ಬುಧವಾರ, ಅಕ್ಟೋಬರ್ 01, 2008

ಮಲೆನಾಡಿನ ಜಲಧಾರೆ


ದಿನಾಂಕ: ಅಗೋಸ್ಟ್ ೨೦, ೨೦೦೮.

ಕೆಲಸದ ನಿಮಿತ್ತ ಮಲೆನಾಡಿಗೆ ಹೋಗಬೇಕಿತ್ತು. ಕೆಲಸವೇನೋ ಅರ್ಧ ದಿನದ್ದು. ಉಳಿದರ್ಧ ದಿನ ಎಲ್ಲಾದರೂ ಸಣ್ಣ ಮಟ್ಟದ ಚಾರಣ ಅಥವಾ ಪ್ರಯಾಣ ಮಾಡಿ ಬರೋಣವೆಂದು ಲೇಖನಗಳ ಸಂಗ್ರಹವನ್ನು ಜಾಲಾಡಿದಾಗ ಕಣ್ಣಿಗೆ ಬಿದ್ದದ್ದು ಈ ಜಲಧಾರೆ. ಜಲಧಾರೆಗೆ ಭೇಟಿ ನಾನು ಮೊದಲೇ ನಿಗದಿ ಮಾಡಿದ್ದರಿಂದ ಉಡುಪಿಯಿಂದ ಗೆಳೆಯ ಮಾಧವರನ್ನು ಕರೆದುಕೊಂಡೇ ಹೋಗಿದ್ದೆ.


ಹಳ್ಳಿ ತಲುಪಿ ಜಲಧಾರೆಗೆ ಕೇವಲ ಇಪ್ಪತ್ತು ನಿಮಿಷದ ನಡಿಗೆ. ಎಲ್ಲೋ ಕಾಡಿನೊಳಗಿನಿಂದ ಹರಿದು ಬರುತ್ತಿದ್ದ ಹಳ್ಳ ಮೈದುಂಬಿ ಹರಿಯುತ್ತಿತ್ತು. ನೀರಿನ ಹರಿವು ತುಂಬಾ ಇದ್ದಿದ್ದರಿಂದ ಜಲಧಾರೆಯ ಎತ್ತರ ಕಡಿಮೆ ಆದಂತೆ ತೋರುತ್ತಿತ್ತು. ನೀರು ಹರಿಯುವಲ್ಲೇ ಬದಿಯಲ್ಲಿ ಕಲ್ಲಿನ ಮೇಲ್ಮೈ ಮೇಲೆ ಸಾವಕಾಶವಾಗಿ ಎಚ್ಚರಿಕೆಯಿಂದ ಇಳಿದರೆ ಕೆಳಗೆ ತಲುಪಬಹುದು.


ಮಳೆಯೂ ಆಗಾಗ ಬಿರುಸಾಗಿ ಬೀಳುತ್ತಿತ್ತು. ಎರಡು ಹಂತಗಳ ಈ ಜಲಧಾರೆ ಸುಮಾರು ೩೫ ಅಡಿ ಎತ್ತರವಿರಬಹುದು. ಬಹಳ ಮೌನ ವಾತಾವರಣವಿತ್ತು. ಮಳೆಯ ಸದ್ದು ಮತ್ತು ರಭಸದಿಂದ ಹರಿಯುವ ನದಿಯ ಭೋರ್ಗರೆತ ಮಾತ್ರ.


ಮಾಧವರಿಗೆ ನೀರು ಕೆಸರಿನಿಂದ ಕೆಂಪಾಗಿ ಹರಿಯುತ್ತಿದ್ದನ್ನು ಕಂಡು ನಿರಾಸೆ. ಆದರೆ ಜಲಧಾರೆ ಕೆಂಪಗೆ ಕಾಣಿಸಿದಾಗಲೇ ಅದೊಂದು ರೀತಿಯ ಚಂದ. ಮಳೆಯ ನಡುವೆ ಕೊಡೆಯ ಆಸರೆಯಲ್ಲಿ ನಿಂತು ಜಲಧಾರೆಯ ಅಂದವನ್ನು ಆ ಮೌನ ಕಣಿವೆಯಲ್ಲಿ ಸುಮಾರು ಹೊತ್ತು ಆನಂದಿಸಿ ನಂತರ ವಾಹನ ನಿಂತಲ್ಲಿಗೆ ಹಿಂತಿರುಗಿದೆವು.

7 ಕಾಮೆಂಟ್‌ಗಳು:

shivu K ಹೇಳಿದರು...

ನಿಮ್ಮ ಬ್ಲಾಗ್ ನೋಡಿದೆ. ನೀವು ಹೆಸರಿಗೆ ತಕ್ಕ ಅಲೇಮಾರಿಯೆ ಸರಿ! ಚೆನ್ನಾಗಿ ಊರು ಸುತ್ತುತ್ತೀರಿ. good!
ನನ್ನದು ನಿಮ್ಮ ರೀತಿಯ ಅಲೆದಾಟವೇ. ಅಲೆದಾಟ ಮಾತ್ರ ಫೋಟೊಗ್ರಪಿಗೆ ಸಂಬಂದಿಸಿದ್ದು!

ನಾನು ಈ ಬ್ಲಾಗ್ ಲೋಕಕ್ಕೆ ಹೊಸ ಸದಸ್ಯ. ನನ್ನದು ಫೋಟೊಗ್ರಫಿ ಪ್ರಪಂಚ. ನೀವು ನನ್ನ ಬ್ಲಾಗಿನೊಳಗೆ ಕಾಲಿಟ್ಟರೇ ಅಲ್ಲಿ ನಿಮಗಿಷ್ಟವಾದ ಛಾಯಾಚಿತ್ರಗಳು ಅದರ ಕುರಿತಾದ ಲೇಖನಗಳು ಸಿಗಬಹುದು. ಬನ್ನಿ.

ನನ್ನ ಬ್ಲಾಗ್ ವಿಳಾಸ:
http://chaayakannadi.blogspot.com/
ಹೊಸ ರೀತಿಯ ವಿಚಾರದ ಬರವಣಿಗೆಯ ನನ್ನ ಬ್ಲಾಗಿ ವಿಳಾಸ:
http://camerahindhe.blogspot.com/

Archu ಹೇಳಿದರು...

namaste..nimma blog atyanta sundaravaagide. karnatakaddalli ishtondu jalapaatagaLive anta gotte iralilla!!

chitragaLoo balu sogasaagive.

cheers,
archana

ಅನಾಮಧೇಯ ಹೇಳಿದರು...

ರಾಜೇಶ್,

ಹೊಟ್ಟೆಉರಿಯಾಗತ್ತೆ ನೀವು ಸುತ್ತುವುದನ್ನು ನೋಡಿ! ಮಾತ್ರವಲ್ಲ, ಬ್ಲಾಗ್ ನಂತಹ ಮಾಧ್ಯಮವನ್ನು ಅತ್ಯಂತ ಸಮರ್ಥವಾಗಿ ಹೇಗೆ ಬಳಸಿಕೊಳ್ಳಬಹುದು ಎಂಬ ಮಾಹಿತಿಯೂ ಸಿಗುತ್ತೆ. ಇನ್ನೂ ನೂರಾರು ವರ್ಷ ಹೀಗೆ ಸುತ್ಕೊಂಡು, ಬರೆದುಕೊಂಡಿರಿ
-ಶ್ರೀಪ್ರಿಯೆ

ರಾಜೇಶ್ ನಾಯ್ಕ ಹೇಳಿದರು...

ಶಿವು,
ಧನ್ಯವಾದ. ನಿಮ್ಮ ಬ್ಲಾಗುಗಳಿಗೊಂದು ಸುತ್ತು ಹಾಕಿದೆ.

ಅರ್ಚನಾ,
ಥ್ಯಾಂಕ್ಸ್. ನಿಮ್ಮ ಪಾಕ ಲೇಖನಗಳನ್ನು ಓದುತ್ತಿರುತ್ತೇನೆ.

ಅಲಕಾ,
ನೂರಾರು ವರ್ಷ!! ತುಂಬಾ ತುಂಬಾ ಥ್ಯಾಂಕ್ಸ್ ಮಾರಾಯ್ತಿ.

shivu K ಹೇಳಿದರು...

thanks Rajesh, ನನ್ನ ಬ್ಲಾಗ್ ಸುತ್ತಾಡಿದ್ದಕ್ಕೆ. ದಯವಿಟ್ಟು ನಿಮ್ಮ ಅನಿಸಿಕೆಗಳನ್ನು ನನ್ನ ಬ್ಲಾಗಿನಲ್ಲಿ ಬರೆಯಿರಿ.
ಶಿವು.ಕೆ

vijaykannantha ಹೇಳಿದರು...

photo nodi nam oor badi malgaalada nenapaayt...
nijakkoo nimma alemaariya saahasa..baraha wonderful

ರಾಜೇಶ್ ನಾಯ್ಕ ಹೇಳಿದರು...

ಶಿವು,
ಖಂಡಿತ ಬರೆಯುವೆ. ವಿವರವಾಗಿ ನಾನಿನ್ನೂ ಓದಿಲ್ಲ. ಓದಿದ ಕೂಡಲೇ ಬರೆಯುವೆ.

ಕನ್ನಂತ್ರೆ,
ನಿಮ್ಮೂರ್ನ ಮಳೆಗಾಲ ನೆನಪಾದ್ರೆ ಫೋಟೋ ಹಾಕಿದ್ದು ಸಾರ್ಥಕ ಮಾರಾಯ್ರೆ. ಧನ್ಯವಾದ.