ಶನಿವಾರ, ಡಿಸೆಂಬರ್ 20, 2008

ಶಿವು


ಸಕ್ರೆಬೈಲು ಆನೆ ಬಿಡಾರದಲ್ಲಿ ಮೊನ್ನೆ (ಡಿಸೆಂಬರ್ ೧೮) ರಾತ್ರಿ 75 ವರ್ಷ ವಯಸ್ಸಿನ ಶಿವು ಹೆಸರಿನ ಈ ರಾಜ ಗಾಂಭೀರ್ಯದ ಸಲಗ ಕೊನೆಯುಸಿರೆಳೆಯಿತು. ೩ ವರ್ಷಗಳ ಹಿಂದೆ ಸಕ್ರೆಬೈಲಿಗೆ ಭೇಟಿ ನೀಡಿದ್ದಾಗ ಶಿವು ನನ್ನನ್ನು ಬಹಳ ಆಕರ್ಷಿಸಿದ್ದ. ಆತನ ಒಂದೆರಡು ಚಿತ್ರಗಳನ್ನು ತೆಗೆದಿದ್ದೆ. ಸಮೀಪ ತೆರಳಿ ಸೊಂಡಿಲಿನ ಮೇಲೆ ಕೈಯಾಡಿಸಿದ್ದೆ. ಮೈದಡವಿದ್ದೆ. ದಂತದ ಉದ್ದಕ್ಕೂ ಕೈಯಾಡಿಸಿದ್ದೆ. ಆಗಾಗ ಈ ಚಿತ್ರವನ್ನು ನೋಡಿ ಶಿವುನ ನೆನಪು ಮಾಡಿಕೊಳ್ಳುತ್ತಿದ್ದೆ. ಇನ್ನು ಆತ ಕೇವಲ ನೆನಪಾಗಿಯೇ ಉಳಿಯುತ್ತಾನೆ.

6 ಕಾಮೆಂಟ್‌ಗಳು:

sunaath ಹೇಳಿದರು...

ಎಂಥಾ ಗಂಭೀರವಾದ tusker ಇದು.ಆದರೆ, ಕಾಲನ ನಿಯಮಗಳಿಗೆ ಹೊರತಾಗಲು ಶಕ್ಯವೆ?

ಮಿಥುನ ಹೇಳಿದರು...

ನಾನೂ ಅಕ್ಟೋಬರ್ನಲ್ಲಿ ಹೋಗಿದ್ದಾಗ ಇದೇ ಆನೆಯ ಫೋಟೋ ತೆಗೆದು ಖುಷಿ ಪಟ್ಟಿದ್ದೆ, ಶ್ಶೆ .

Aravind GJ ಹೇಳಿದರು...

ಇದೊಂದು ಭಾರಿ ಮತ್ತು ಯಾವುದೇ ತಂಟೆ ಮಾಡದ ಆನೆ ಎಂದು ಕೇಳಿದ್ದೆ.

ಸುಶ್ರುತ ದೊಡ್ಡೇರಿ ಹೇಳಿದರು...

ನಾನೀ ಆನೆ ನೋಡಿಲ್ಲ. ಆದರೆ ಗೆಳೆಯನೊಬ್ಬನನ್ನು ಕಳೆದುಕೊಂಡಾಗ ಬರೆದಷ್ಟೇ ಪ್ರೀತಿಯಿಂದ ನೀವು ಬರೆದದ್ದು ಇಷ್ಟವಾಯ್ತು.

Padmini ಹೇಳಿದರು...

ಕೆಲವರು ಆನೆಯೊಂದರ ಸಾವನ್ನು ನೆನೆದು ಶೋಕಿಸುತ್ತಾರೆ. ಕೆಲವರು ದುರಾಸೆಗಾಗಿ ಕಾಡುಗಳಲ್ಲಿ ಅವುಗಳನ್ನು ಬೆನ್ನಟ್ಟಿ ಸಾಯಿಸುತ್ತಾರೆ. ಇವರೂ ಮನುಷ್ಯರೇ, ಅವರೂ ಮನುಷ್ಯರೇ. ಮತ್ತೆ ಏಕೆ ಇಷ್ಟೊಂದು ವ್ಯತ್ಯಾಸ ಎಂಬುದೇ ತಿಳಿಯುವುದಿಲ್ಲ. ಮೊನ್ನೆ NGCಯ ಕಾರ್ಯಕ್ರಮವೊಂದರಲ್ಲಿ ಅನೆಗಳ ಬರ್ಬರ ಹತ್ಯೆಯನ್ನು ತೋರಿಸಲಾಗುತ್ತಿತ್ತು. ಈ ಹತ್ಯೆ ನಡೆಸುತ್ತಿದ್ದವರು ಕಾಡುಗಳ್ಳರಲ್ಲ, ಆ ದೇಶದ ಪೋಲಿಸರು! ಚಿಕ್ಕ ಹಳ್ಳಿಗಳಲ್ಲಿ ನುಗ್ಗಿ ಹಾನಿ ಮಾಡುತ್ತಿವೆಯೆಂಬ ಕಾರಣಕ್ಕೆ ಹತ್ತಾರು ಆನೆಗಳನ್ನು helicopterಗಳಲ್ಲಿ ಕುಳಿತು ಅವುಗಳ ತಲೆಗೆ ಗುಂಡು ಹೊಡೆದು ಉರುಳಿಸಲಾಗುತ್ತಿತ್ತು. ಒಂದೆರಡು ಮರಿಗಳು ನೆಲಕ್ಕೆ ಕುಸಿದ ತಮ್ಮ ತಾಯಂದಿರ ಬಳಿ ಹೆದರಿ, ದಿಕ್ಕು ತೋಚದೇ ನಿಂತಿದ್ದರೆ helicopterನಲ್ಲಿ ಕುಳಿತವರು ಜಯದ ನಗೆ ಬೀರುತ್ತಿದ್ದರು. ಅದನ್ನು ನೋಡಿ ಆಗ ಅತ್ತಿದ್ದೆ, ನೆನಪಾದಾಗಲೆಲ್ಲ ಅಳು ಬರುತ್ತದೆ.. ಈಗಲೂ ಸಹ.

shivu ಹೇಳಿದರು...

ರಾಜೇಶ್,

ಒಂಟಿ ಸಲಗ ಎಷ್ಟು ದೊಡ್ಡದು....ಅದು ಈಗಿಲ್ಲವೆಂದು ತಿಳಿದು ಮನಸ್ಸಿಗೆ ವಿಷಾದವೆನಿಸಿತು...