ಬುಧವಾರ, ಆಗಸ್ಟ್ 01, 2007

ಜೋಗದಲ್ಲಿ 'ಜೋಗ'ದ ಹೊರತಾಗಿ


ಜೋಗದಲ್ಲಿ 'ಜೋಗ ಜಲಪಾತ' ಪ್ರಮುಖ ಆಕರ್ಷಣೆ. ಅಲ್ಲೇ ಆಸುಪಾಸಿನಲ್ಲಿ ಮಳೆಗಾಲದ ಅತಿಥಿಗಳಂತೆ ನಾಲ್ಕಾರು ಇತರ ಜಲಧಾರೆಗಳಿದ್ದು, ತಮ್ಮದೇ ಆದ ಸೌಂದರ್ಯ ಇವುಗಳಿಗಿದ್ದರೂ ಯಾರೂ ಅವಕ್ಕೆ ಹೆಚ್ಚಿನ ಗಮನ ಕೊಡುವುದಿಲ್ಲ. ಅಂತಹ ೪ ಜಲಧಾರೆಗಳ ಚಿತ್ರ ಇಲ್ಲಿವೆ. ಮೇಲಿರುವುದು ಜೋಗದ ಪ್ರಮುಖ ಜಲಧಾರೆಗಿಂತ ಸ್ವಲ್ಪವೇ ಮುಂದೆ ಕಣಿವೆಗೆ ಧುಮುಕುವ ಸುಂದರ ಜಲಧಾರೆ. ವೀಕ್ಷಣಾ ಸ್ಥಳದಿಂದ ಇದು ಸುಲಭದಲ್ಲೇ ಕಾಣುತ್ತದೆ. ಸುಮಾರು ೬೦೦ ಅಡಿ ಎತ್ತರವಿದ್ದು, ಮೇಲಿನ ೧೦೦-೧೫೦ ಅಡಿ ಮಾತ್ರ ಕಾಣುತ್ತದೆ. ಹಾಗೇ ಸ್ವಲ್ಪ ಮುಂದಕ್ಕೆ ನಡೆದುಕೊಂಡು ಹೋದರೆ ಮರಗಿಡಗಳ ಮರೆಯಲ್ಲಿ ಸುಮಾರು ೨೫೦ ಅಡಿ ಆಳದವರೆಗೆ ಅಸ್ಪಷ್ಟವಾಗಿ ಗೋಚರಿಸುತ್ತದೆ.


ಕಣಿವೆಯಲ್ಲಿ ಮತ್ತೂ ಸ್ವಲ್ಪ ಮುಂದೆ ಈ ಜಲಧಾರೆ ಗೋಚರಿಸುವುದು.


ಈ ಜಲಧಾರೆ ಮಂದಗಮನೆಯಂತೆ ಬಳುಕುತ್ತಾ ವೈಯ್ಯಾರದಿಂದ ಸುಮಾರು ೫೦೦ ಅಡಿ ಎತ್ತರದಿಂದ ಕಣಿವೆಯ ಮೇಲ್ಮೈಯನ್ನು ಸವರುತ್ತಾ ನಿಧಾನವಾಗಿ ಕಣಿವೆಯ ಆಳಕ್ಕೆ ಜಾರುತ್ತದೆ. ಮಹಾತ್ಮಾ ಗಾಂಧಿ ವಿದ್ಯುದಾಗರದಿಂದ ಈ ಜಲಧಾರೆಯ ನೋಟ ಲಭ್ಯ.


ಈ ಜಲಧಾರೆಯ ನೋಟ ಕೂಡಾ ಮಹಾತ್ಮಾ ಗಾಂಧಿ ವಿದ್ಯುದಾಗರದ ಸಮೀಪದಿಂದ ಲಭ್ಯ. ರಾಜಾರೋಷವಾಗಿ ಧುಮುಕುವ ಇದರ ರೌದ್ರಾವತಾರ ದೂರದಿಂದಲೇ ಚಂದ.

7 ಕಾಮೆಂಟ್‌ಗಳು:

Sushrutha Dodderi ಹೇಳಿದರು...

ಆಹ್! ಎಷ್ಟ್ ಚಂದ ಫೋಟೋಸ್.. .. ..

Aravind GJ ಹೇಳಿದರು...

ಸರಿಯಾಗೆ ಹೇಳಿದ್ರಿ!! ಜೋಗಕ್ಕೆ ಬಂದವರು ಜೋಗ ಬಿಟ್ಟು ಇನ್ನೇನು ನೋಡುವುದಿಲ್ಲ. ಚಿತ್ರಗಳು ಚೆನ್ನಾಗಿವೆ.

Unknown ಹೇಳಿದರು...

thumba chennagide.

ರಾಜೇಶ್ ನಾಯ್ಕ ಹೇಳಿದರು...

ಆಗಂತುಕ,

ಟಿಪ್ಪಣಿಗಾಗಿ ಧನ್ಯವಾದಗಳು. ತಮ್ಮ ಹೆಸರನ್ನು ತಿಳಿಸಿದ್ದಿದ್ದರೆ ಚೆನ್ನಾಗಿರುತ್ತಿತ್ತು.

ಸುಶ್ರುತ,
ಥ್ಯಾಂಕ್ಸರೀ.

ಅರವಿಂದ್,
ಜೋಗದ ಚೆಲುವು ಹಾಗಿದೆ. ಅದರ ಮುಂದೆ ಅಕ್ಕ ಪಕ್ಕದೆಲ್ಲಾ ಗೌಣ.

ಅನಂತ್,
ಇಲ್ಲಿಗೆ ಸ್ವಾಗತ. ಬರ್ತಾ ಇರಿ.

ಅನಾಮಧೇಯ ಹೇಳಿದರು...

ಸೂಪರ್ ಫೋಟೋಸ್ ಸರ್... ಜೋಗ ಮತ್ತೆ ಮೈತುಂಬಿ ಹರಿಯುತ್ತಿದೆ ಅಂತ ಸುದ್ದಿ ಬಂತು... ಮುಂದಿನ ವಾರ ಸಾಶ್ಯವಾದರೆ ಹೋಗಿ ಬರುವೆ...

ಹೋದರೆ ಜೊತೆಗೆ ಈ ಜಲಪಾತಗಳನ್ನು ನೋಡಿಬರುವೆ :)

ಬೆಂಗಳೂರು ರಘು ಹೇಳಿದರು...

Fantastic photos!!Reminded me of my numerous jog visits.IF you like waterfalls(which i guess from your blogs), please visit Garhwal region of uttarakhand. So many waterfalls, no body has measured the height and if and when done, jog might lose its tag of heighest waterfall.

ರಾಜೇಶ್ ನಾಯ್ಕ ಹೇಳಿದರು...

ಪ್ರಶಾಂತ್,
ಧನ್ಯವಾದ.

ಗುರು,
ಜೋಗಕ್ಕಿಂತ ಎತ್ತರದ ೩ ಜಲಧಾರೆಗಳು ಮೇಘಾಲಯದಲ್ಲಿವೆ. ಜೋಗಕ್ಕೆ ನಾಲ್ಕನೇ ಸ್ಥಾನ. ಬರ್ತಾ ಇರಿ ಇಲ್ಲಿಗೆ.