲಿಲ್ಲ, ಕಲ್ಲೂ ಸಿಗುತ್ತಿರಲಿಲ್ಲ.


ಸುಮಾರು ೫ ಕಿ.ಮಿ.ನಷ್ಟು ಕ್ರಮಿಸಿದ ಬಳಿಕ ತಿರುವೊಂದರ ಬಳಿ ಗಗನದೆತ್ತರಕ್ಕೆ ಏರಿದಂತೆ ಪ್ರತ್ಯಕ್ಷವಾಯಿತು ಕಳಚೆ ಕಲ್ಲು.


ಈ ಸಣ್ಣ ಸ್ಥಳದಲ್ಲಿ ಅಚೀಚೆ ಬಂಡೆಗಳ ಸಮೂಹ. ರಸ್ತೆಯ ಒಂದು ಬದಿಯಲ್ಲಿ ಈ ಉದ್ದದ ಕಲ್ಲಿದ್ದರೆ ಇನ್ನೊಂದು ಬದಿಯಲ್ಲಿ ಅದಕ್ಕೆ ಸಡ್ಡು ಹೊಡೆದಂತೆ ಸುಮಾರು ೪೦ ಅಡಿ ಎತ್ತರದ ಇನ್ನೊಂದು ಕಲ್ಲು ಅಥವಾ ಬಂಡೆ. ಕಳಚೆ ಕಲ್ಲಿನ ಸುತ್ತ ಮಾನವ ಸರಪಳಿ ಮಾಡುವುದಾದರೆ ೧೭-೨೦ ಜನರು ಬೇಕಾಗಬಹುದೇನೋ.


ಕಳಚೆ ಕಲ್ಲನ್ನು ನೋಡಲು ಕಳಚೆಗೆ ತೆರಳುವುದೇ ಒಂದು ಅನುಭವ!

ಮಾಹಿತಿ: ಕೇಶವ ಹೆಗಡೆ ಕೊರ್ಸೆ

11 ಕಾಮೆಂಟ್‌ಗಳು:

Duskyenigma ಹೇಳಿದರು...

All these pictures are awesome. Wish these posts were in English for me to go thru.. Anyways nice piece of work .. Keep it up.. If you have an english blog of similar kind, pls lemme know..

Cheers

Aravind GJ ಹೇಳಿದರು...

ವಾವ್!! ಕಲ್ಲು ವಿಚಿತ್ರವಾಗಿದೆ!!

nishvictor ಹೇಳಿದರು...

Namaskaara rajesh avrge.....

matthe innondhu adbutha haagu vichitra sthaladha parichaya.....
ee sthala elli idhe antha thilisidare innu anukoola.......

Dhanyavaadhagalondhige,
Hampali

ಹಂಸಾನಂದಿ Hamsanandi ಹೇಳಿದರು...

ಬಹಳ ಚೆನ್ನಾಗಿದೆ. ಎಲ್ಲಿದೆ ಕಳಚೆ?

Parisarapremi ಹೇಳಿದರು...

ಜಲಧಾರೆಯ ಚಾರಣ ಮುಗಿಸಿಕೊಂಡು ಕಳಚೆಯ ಕಡೆಗೇ ನಡೆದು ಹೋಗಿದ್ದರೂ, ಅಲ್ಲಿ ಬಸ್ಸಿಗಾಗಿ ನಾಲ್ಕು ಗಂಟೆಗಳ ಕಾಲ ಕಾದಿದ್ದರೂ ಈ ಕಲ್ಲನ್ನು ದುರದೃಷ್ಟವಶಾತ್ ನೋಡಲೇ ಇಲ್ಲ ನಾವು. ಈಗ ಇನ್ನೊಮ್ಮೆ ಹೊರಡಬೇಕಿದೆ ನೋಡಿ.

ರಾಜೇಶ್ ನಾಯ್ಕ ಹೇಳಿದರು...

Duskyenigma,
Thanks for the nice words.

ಅರವಿಂದ್, ಹಂಪಳ್ಳಿ, ಹಂಸಾನಂದಿ,
ಧನ್ಯವಾದ.

ಪರಿಸರಪ್ರೇಮಿ ಅರುಣ್,
ಓ ಬ್ಯಾಡ್ ಲಕ್. ನಾಲ್ಕು ಗಂಟೆ ಸಮಯವಿತ್ತಾ!!? ನೋಡಬಹುದಿತ್ತು ಈ ಕಲ್ಲನ್ನು.

Annapoorna Daithota ಹೇಳಿದರು...

ಚಾರಣ ಮುಗಿಸಿ, ಬಸ್ಸಲ್ಲಿ ಕಳಚೆಯಿಂದ ವಾಪಾಸ್ ಹೊರಟಾಗ ನೋಡಿದೆ ಈ ಕಲ್ಲುಗಳನ್ನು, ಸುಂದರವಾಗಿವೆ :-)

vikramhegde ಹೇಳಿದರು...

ನಮಸ್ಕಾರ ರಾಜೇಶ್
ಬಣ್ಣ ಸ್ವಲ್ಪ ಬೇರೆಯಾದರೂ ಸುಮಾರು ಹೀಗೆ ಕಾಣುವ ಕಲ್ಲನ್ನು ರಮನಗರದಲ್ಲಿ ಕಂಡಾಗ ನಿಮ್ಮ ಈ ಪೋಸ್ಟ್ ನೆನಪಾಯಿತು. ನಾನು ಕಂಡ ಕಲ್ಲಿನ ಬಗ್ಗೆ ಈ ಪೋಸ್ಟಿನಲ್ಲಿ ವಿವರಿಸಿದ್ದೇನೆ http://vikramhegde.blogspot.com/2009/04/one-of-rocks-of-ramnagaram.html

ರಾಜೇಶ್ ನಾಯ್ಕ ಹೇಳಿದರು...

ಅನ್ನಪೂರ್ಣ,
ಸುಂದರವಾಗಿವೆ ಎಂಬುದು ಸರಿಯಾದ ಮಾತು. ಈ ಬಂಡೆಗಳು ಆ ಒಂದು ಸಣ್ಣ ಜಾಗಕ್ಕೆ ಮಾತ್ರ ಸೀಮಿತಗೊಂಡಿವೆ. ರಸ್ತೆಯಿಂದ ಕೆಳಕ್ಕೆ ಕಣಿವೆಯ ಇಳಿಜಾರಿನಲ್ಲಿ ಸ್ವಲ್ಪ ದೂರದವರೆಗೆ ಎಲ್ಲೆಲ್ಲೂ ಇಂತಹ ಬಂಡೆಗಳಿದ್ದವು.

ವಿಕ್ರಮ್,
ನಿಮ್ಮ ಪೋಸ್ಟ್ ನೋಡಿದೆ. ರಾಮನಗರದ ಕಲ್ಲು ಅದ್ಭುತವಾಗಿ ಕಾಣುತ್ತಿದೆ. ಮಾಹಿತಿಗಾಗಿ ಧನ್ಯವಾದ.

narasimhamurthy bhat ಹೇಳಿದರು...

kalache kallige eega nodalu view point madiddare..stepgalannu kattiddare..kali hinneerina soundaryakooda nodabahudu.. banni nammoorige..narasimhamurthy bhat konemane 9448105449

ರಾಜೇಶ್ ನಾಯ್ಕ ಹೇಳಿದರು...

ನರಸಿಂಹಮೂರ್ತಿ ಭಟ್,
ತಮ್ಮ ಊರಿಗೆ ಆಮಂತ್ರಿಸಿದ್ದಕ್ಕೆ ಧನ್ಯವಾದ. ಇನ್ನೆಂದಾದರೂ ಆ ಕಡೆ ಸುಳಿದರೆ ಕರೆ ಮಾಡುವೆ.